AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಯೋ ರೂಮ್​​​ನಲ್ಲಿ ಮೈ ಮರೆತ ಜೋಡಿಗಳು, ಬಾಗಿಲು ಮುಚ್ಚಿ ಎಂದು ಹೇಳಿ ಮಾನ ಉಳಿಸಿದ ವ್ಯಕ್ತಿ

ಓಯೋ ಅಂದ್ರೆ ಎಲ್ಲರಿಗೂ ಕೂಡ ಚಿರಪರಿಚಿತ. ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಯನ್ನು ನೀಡುತ್ತಿರುವ ಕಾರಣ ಹೆಚ್ಚಿನವರು ಓಯೋ ರೂಮ್ ಬುಕ್ ಮಾಡುತ್ತಾರೆ. ಅದರಲ್ಲಿ ಏಕಾಂತ ಬಯಸುವ ಜೋಡಿಗಳು ಓಯೋ ರೂಮ್ ಬುಕ್ ಮಾಡುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಓಯೋ ರೂಮ್ ನಲ್ಲಿ ಮೈ ಮರೆತ ಜೋಡಿಗಳು ಬಾಗಿಲು ಮುಚ್ಚುವುದನ್ನೇ ಮರೆತಿದ್ದು, ಅಲ್ಲೇ ಇದ್ದ ವ್ಯಕ್ತಿಯೂ ಕರೆದು ಬಾಗಿಲು ಹಾಕುವಂತೆ ಹೇಳಿದ್ದಾನೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಓಯೋ ರೂಮ್​​​ನಲ್ಲಿ ಮೈ ಮರೆತ ಜೋಡಿಗಳು, ಬಾಗಿಲು ಮುಚ್ಚಿ ಎಂದು ಹೇಳಿ ಮಾನ ಉಳಿಸಿದ ವ್ಯಕ್ತಿ
ವೈರಲ್​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 11, 2025 | 12:34 PM

Share

ಪ್ರೀತಿ (love) ಕುರುಡು ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುವುದನ್ನು ನೋಡಿರಬಹುದು. ಪ್ರೀತಿಯಲ್ಲಿ ಬಿದ್ದವರಿಗೆ ಈ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ. ಹೌದು, ತಮ್ಮ ಅಕ್ಕ ಪಕ್ಕ ಯಾರಿದ್ದಾರೆ ಎನ್ನುವುದನ್ನೇ ಮರೆತು ಬಿಡುತ್ತಾರೆ. ಕೆಲವೊಂದು ಪ್ರೇಮಿಗಳನ್ನು ಕಂಡಾಗ ಈ ಮಾತು ಅಕ್ಷರಷಃ ನಿಜ ಎಂದೆನಿಸುತ್ತದೆ. ಅದಲ್ಲದೇ ಏಕಾಂತ ಸಮಯ ಕಳೆಯಲು ಪಾರ್ಕ್ (park) ಸೇರಿದಂತೆ ಫಿಲಂ ಥಿಯೇಟರ್ (film theater) ಗೆ ಹೋಗುವುದನ್ನು ನೋಡಿರಬಹುದು. ಇನ್ನು ಕೆಲವರು ಓಯೋ ರೂಮ್ ಮಾಡಿ ಜೊತೆಗೆ ಸಮಯ ಕಳೆಯುತ್ತಾರೆ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಪ್ರೇಮಿಗಳಿಬ್ಬರು ಹೇಗೆ ಮೈ ಮರೆತಿದ್ದಾರೆ ಎಂಬುದು ಸ್ಪಷ್ಟವಾಗಿ ಇಲ್ಲಿ ನೋಡಬಹುದು. ಓಯೋ ರೂಮ್ (oyo room) ಬುಕ್ ಮಾಡಿ ಏಕಾಂತ ಸಮಯ ಕಳೆಯಲು ಭರದಲ್ಲಿ ಬಾಗಿಲು ಹಾಕುವುದನ್ನೇ ಮರೆತಿದ್ದಾರೆ, ಮುಂದೇನಾಯಿತು ಎಂದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.

