ಮೊದಲ ಬಾರಿ ಅಣ್ಣ ದರ್ಶನ್ ಬಗ್ಗೆ ವೇದಿಕೆಯಲ್ಲಿ ಮಾತನಾಡಿದ ದಿನಕರ್ ತೂಗುದೀಪ್
ದರ್ಶನ್ ತೂಗುದೀಪ ಪ್ರಕರಣದಲ್ಲಿ ಹೊರಗೆ ನಿಂತು ಹೋರಾಡುತ್ತಿರುವವರಲ್ಲಿ ಸಹೋದರ ದಿನಕರ್ ತೂಗುದೀಪ ಸಹ ಒಬ್ಬರು. ಇಷ್ಟು ದಿನ ಎಲ್ಲಿಯೂ ಅವರು ದರ್ಶನ್ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ದರ್ಶನ್ ಬಗ್ಗೆ ಮಾತನಾಡಿದ್ದಾರೆ ದಿನಕರ್.
ದರ್ಶನ್ ಜೈಲು ಸೇರಿ ನಾಲ್ಕು ತಿಂಗಳಾಗುತ್ತಾ ಬಂದಿದೆ. ದರ್ಶನ್ ಜೈಲು ಸೇರಿದಾಗಿನಿಂದಲೂ ಅವರ ಪತ್ನಿ ಹಾಗೂ ಅವರ ಜೊತೆಗೆ ದರ್ಶನ್ರ ಸಹೋದರ ದಿನಕರ್ ತೂಗುದೀಪ್ ಜೈಲಿಗೆ ಭೇಟಿ ನೀಡುತ್ತಿರುತ್ತಾರೆ. ವಕೀಲರ ಭೇಟಿ ಇನ್ನಿತರೆ ಕೆಲಸಗಳಲ್ಲಿಯೂ ಸಹ ವಿಜಯಲಕ್ಷ್ಮಿ ಅವರಿಗೆ ದಿನಕರ್ ತೂಗುದೀಪ ಬೆಂಬಲವಾಗಿ ನಿಂತಿದ್ದಾರೆ. ಸಾಕಷ್ಟು ಬಾರಿ ಅವರು ಜೈಲಿಗೆ ಬಂದು ದರ್ಶನ್ ಅನ್ನು ಭೇಟಿ ಮಾಡಿ ಹೋಗಿದ್ದಾರೆ. ಆದರೆ ಈ ವರೆಗೆ ಬಹಿರಂಗವಾಗಿ ಅಣ್ಣನ ಬಗ್ಗೆ ಮಾತನಾಡಿರಲಿಲ್ಲ. ಇದೀಗ ವೇದಿಕೆಯೊಂದರಲ್ಲಿ ದರ್ಶನ್ ಬಗ್ಗೆ ದಿನಕರ್ ತೂಗುದೀಪ್ ಮಾತನಾಡಿದ್ದಾರೆ.
ದಿನಕರ್ ನಿರ್ದೇಶನ ‘ರಾಯಲ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾ ತಂಡ ಪ್ರಚಾರದಲ್ಲಿ ನಿರತವಾಗಿದೆ. ಯೂತ್ಫುಲ್, ಪ್ರೇಮಕತೆಯನ್ನು ಈ ಸಿನಿಮಾ ಒಳಗೊಂಡಿದ್ದು ರಾಜ್ಯದ ಕೆಲ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳ ಎದುರು ಪ್ರಚಾರ ಮಾಡುತ್ತಿದೆ. ಅದೇ ರೀತಿ ನಿನ್ನೆ ‘ರಾಯಲ್’ ತಂಡ ತುಮಕೂರಿಗೆ ಹೋಗಿ ಅಲ್ಲಿ ಧನ ಪ್ಯಾಲೆಸ್ನಲ್ಲಿ ವಿದ್ಯಾರ್ಥಿಗಳ ಎದುರು ಕಾರ್ಯಕ್ರಮವೊಂದನ್ನು ಮಾಡಿತು. ಕಾರ್ಯಕ್ರಮದಲ್ಲಿ ದಿನಕರ್ ತೂಗುದೀಪ ಅವರು ದರ್ಶನ್ ಬಗ್ಗೆ ಮಾತನಾಡಿದರು.
