‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್ಕುಮಾರ್
ರಾಜ್ಕುಮಾರ್ ಅವರಿಗೆ ಸಿಕ್ಕ ಗೌರವಗಳು ಹಲವು. ಅವರಿಗೆ ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ರೀತಿಯ ಗೌರವಗಳು ಸಂದಾಯ ಆಗಿವೆ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾ ನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು.ಈ ಬಗ್ಗೆ ಅವರು ಒಮ್ಮೆ ಮಾತನಾಡಿದ್ದರು.
![‘ನಾನು ಎಮ್ಮೆ ಕಾದವನು ಎಂಎ ಮಾಡಿದವನಲ್ಲ, ನನಗೇಕೆ ಡಾಕ್ಟರೇಟ್’ ಎಂದು ಕೇಳಿದ್ದ ರಾಜ್ಕುಮಾರ್](https://images.tv9kannada.com/wp-content/uploads/2024/10/rajkumar-2.jpg?w=1280)
ರಾಜ್ಕುಮಾರ್ ಕೇವಲ ರಾಜ್ಕುಮಾರ್ ಅಲ್ಲ. ಅವರು ವರನಟ ಡಾಕ್ಟರ್ ರಾಜ್ಕುಮಾರ್. ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ. ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದರೂ ರಾಜ್ಕುಮಾರ್ಗೆ ಅಹಂ ಇರಲಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದಿದ್ದರು. ಅವರು ಒಮ್ಮೆ ತಮಗೆ ಸಿಕ್ಕ ಗೌರವ ಡಾಕ್ಟರೇಟ್ ಬಗ್ಗೆ ಮಾತನಾಡಿದ್ದರು. ಅದನ್ನು ನನಗೇಕೇ ನೀಡಿದಿರಿ ಎಂದು ವಿಶ್ವ ವಿದ್ಯಾನಿಲಯದವರಿಗೆ ಕೇಳಿದ್ದರಂತೆ.
ರಾಜ್ಕುಮಾರ್ ಅವರಿಗೆ ಸಿಕ್ಕ ಗೌರವಗಳು ಹಲವು. ಅವರಿಗೆ ಪದ್ಮ ಭೂಷಣ, ದಾದಾ ಸಾಹೇಬ್ ಫಾಲ್ಕೆ ರೀತಿಯ ಗೌರವಗಳು ಸಂದಾಯ ಆಗಿವೆ. ಇದರ ಜೊತೆಗೆ ಮೈಸೂರು ವಿಶ್ವವಿದ್ಯಾ ನಿಲಯದಿಂದ ಗೌರವ ಡಾಕ್ಟರೇಟ್ ನೀಡಲಾಗಿತ್ತು. ಇದನ್ನು ರಾಜ್ಕುಮಾರ್ ಅವರು ಪ್ರೀತಿಯಿಂದ ಸ್ವೀಕರಿಸಿದ್ದರು. ಅವರು ಒಮ್ಮೆ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಈ ಬಗ್ಗೆ ಮಾತನಾಡಿದ್ದರು.
‘ನಾನು ವಿದ್ಯಾವಂತವನಲ್ಲ. ಡಿಗ್ರೀ ಪಡೆದವನಲ್ಲ. ಮೈಸೂರು ವಿಶ್ವವಿದ್ಯಾನಿಲಯದವರು ನನಗೆ ಡಾಕ್ಟರೇಟ್ ಕೊಟ್ಟರು. ಅಲ್ಲಿಯೇ ನಾನು ಕೇಳಿದೆ, ಏನು ನೋಡಿ ನನಗೆ ಡಾಕ್ಟರೇಟ್ ಕೊಡ್ತಿದೀರಿ ಎಂದು ಕೇಳಿದ್ದೆ. ನಾನು ಎಂಎ ಪಾಸ್ ಮಾಡಿದ್ದೀನಾ? ಹಳ್ಳಿಯಲ್ಲಿದ್ದಾಗ ಎಮ್ಮೆ ಮೇಯಿಸುತ್ತಿದ್ದೆ ಎಂದೆ ಎಂಬುದಾಗಿ ಅವರಿಗೆ ಹೇಳಿದ್ದೆ’ ಎಂದಿದ್ದರು ಅವರು.
ರಾಜ್ಕುಮಾರ್ ಅವರಿಗೆ ರಸಿಕರ ರಾಜ ಎನ್ನುವ ಬಿರುದು ಕೂಡ ಇದೆ. ಈ ಬಗ್ಗೆಯೂ ಮಾತನಾಡಿದ್ದರು. ‘ರಸಿಕರಿಗೆ ನಾನು ರಾಜನಂತೆ. ಎಲ್ಲಾ ನೀವು ಕೊಟ್ಟ ಹೆಸರು, ಎಲ್ಲಾ ನೀವು ಕೊಟ್ಟ ಆಸ್ತಿ, ನೀವು ಕೊಟ್ಟ ಕರುಣೆ. ಇದರ ವಿನಃ ರಾಜ್ಕುಮಾರ್ಗೆ ಏನು ಗೊತ್ತಾಗಲು ಸಾಧ್ಯವಿಲ್ಲ’ ಎಂದು ರಾಜ್ಕುಮಾರ್ ಅವರು ಈ ಮೊದಲು ಹೇಳಿದ್ದರು.
View this post on Instagram
ರಾಜ್ಕುಮಾರ್ ಅವರು ಸರಳತೆಗೆ ಮತ್ತೊಂದು ಹೆಸರು ಆಗಿದ್ದರು. ಅವರು ಯಾವಾಗಲೂ ಬಿಳಿ ಶರ್ಟ್, ಬಿಳಿ ಪಂಚೆ ಧರಿಸುತ್ತಿದ್ದರು. ಅಭಿಮಾನಿಗಳನ್ನು ಕಂಡರೆ ಅವರು ತೋರಿಸುತ್ತಿದ್ದ ಪ್ರೀತಿ ಅಪಾರ. ಅವರ ಮನೆಗೆ ಯಾರೇ ಬಂದರೂ ರಾಜ್ಕುಮಾರ್ ಅತಿಯಾಗಿ ಗೌರವಿಸುತ್ತಿದ್ದರು.
ಇದನ್ನೂ ಓದಿ: ವೀರಪ್ಪನ್ ಜೊತೆ ಇದ್ದು ಮರಳಿ ಬಂದಾಗ ರಾಜ್ಕುಮಾರ್ಗೆ ಸಿಕ್ಕ ಸ್ವಾಗತ ಹೇಗಿತ್ತು? ಇಲ್ಲಿದೆ ಹಳೆಯ ವಿಡಿಯೋ
ರಾಜ್ಕುಮಾರ್ ಅವರು ಜನಿಸಿದ್ದು 1929ರಲ್ಲಿ. ಮರಣ ಹೊಂದಿದ್ದು 2006ರಲ್ಲಿ. ಅವರ ಸರಳತೆ ಈಗಲೂ ಅನೇಕರಿಗೆ ಮಾದರಿ. ಅವರ ಮಾತುಗಳಲ್ಲಿ ಎಂದಿಗೂ ಗರ್ವ ಕಾಣಿಸಿಲ್ಲ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗುತ್ತಾರೆ. ಅವರ ಸಿನಿಮಾಗಳು ಈಗಲೂ ಅನೇಕರಿಗೆ ಆದರ್ಶದಾಯಕವಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.