ಹೌದು mahiiii._.17 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಓಯೋ ದಿ ಎಲೈಟ್ ಸ್ಟೇ ಹೆಸರಿನ ಹೋಟೆಲ್ ಮೆಟ್ರೋ ನಿಲ್ದಾಣದ ಬಳಿಯಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಓಯೋ ರೂಮ್ ಒಳಗೆ ಇದ್ದ ಜೋಡಿಗಳು ಬಾಗಿಲು ಹಾಕುವುದನ್ನೇ ಮರೆತಿದ್ದಾನೆ. ಮಂಚದ ಮೇಲೆ ಯುವಕನು ಮಲಗಿದ್ದು, ಯುವತಿಯೊಬ್ಬಳು ಅಲ್ಲೇ ಓಡಾಡುತ್ತಿದ್ದಾಳೆ. ಬಾಗಿಲು ತೆರೆದಿದ್ದು, ಇದನ್ನು ನೋಡಿದ ಮೆಟ್ರೋ ನಿಲ್ದಾಣದಲ್ಲಿದ್ದ ವ್ಯಕ್ತಿಯೂ ಆತನನ್ನು ಕರೆದು ಬಾಗಿಲು ಹಾಕುವಂತೆ ಹೇಳಿದ್ದಾನೆ. ಮಂಚದ ಮೇಲೆ ಮಲಗಿದ್ದ ಯುವಕನು ನಗುತ್ತಾ ಓಡೋಡಿ ಬಂದು ರೂಮ್ ಬಾಗಿಲು ಮುಚ್ಚುವುದನ್ನು ನೋಡಬಹುದು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಭಾರತದ ಮೊದಲ ಕಾಫಿ ತೋಟ ತಾಣದ ಕಥೆಯನ್ನು ಹಂಚಿಕೊಂಡ ಆನಂದ್‌ ಮಹೀಂದ್ರಾ
Image
ಕಾಲೇಜು ಪ್ರೊಫೆಸರ್‌ ಎನರ್ಜಿಗೆ ಫಿದಾ ಆದ ವಿದ್ಯಾರ್ಥಿಗಳು
Image
ಬೆಂಗಳೂರಿನಲ್ಲಿ ಆಟೋ ಬುಕ್ ಮಾಡುವ ಟಿಪ್ಸ್ ನೀಡಬೇಕು
Image
ಒಂದೇ ಮಂಟಪದಲ್ಲಿ, ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರನ್ನು ಮದುವೆಯಾದ ವ್ಯಕ್ತಿ

ಇದನ್ನೂ ಓದಿ : ಶ್ವಾನದ ಮುಖವಾಡ ಧರಿಸಿ ಎಣ್ಣೆ ಖರೀದಿಸಲು ಮದ್ಯದ ಅಂಗಡಿಗೆ ಬಂದ ವ್ಯಕ್ತಿ, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ :

View this post on Instagram

A post shared by MAHI (@mahiiii._.17)

ಈ ವಿಡಿಯೋ ಈಗಾಗಲೇ ಮೂವತ್ತೋಂಭತ್ತು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಕಾಮೆಂಟ್ ಗಳನ್ನು ಮಾಡಿದ್ದಾರೆ. ಬಳಕೆದಾರರೊಬ್ಬರು, ‘ಮೊದಲು ಬಾಗಿಲು ಹಾಕಿಕೋ. ಹೇಗೂ ಹೋಟೆಲ್‌ನವರೇ ವಿಡಿಯೋ ಲೀಕ್ ಮಾಡುತ್ತಾರೆ ಎಂದಿದ್ದಾರೆ. ಮತ್ತೊಬ್ಬರು, ಈ ಸಹೋದರ ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾನೆ. ಇಲ್ಲದಿದ್ದರೆ ಆಕೆಯ ಮರ್ಯಾದೆ ಹರಾಜಾಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನೀವು ಮೂರ್ಖರಾ? ನೀವು ಬಾಗಿಲು ಮುಚ್ಚಿ ಹೇಳುವುದೇನು ಸರಿಯೇ. ಆದರೆ ಅದರ ವೀಡಿಯೊ ಮಾಡಿ ಅಪ್‌ಲೋಡ್ ಮಾಡುವುದರಿಂದ ನಿಮಗೆ ಏನು ಸಿಕ್ಕಿತು? ಎಂದು ಪ್ರಶ್ನೆ ಮಾಡಿದ್ದಾರೆ. ಮಗದೊಬ್ಬರು, ‘ಈ ಸಹೋದರ ನಿಜಕ್ಕೂ ಸಮಾಜ ಸೇವೆ ಮಾಡುತ್ತಿದ್ದಾನೆ’ ಎಂದಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