AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರಿನಲ್ಲಿರೋ ಚಂದನ್ ಶೆಟ್ಟಿ ಮನೆ ಹೇಗಿದೆ? ಇಲ್ಲಿದೆ ಹೋಮ್​ ಟೂರ್

ಬೆಂಗಳೂರಿನ ಹೊರವಲಯದಲ್ಲಿ ಈ ಮನೆ ಇದ್ದು ಬಿಗ್ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಲಾಗಿದೆ. ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲೇ ಸಣ್ಣದಾದ ಡೋರ್ ಮಾಡಿಸಿದ್ದಾರೆ. ಮನೆ ಸಾಕಷ್ಟು ಭವ್ಯವಾಗಿದೆ.

ಮೈಸೂರಿನಲ್ಲಿರೋ ಚಂದನ್ ಶೆಟ್ಟಿ ಮನೆ ಹೇಗಿದೆ? ಇಲ್ಲಿದೆ ಹೋಮ್​ ಟೂರ್
ಚಂದನ್
ರಾಜೇಶ್ ದುಗ್ಗುಮನೆ
|

Updated on: Oct 08, 2024 | 7:01 AM

Share

ಚಂದನ್ ಶೆಟ್ಟಿ ಅವರು ಇತ್ತೀಚೆಗೆ ಸಾಕಷ್ಟು ಬೇಸರಗೊಳ್ಳುವಂತ ಘಟನೆ ಒಂದು ನಡೆದಿತ್ತು. ಅವರು ಪತ್ನಿ ನಿವೇದಿತಾಗೆ ವಿಚ್ಛೇದನ ನೀಡಿದರು. ಈ ಬೆಳವಣಿಗೆ ಶಾಕಿಂಗ್ ಎನಿಸಿತ್ತು. ಇದಾದ ಬಳಿಕ ಅವರು ಸೈಲೆಂಟ್ ಆಗಿಲ್ಲ. ಸಿನಿಮಾ ಪ್ರಮೋಷನ್​ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈಗ ಅವರ ಕನಸಿನ ಮನೆಯ ಅನಾವರಣ ಆಗಿದೆ. ನಿರಂಜನ್ ದೇಶ್​ಪಾಂಡೆ ಹಾಗೂ ಕಿರಿಕ್ ಕೀರ್ತಿ ಅವರು ಈ ಮನೆಯ ಹೋಂ ಟೂರ್ ಮಾಡಿಸಿದ್ದಾರೆ. ಅವರ ಯೂಟ್ಯೂಬ್ ಚಾನೆಲ್ ‘ಮಿಸ್ಟರ್​ ನಿರಿಕ್’ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಹೊರವಲಯದಲ್ಲಿ ಈ ಮನೆ ಇದ್ದು ಬಿಗ್ ಬಾಸ್ ಮನೆಯ ರೀತಿಯೇ ದೊಡ್ಡ ಕಾಂಪೌಂಡ್ ಹಾಕಿಸಲಾಗಿದೆ. ಎಂಟ್ರಿಯಲ್ಲಿ ಬಿಗ್ ಬಾಸ್ ಮನೆಯ ರೀತಿಯಲ್ಲೇ ಸಣ್ಣದಾದ ಡೋರ್ ಮಾಡಿಸಿದ್ದಾರೆ. ಮನೆ ಸಾಕಷ್ಟು ಭವ್ಯವಾಗಿದೆ. ಆರಂಭದಲ್ಲಿ ಕಾರ್ ಪಾರ್ಕಿಂಗ್​ಗೆ ದೊಡ್ಡದಾದ ಜಾಗ ಇದೆ. ವಿಶೇಷ ಎಂದರೆ ಮ್ಯಾಟ್ ಮೇಲೆ ಕನ್ನಡದಲ್ಲೇ ಸುಸ್ವಾಗತ ಎಂದು ಬರೆಯಲಾಗಿದೆ.

