ವೀರಪ್ಪನ್ ಜೊತೆ ಇದ್ದು ಮರಳಿ ಬಂದಾಗ ರಾಜ್ಕುಮಾರ್ಗೆ ಸಿಕ್ಕ ಸ್ವಾಗತ ಹೇಗಿತ್ತು? ಇಲ್ಲಿದೆ ಹಳೆಯ ವಿಡಿಯೋ
2000ನೇ ಇಸ್ವಿಯ ಜುಲೈ 30ರಂದು ರಾಜ್ಕುಮಾರ್ ಅವರು ಗಾಜನೂರಿನಲ್ಲಿ ಇದ್ದರು. ಅವರು ಗಾಜನೂರಿನ ಮನೆಯಲ್ಲಿ ಇರುವಾಗ ರಾತ್ರಿ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದರು. ಅವರು 108 ದಿನ ಕಸ್ಟಡಿಯಲ್ಲಿ ಇದ್ದರು. ಅದೇ ವರ್ಷ ನವೆಂಬರ್ 15ರಂದು ಅವರನ್ನು ಬಿಡಲಾಯಿತು.
ಕಾಡುಗಳ್ಳ ವೀರಪ್ಪನ್ ನಮ್ಮ ವರನಟ ಡಾಕ್ಟರ್ ರಾಜ್ಕುಮಾರ್ ಅವರನ್ನು ಅಪಹರಿಸಿಬಿಟ್ಟಿದ್ದರು. ಹಲವು ದಿನಗಳ ಕಾಲ ಕಾಡಲ್ಲಿ ಅವರು ಇದ್ದರು. ಅವರಿಗೆ ವೀರಪ್ಪನ್ ಏನೂ ಮಾಡಿರಲಿಲ್ಲ ಎಂಬುದು ಖುಷಿಯ ವಿಚಾರ. ಬೆಂಗಳೂರಿಗೆ ರಾಜ್ಕುಮಾರ್ ಬಂದಾಗ ಪರಿಸ್ಥಿತಿ ಹೇಗಿತ್ತು? ಈ ಅಪರೂಪದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರ ಖುಷಿಯ ಪಾರವನ್ನು ಕಂಟ್ರೋಲ್ ಮಾಡಲು ಯಾರಿಗೂ ಸಾಧ್ಯವೇ ಇರಲಿಲ್ಲ.
2000ನೇ ಇಸ್ವಿಯ ಜುಲೈ 30ರಂದು ರಾಜ್ಕುಮಾರ್ ಅವರು ಗಾಜನೂರಿನಲ್ಲಿ ಇದ್ದರು. ಅವರು ಗಾಜನೂರಿನ ಮನೆಯಲ್ಲಿ ಇರುವಾಗ ರಾತ್ರಿ ಅವರನ್ನು ವೀರಪ್ಪನ್ ಕಿಡ್ನ್ಯಾಪ್ ಮಾಡಿದ್ದರು. ಅವರು 108 ದಿನ ಕಸ್ಟಡಿಯಲ್ಲಿ ಇದ್ದರು. ಅದೇ ವರ್ಷ ನವೆಂಬರ್ 15ರಂದು ಅವರನ್ನು ಬಿಡಲಾಯಿತು. 100+ ದಿನ ಅವರು ಟೆನ್ಷನ್ನಲ್ಲಿಯೇ ಇದ್ದರು.
108 ದಿನಗಳು ರಾಜ್ಕುಮಾರ್ ಅವರು ವೀರಪ್ಪನ್ ಜೊತೆ ಕಾಡಿನಲ್ಲಿ ಇದ್ದರು. ಕಾಡುಗಳಲ್ಲಿ ಸುತ್ತಾಟ ನಡೆಸಿದ್ದರು. ರಾಜ್ಕುಮಾರ್ ಕಾಡಿನಲ್ಲಿ ಇದ್ದಂಥ ಸಂದರ್ಭದ ವಿಡಿಯೋಗಳು ಮಾಧ್ಯಮಗಳಲ್ಲಿ ಪ್ರಸಾರ ಕಾಣುತ್ತಿದ್ದವು. ಅವರು ಜೈಲಿನಲ್ಲಿ ಇದ್ದಷ್ಟು ದಿನ ಇಡೀ ಕರ್ನಾಟಕ ಆತಂಕ ಒಳಗಾಗಿತ್ತು. ಥಿಯೇಟರ್ಗಳು ಬಂದ್ ಆಗಿದ್ದವು. ಸರ್ಕಾರದ ಮೇಲೆ ಸಾಕಷ್ಟು ಒತ್ತಡ ಇತ್ತು.