ಇದನ್ನೂ ಓದಿ:ಬಳ್ಳಾರಿಯಿಂದ ಬೆಂಗಳೂರಿಗೆ ಶಿಫ್ಟ್ ಆಗುತ್ತಾರೆಯೇ ನಟ ದರ್ಶನ್
ಇಷ್ಟು ದಿನ ನಾನು ಎಲ್ಲಿಯೂ ಹೋಗಲಾಗಿರಲಿಲ್ಲ, ಎಲ್ಲಿಯೂ, ಯಾವುದರ ಬಗ್ಗೆಯೂ ಮಾತನಾಡಲು ಸಹ ಆಗಿರಲಿಲ್ಲ. ಆದರೆ ಈ ವೇದಿಕೆ ಬಳಸಿಕೊಂಡು ಕೆಲವು ಮಾತು ಆಡುತ್ತೇನೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಬೆಂಬಲ ನೀಡುತ್ತಿರುವ, ನಮ್ಮ ಬೆನ್ನಿಗೆ ನಿಂತರುವ ಎಲ್ಲರಿಗೂ ಧನ್ಯವಾದ. ನಿಮ್ಮ ಈ ಪ್ರೀತಿ, ಪ್ರೋತ್ಸಾಹ ಹೀಗೆಯೇ ಇರಲಿ. ನಿಮ್ಮ ಪ್ರೀತಿಗೆ ಚಿರಋಣಿಯಾಗಿರುತ್ತೀವಿ. ಎಲ್ಲರಿಗೂ ಗೊತ್ತಿರುವಂತೆ ಪರಿಸ್ಥೀತಿ ಸರಿ ಇರಲಿಲ್ಲ, ಆದರೆ ಇಂಥಹಾ ಸಮಯದಲ್ಲಿ ಸೆಲೆಬ್ರಿಟಿಗಳು ಬೆಂಬಲ ನೀಡಿದ್ದಾರೆ ಅವರಿಗೆ ಧನ್ಯವಾದ. ನಾವು ಹೆಸರು ಮಾಡಿರುವುದಕ್ಕೆ ಡಿ ಬಾಸ್ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಕಾರಣ’ ಎಂದರು. ಮುಂದುವರೆದು, ‘ನಿಮ್ಮ ಈ ಪ್ರೀತಿ ದರ್ಶನ್ ಮೇಲೆ ಕುಟುಂಬದ ಮೇಲೆ ಹೀಗೆಯೇ ಇರಲಿ, ನಿಮ್ಮ ಪ್ರೀತಿ ಇರುವವರೆಗೆ ಡಿ ಬಾಸ್ಗೆ ಯಾರೂ ಏನು ಮಾಡೋಕೆ ಆಗಲ್ಲ’ ಎಂದರು.
‘ರಾಯಲ್’ ಸಿನಿಮಾದ ‘ಟಾಂಗು ಟಾಂಗು’ ಹಾಡನ್ನು ವಿದ್ಯಾರ್ಥಿಗಳಿಂದಲೇ ಬಿಡುಗಡೆ ಮಾಡಿಸಲಾಯ್ತು. ಸಿನಿಮಾ ಬಿಡುಗಡೆ ಆದ ಬಳಿಕ ವಿದ್ಯಾರ್ಥಿಗಳು ‘ರಾಯಲ್’ ಸಿನಮಾದ ನಾಯಕ ನಟ ವಿರಾಟ್ ಹಾಗೂ ನಟಿ ಸಂಜನಾ ಆನಂದ್ ಜೊತೆ ಡ್ಯಾನ್ಸ್ ಮಾಡಿ ಸಂತೋಷಪಟ್ಟರು. ದಿನಕರ್ ನಿರ್ದೇಶಿಸಿ, ರಾಟ್ ಹಾಗೂ ನಟಿ ಸಂಜನಾ ನಟಿಸಿರುವ ಈ ಸಿನಿಮಾವನ್ನು ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಹಾಡನ್ನು ಕವಿರಾಜ್ ಬರೆದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