AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ಕಿಡಿಗೇಡಿಗಳ‌ ಕಿತಾಪತಿ; ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿ

ದ್ವೇಷಕ್ಕೆ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ ದಾವಣಗೆರೆ(Davanagere) ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ನಡೆದಿದೆ. ಕಳೆದ ವರ್ಷ ಇದೇ ತೋಟದಿಂದ ಬರೊಬ್ಬರಿ ಎಳು‌ ಲಕ್ಷ ರೂಪಾಯಿ ಆದಾಯ ಬಂದಿತ್ತು. ಈ ವರ್ಷ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೊಟ್ಟೆಕಿಚ್ಚಿನಿಂದ ಫಲಕ್ಕೆ ಬಂದ ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದೆ.

ದಾವಣಗೆರೆ: ಕಿಡಿಗೇಡಿಗಳ‌ ಕಿತಾಪತಿ; ಲಕ್ಷಾಂತರ ರೂಪಾಯಿ ಮೌಲ್ಯದ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿ
ದಾವಣಗೆರೆಯಲ್ಲಿ ಸಾವಿರಾರು ಅಡಿಕೆ ಮರಗಳಿಗೆ ಬೆಂಕಿಯಿಟ್ಟ ಕಿಡಿಗೇಡಿಗಳು
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on:Feb 18, 2024 | 11:12 AM

Share

ದಾವಣಗೆರೆ, ಫೆ.18: ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ಹಾಗೂ ಬಾಳೆ ಗಿಡಗಳು ಬೆಂಕಿಗಾಹುತಿಯಾದ ಘಟನೆ ದಾವಣಗೆರೆ(Davanagere) ತಾಲೂಕಿನ ಹುಣಸಡಕಟ್ಟೆ ಗ್ರಾಮದಲ್ಲಿ ನಡೆದಿದೆ. ವಿಶ್ವನಾಥ್​ ಎಂಬುವವರಿಗೆ ಸೇರಿದ ತೋಟ ಇದಾಗಿದ್ದು,  1,300 ಅಡಿಕೆ ಹಾಗೂ 1,400 ಬಾಳೆ ಗಿಡಗಳು ಸುಟ್ಟು ಭಸ್ಮವಾಗಿದೆ. ರೈತನ ಕುಟುಂಬ ಗ್ರಾಮದಲ್ಲಿ ಇಲ್ಲದನ್ನ ತಿಳಿದ ಕಿಡಿಗೇಡಿಗಳು, ದ್ವೇಷದಿಂದ ಬೆಂಕಿ ಇಟ್ಟ ಶಂಕೆ ವ್ಯಕ್ತವಾಗಿದೆ. ಇನ್ನು ಸ್ಥಳೀಯರು ಸೇರಿ ಅರ್ಧ ಅಡಿಕೆ ಹಾಗೂ ಬಾಳೆ ತೋಟವನ್ನು ಬೆಂಕಿಯಿಂದ ಉಳಿಸಿದ್ದಾರೆ.

ಫಲಕ್ಕೆ ಬಂದ ಅಡಿಕೆ ಮರಗಳನ್ನ ಬೆಂಕಿ ಇಟ್ಟ ದುಷ್ಕರ್ಮಿಗಳು

ಇನ್ನು ಕಳೆದ ವರ್ಷ ಇದೇ ತೋಟದಿಂದ ಬರೊಬ್ಬರಿ ಎಳು‌ ಲಕ್ಷ ರೂಪಾಯಿ ಆದಾಯ ಬಂದಿತ್ತು. ಈ ವರ್ಷ ಬೆಂಕಿಗೆ ಬಲಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಹೊಟ್ಟೆಕಿಚ್ಚಿನಿಂದ ಫಲಕ್ಕೆ ಬಂದ ಅಡಿಕೆ ಮರಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಶಂಕೆಯಿದ್ದು, ಈ ಕುರಿತು ರೈತ ವಿಶ್ವನಾಥ್​ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು‌ ನೀಡಿದ್ದು, ಪೊಲೀಸರು ತನಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ದ್ವೇಷಕ್ಕೆ ಬಲಿಯಾದ ಅಡಿಕೆ ಗಿಡಗಳು: ಹಗಲಿರುಳು ಬೆಳೆಸಿದ್ದ ಬೆಳೆ ಬೆಂಕಿಗಾಹುತಿ: ಕಂಗಾಲಾದ ರೈತ