ಬಿಡುಗಡೆ ಬಳಿಕ ರಾಜ್ಕುಮಾರ್ ಅವರು ಹೆಲಿಕ್ಯಾಪ್ಟರ್ನಲ್ಲಿ ಬಂದು ಇಳಿಯುತ್ತಾರೆ. ಬೆಂಗಳೂರಿನ ಹೈಕೋರ್ಟ್ ಎದುರು ಜನ ಸಾಗರವೇ ನೆರೆದಿರುತ್ತದೆ. ಪಟಾಕಿ ಸಿಡಿಸಲಾಗುತ್ತದೆ. ರಾಜ್ಕುಮಾರ್ ಬರುವಾಗ ಶಿವಣ್ಣ ಅವರು ಕ್ಯಾಮೆರಾ ನೋಡುವಂತೆ ಹೇಳುತ್ತಾರೆ. ಆಗ ಅಣ್ಣಾವ್ರು ಕ್ಯಾಮೆರಾ ಕಡೆಗೆ ನೋಡುತ್ತಾರೆ ಮತ್ತು ಕೈ ಮುಗಿಯುತ್ತಾರೆ. ಜನರು ಪಟಾಕಿ ಸಿಡಿಸುತ್ತಾರೆ. ಈ ಅಪರೂಪದ ವಿಡಿಯೋನ ಫ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
View this post on Instagram
ರಾಜ್ಕುಮಾರ್ ಅವರ ಅಪಹರಣವು ಅತಿ ದೊಡ್ಡ ಮಟ್ಟದಲ್ಲಿ ಚರ್ಚೆ ಆದ ವಿಚಾರ ಆಗಿತ್ತು. 24 ವರ್ಷಗಳ ಹಿಂದೆ ಈ ಘಟನೆಯು ನಡೆದಿತ್ತು ಎನ್ನಬಹುದು. ಈ ಘಟನೆಯು ಕರ್ನಾಟಕ ಮಾತ್ರವಲ್ಲದೆ ಭಾರತಾದ್ಯಂತ ಚರ್ಚೆ ಆಗಿತ್ತು. ರಾಜ್ಕುಮಾರ್ ಅವರು ಕನ್ನಡದಲ್ಲಿ ಆಗ ಬೇಡಿಕೆಯ ಹೀರೋ ಎನಿಸಿಕೊಂಡಿದ್ದರು. ರಾಜ್ಕುಮಾರ್ ಕುಟುಂಬವು ಹಣವನ್ನು ನೀಡಿ ಬಿಡುಗಡೆ ಆಗಿದೆ ಎನ್ನುವ ಮಾತು ಇತ್ತು. ಆದರೆ, ಇದನ್ನು ರಾಜ್ಕುಮಾರ್ ಕುಟುಂಬದವರು ಅಲ್ಲಗಳೆದಿದೆ.
ಇದನ್ನೂ ಓದಿ: ಸಿನಿಮಾ ಗೆದ್ದಿದ್ದು ನನ್ನಿಂದಲೇ ಅನ್ನೋ ಹೀರೋಗಳು ರಾಜ್ಕುಮಾರ್ ಹೇಳಿದ ಈ ಮಾತನ್ನು ಕೇಳಿ
ಪುನೀತ್ ರಾಜ್ಕುಮಾರ್ ಅವರು ಈ ಅಪಹರಣದ ಬಗ್ಗೆ ಒಮ್ಮೆ ಮಾತನಾಡಿದ್ದರು. ತಮಗೆ ಸಾಕಷ್ಟು ಭಯ ಆಗಿದ್ದಾಗಿಯೂ, ಜನರ ಬೆಂಬಲ ನೋಡಿ ಸಾಕಷ್ಟು ಖುಷಿಪಟ್ಟಿದ್ದಾಗಿಯೂ ಅವರು ಹೇಳಿಕೊಂಡಿದ್ದರು. ಅವರು ಬಿಡುಗಡೆ ಆದ ಬಳಿಕ ಎಲ್ಲರೂ ಖುಷಿಪಟ್ಟಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.