ನಾನು ಮಾಡಿದ ಮೈದಾಹಿಟ್ಟಿನ ಸ್ವೀಟ್ ಅಪ್ಪಾಜಿಗೆ ಬಹಳ ಇಷ್ಟವಾಗುತಿತ್ತು: ಲಕ್ಷ್ಮಿ, ಡಾ ರಾಜ್ಕುಮಾರ್ ಮಗಳು
ಡಾ ರಾಜ್ ಕುಮಾರ್ ಅವರನ್ನು ನೋಡಲು ಜನ ಹಾತೊರೆಯುತ್ತಿದ್ದರು, ಅವರ ಮಕ್ಕಳಾಗಿ ಹುಟ್ಟಿದ ನೀವೇ ಅದೃಷ್ಟವಂತರು ಅಂತ ಜನ ಹೇಳುತ್ತಾರೆ ಎಂದ ಲಕ್ಷ್ಮಿ, ಅದು ನಿಜ ನಾವು ಅವರ ಮಕ್ಕಳಾಗಿ ಹುಟ್ಟಿದ್ದು ನಮ್ಮ ಪಾಲಿನ ಭಾಗ್ಯ, ಅಪ್ಪಾಜಿ ಅಭಿಮಾನಿಗಳ ಮೇಲೆ ಹೆಚ್ಚು ಪ್ರೀತಿ ಇಟ್ಟುಕೊಂಡಂತೆ ನಮಗೂ ಅಭಿಮಾನಿಗಳೆಂದರೆ ಬಹಳ ಇಷ್ಟ, ಅವರಲ್ಲೇ ಅಪ್ಪಾಜಿ ಮತ್ತು ಅಮ್ಮನನ್ನು ನೋಡುತ್ತೇವೆ ಎಂದು ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 12: ಹತ್ತೊಂಬತ್ತು ವರ್ಷಗಳ ಹಿಂದೆ ಇದೇ ದಿನದಂದು ಕನ್ನಡಿಗರನ್ನು ಅಗಲಿದ ಡಾ ರಾಜ್ಕುಮಾರ್ ಅವರಿಗೆ ಮಗಳು ಲಕ್ಷ್ಮಿ ಮೈದಾಹಿಟ್ಟಿನಿಂದ (all-purpose flour) ಮಾಡುತ್ತಿದ್ದ ಸಿಹಿತಿಂಡಿ ಬಹಳ ಇಷ್ಟವಾಗುತ್ತಿದ್ದ ಕಾರಣ ಅವರ ಹುಟ್ಟುಹಬ್ಬ, ಮತ್ತು ಪಾರ್ವತಮ್ಮ ರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರ ಬರ್ತ್ಡೇಗಳಿಗೂ ಲಕ್ಷ್ಮಿ ಅವರು ಅದೇ ಸ್ವೀಟ್ ಮಾಡುತ್ತಿದ್ದರಂತೆ. ಸಂಗೀತಾ ಕ್ಯಾಸೆಟ್ಸ್ ಸಂಸ್ಥೆಯ ಮಾಲೀಕ ಮಹೇಶ್ ಅವರ ಪತ್ನಿಯವರು ಲಕ್ಷ್ಮಿಯವರಿಗೆ ಆ ಸ್ವೀಟ್ ಮಾಡೋ ವಿಧಾನವನ್ನು ಹೇಳಿಕೊಟ್ಟಿದ್ದರಂತೆ. ಅಪ್ಪಾಜಿ ಅವರ ಜನಪ್ರಿಯತೆ ತಾವು ಮದ್ರಾಸ್ನಿಂದ ಬೆಂಗಳೂರಿಗೆ ಶಿಫ್ಟ್ ಆದ ನಂತರವೇ ಗೊತ್ತಾಗಿದ್ದು ಎಂದು ಲಕ್ಷ್ಮಿ ಹೇಳುತ್ತಾರೆ.
ಇದನ್ನೂ ಓದಿ:‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್ಕುಮಾರ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