ಹಸು ಮೇಲೆ ಚಿರತೆ ದಾಳಿ, ಹಸು ಸಾವು

ತುಮಕೂರು: ಜಿಲ್ಲೆಯ ಶಿರಾ ತಾಲೂಕಿನ ಕಾರ್ಪೆಹಳ್ಳಿಯಲ್ಲಿ ಚಿರತೆ ದಾಳಿಗೆ ಹಸು ಬಲಿಯಾದ ಘಟನೆ ನಡೆದಿದೆ. ಗೋಪಾಲಪ್ಪ ಎಂಬುವರಿಗೆ ಸೇರಿದ ಹಸು ಇದಾಗಿದ್ದು, ಕಳೆದ ತಿಂಗಳಷ್ಟೇ ಹಸುವನ್ನ ಖರೀದಿಸಲಾಗಿತ್ತು. ತಡರಾತ್ರಿ ಕೊಟ್ಟಿಗೆಗೆ ನುಗಿದ್ದ ಚಿರತೆ ದಾಳಿಗೆ ಹಸು ಸಾವನ್ನಪ್ಪಿದೆ. ಇದರಿಂದ ಗ್ರಾಮಸ್ಥರು ಕಂಗಾಲಾಗಿದ್ದು, ಸ್ಥಳಕ್ಕೆ ಶಿರಾ ವಲಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Sun, 18 February 24

Follow Us
Basavaraj Doddamani
Basavaraj Doddamani

ಬಸವರಾಜ ದೊಡ್ಡಮನಿ ಟಿವಿ9 ಕನ್ನಡ ವರದಿಗಾರರಾಗಿದ್ದು, ವಿಶೇಷವಾಗಿ ದಾವಣಗೆರೆ ಜಿಲ್ಲಾ ಪ್ರಾದೇಶಿಕ ಸುದ್ದಿಗಳ ಮೇಲೆ ಕೇಂದ್ರೀಕರಿಸುತ್ತಾರೆ.

Read More
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ನೀಟ್ ಹಗರಣದ ವಿರುದ್ಧ ಬೀದಿಗಿಳಿದ ಸಾವಿರಾರು ಹಸ್ತ ಪಡೆ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ಭಕ್ತರು ಮತ್ತು ಭಗವಂತನ ನಡುವೆ ವ್ಯವಹಾರದ ಸ್ಥಳ ದೇವಾಲಯ: ಡಿಕೆಶಿ
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ರಾತ್ರಿ ಹೊತ್ತು ಮನೆಯಲ್ಲಿರಲಾಗದೆ ಗೋಳು ತೋಡಿಕೊಂಡ ನಿವಾಸಿಗಳು
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ನಟಿ ಶ್ರುತಿ ಪ್ರಕಾಶ್‌ಗೆ ಡೈಮಂಡ್ ಉಂಗುರ ತೊಡಿಸಿ ಪ್ರಪೋಸ್ ಮಾಡಿದ ಕರಣ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕಾಣೆಯಾದ ಹುಡುಗಿಯನ್ನು ಹುಡುಕಲು ಗಾಡಿಯಲ್ಲಿ ಡೀಸೆಲ್ ಇಲ್ಲ ಎಂದ ಪೊಲೀಸ್
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
ಕೈದಿಗಳಿಗೆ ಅಲೋಕ್ ಕುಮಾರ್ ಬಿಗ್ ಶಾಕ್: ಜೈಲುಗಳಲ್ಲಿ ಭಾರಿ ಬದಲಾವಣೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
3 ದಿನಗಳಿಂದ ವಿದ್ಯುತ್​​ ಕಡಿತ: ಹೆಸ್ಕಾಂ ವಿರುದ್ಧ ಸಾರ್ವಜನಿಕರ ಪ್ರತಿಭಟನೆ
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಹಿರಿಯೂರು ಉಪಚುನಾವಣೆ ಮೇಲೆ ಜೆಡಿಎಸ್​​ ಕಣ್ಣು: ದಳಪತಿಗಳ ಲೆಕ್ಕಾಚಾರವೇನು?
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಗುರು ಸಂಚಾರದಿಂದ ಮಿಥುನ ರಾಶಿಯವರಿಗೆ ಆರ್ಥಿಕ ವೃದ್ಧಿ ಮತ್ತು ಶುಭ ಯೋಗ ಶುರು
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!
ಪ್ರವಾಸಿಗರ ಕ್ಯಾಮೆರಾಗೆ ಬಿಂದಾಸ್ ಪೋಸ್ ನೀಡಿದ ಜೋಡಿ ಹುಲಿಗಳು!