ಶಿವಾಜಿ ಸಿನಿಮಾ ಈಗಲೇ ನಿಲ್ಲಿಸಿ: ರಿಷಬ್ ಶೆಟ್ಟಿಗೆ ವಾಟಾಳ್ ನಾಗರಾಜ್ ವಾರ್ನಿಂಗ್
ನಟ ರಿಷಬ್ ಶೆಟ್ಟಿ ಅವರು ಶಿವಾಜಿ ಬಯೋಪಿಕ್ನಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಸಿನಿಮಾ ಮಾಡಬಾರದು ಎಂದು ವಾಟಾಳ್ ನಾಗರಾಜ್ ಅವರು ಎಚ್ಚರಿಕೆ ನೀಡಿದ್ದಾರೆ. ಕೋಲಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ಒಂದು ವೇಳೆ ಶಿವಾಜಿ ಸಿನಿಮಾ ಬಿಡುಗಡೆಯಾದರೆ ಪ್ರತಿಭಟನೆ ಆಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ರಿಷಬ್ ಶೆಟ್ಟಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ. ಕಾಂತಾರ ಸಿನಿಮಾದಿಂದ ಪಡೆದ ಯಶಸ್ಸನ್ನು ಶಿವಾಜಿ ಸಿನಿಮಾದಿಂದ (Shivaji Biopic) ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ವಾರ್ನಿಂಗ್ ಕೊಟ್ಟಿದ್ದಾರೆ. ‘ರಿಷಬ್ ಶೆಟ್ಟಿ (Rishab Shetty) ಅವರಿಗೆ ಕಾಂತಾರ ಸಿನಿಮಾದಿಂದ ಕೀರ್ತಿ ಬಂತು. ಅದು ಸಂತೋಷ. ಆದರೆ ಈಗ ಈ ನಾಡಿನ ಅನೇಕ ಮಹನೀಯರನ್ನು ಬಿಟ್ಟು ಶಿವಾಜಿಯ ಪಾತ್ರ ಮಾಡುತ್ತೇನೆ ಎಂದು ಹೊರಟಿರುವುದು ಸರಿಯಲ್ಲ. ಅದನ್ನು ನಿಲ್ಲಿಸೋದು ಒಳ್ಳೆಯದು. ಸಿನಿಮಾ ಬಂದರೆ ರಾಜ್ಯದಲ್ಲಿ ವ್ಯತಿರಿಕ್ತ ಆಗುತ್ತದೆ. ಈಗ ಎಷ್ಟು ಚಿತ್ರೀಕರಣ ಮಾಡಿದ್ದೀರೋ ಇಷ್ಟಕ್ಕೇ ನಿಲ್ಲಿಸೋದು ಉತ್ತಮ. ಮುಂದುವರಿದರೆ ಪ್ರತಿಭಟನೆ, ಗಲಾಟೆ ಆಗುತ್ತದೆ. ಮೊದಲೇ ಬಹಳ ಗೌರವದಿಂದ ಹೇಳುತ್ತಿದ್ದೇನೆ’ ಎಂದಿದ್ದಾರೆ ವಾಟಾಳ್ ನಾಗರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.