ಸಣ್ಣದಾದ ಹಾಲ್ ಇದೆ. ಅಡುಗೆ ಮನೆ ಕಾಣಬಾರದು ಎಂಬ ಕಾರಣಕ್ಕೆ ಸಣ್ಣದಾದ ಪಾರ್ಟೀಷಿಯನ್ ಮಾಡಲಾಗಿದೆ. ಅಡುಗೆ ಮನೆ ಕೂಡ ಸಖತ್ ಆಗಿದೆ. ಬೆಡ್​ರೂಂ ಸಾಕಷ್ಟು ವಿಶಾಲವಾಗಿದೆ. ಬೆಡ್​ರೂಂ ಹೊರಗೆ ಬಾಲ್ಕನಿ ಇದೆ. ಸಣ್ಣದಾದ ಪೂಲ್ ಕೂಡ ಇದೆ. ಪೂಲ್ ಪಾರ್ಟಿಗೆ ಇದನ್ನು ಮಾಡಲಾಗಿದೆ ಎಂದು ಚಂದನ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಬೆಂಗಳೂರು ಹೊರವಲಯದಲ್ಲಿ ಈ ಕಟ್ಟಡ ಇದ್ದು ಕಮರ್ಷಿಯಲೈಸ್ ಮಾಡುವ ಆಲೋಚನೆಯೂ ಅವರಿಗೆ ಇದೆ. ಇಡೀ ಮನೆಗೆ ಅವರೇ ಕಲ್ಪನೆ ನೀಡಿದ್ದಾರೆ.

ಇದನ್ನೂ ಓದಿ: ಅಶ್ಲೀಲ ಸಂದೇಶ ಕಳಿಸುವವರಿಗೆ ದರ್ಶನ್ ಪ್ರಕರಣ ಎಚ್ಚರಿಕೆ ಘಂಟೆ: ಚಂದನ್ ಶೆಟ್ಟಿ 

ಚಂದನ್ ಶೆಟ್ಟಿ ಅವರು ಸಂಗೀತ ಸಂಯೋಜನೆಯ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ಕೆಲವು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಅವರು ಈ ಮೊದಲು ಬಿಗ್ ಬಾಸ್​ಗೆ ಕಾಲಿಟ್ಟಿದ್ದರು. ಅಲ್ಲಿ ಗೆದ್ದು ಜನಪ್ರಿಯತೆ ಪಡೆದರು. ನಿವೇದಿತಾ ಗೌಡ ಸಿಕ್ಕಿದ್ದು ಕೂಡ ಅಲ್ಲಿಯೇ. ಕೆಲವು ವರ್ಷ ಸಂಸಾರ ನಡೆಸಿದ್ದ ಇವರು ಆ ಬಳಿಕ ದೂರ ಆದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಗ್ರಾಮ ದೇವತೆ ಮೆರವಣಿಗೆ ವೇಳೆ ಗುಂಪು ಘರ್ಷಣೆ: ರಸ್ತೆಯಲ್ಲಿ ಅನಾಥವಾದ ವಿಗ್ರಹ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಶಾಲಾ ವಿದ್ಯಾರ್ಥಿನಿಗೆ ಕ್ಯಾನರ್ ಬಂದಿದ್ದಕ್ಕೆ ಶಿಕ್ಷಕಿ ಮಾಡಿದ್ದೇನು ನೋಡಿ
ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಹಾಸನ-ಸೋಲಾಪುರ ಎಕ್ಸ್​ಪ್ರೆಸ್​ ರೈಲಿನಲ್ಲಿ ನೀರಿಲ್ಲದೇ ಪ್ರಯಾಣಿಕರ ಪರದಾಟ
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ಅಡುಗೆ ಮಾಡುವಾಗ ಪಾತ್ರೆಯೊಳಗೆ ಬಿದ್ದ ಹಾವು
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
ದರ್ಶನ ಜತೆಗಿನ ಆ ಘಟನೆಯನ್ನು ನೆನೆಪಿಸಿಕೊಂಡ ಬಿಗ್ ಬಾಸ್ ವಿನ್ನರ್ ಗಿಲ್ಲಿ
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
50 ಲಕ್ಷ ರೂಪಾಯಿ ಹಣನ ಗಿಲ್ಲಿ ಏನ್ ಮಾಡ್ತಾರೆ?
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ
ರನ್ನರ್ ಅಪ್ ಆದ ಬಳಿಕ ಫ್ಲೈಯಿಂಗ್ ಕಿಸ್ ಕೊಟ್ಟ ರಕ್ಷಿತಾ ಶೆಟ್ಟಿ
ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ
ಲಕ್ಕುಂಡಿ: 4ನೇ ದಿನದ ಉತ್ಖನನದಲ್ಲಿ ಪುರಾತನ ಕೊಡಲಿ ಆಕಾರದ ಅವಶೇಷ ಪತ್ತೆ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ
ರೈಲು ಹತ್ತಲು ಹೋಗಿ ಬಿದ್ದ ತಂದೆ-ಮಗನನ್ನು ರಕ್ಷಿಸಿದ ಆರ್​ಪಿಫ್ ಸಿಬ್ಬಂದಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ
Bigg Boss Live: ಬಿಗ್ ಬಾಸ್ ವಿನ್ನರ್ ಗಿಲ್ಲಿ ಸಂಭ್ರಮ ನೋಡಿ