AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ರಾಷ್ಟ್ರಪ್ರಶಸ್ತಿ ಸ್ವೀಕರಿಸಲಿರುವ ರಿಷಬ್; ಎಲ್ಲಿ ಲೈವ್ ನೋಡಬಹುದು?

70ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಗಳು ಆಗಸ್ಟ್ 16 ಘೋಷಣೆ ಆದವು. ಕೆಲವು ಕನ್ನಡ ಸಿನಿಮಾಗಳು ಅದರಲ್ಲೂ ಕನ್ನಡದ ‘ಜನಪ್ರಿಯ’ ಸಿನಿಮಾಗಳು ಪ್ರಶಸ್ತಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಇವುಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್​ನ ನೀಡಲಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದೆ.  

ಇಂದು ರಾಷ್ಟ್ರಪ್ರಶಸ್ತಿ ಸ್ವೀಕರಿಸಲಿರುವ ರಿಷಬ್; ಎಲ್ಲಿ ಲೈವ್ ನೋಡಬಹುದು?
ರಿಷಬ್-ಚಕ್ರವರ್ತಿ
ರಾಜೇಶ್ ದುಗ್ಗುಮನೆ
|

Updated on: Oct 08, 2024 | 8:51 AM

Share

70ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ಇಂದು (ಅಕ್ಟೋಬರ್ 8) ನಡೆಯಲಿದೆ. ಇದು ಭಾರತೀಯ ಚಿತ್ರರಂಗದ ಪಾಲಿಗೆ ವಿಶೇಷ ದಿನ. ಎಲ್ಲಾ ಚಿತ್ರರಂಗದ ಕಲಾವಿದರು ಇದರಲ್ಲಿ ಭಾಗಿ ಆಗಲಿದ್ದಾರೆ. ದಾದಾ ಸಾಹೇಬ್ ಫಾಲ್ಕೆ ಹಾಗೂ ರಾಷ್ಟ್ರ ಪ್ರಶಸ್ತಿಗಳ ಪ್ರದಾನ ಇಂದು ನಡೆಯಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್​ನ ನೀಡಲಿದ್ದಾರೆ. ದೆಹಲಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

70ನೇ ಸಾಲಿನ ರಾಷ್ಟ್ರ ಪ್ರಶಸ್ತಿಯನ್ನು ಆಗಸ್ಟ್ 16ರಂದು ಘೋಷಣೆ ಮಾಡಲಾಯಿತು. ಇಂದು (ಅಕ್ಟೋಬರ್ 8) ಪ್ರಶಸ್ತಿ ಪ್ರದಾನ ಆಗಲಿದೆ. ದೆಹಲಿಯ ವಿಜ್ಞಾನ್ ಭವನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಅವಾರ್ಡ್ ವಿನ್ನರ್​ಗಳ ಜೊತೆ ಅನೇಕ ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಈ ಅವಾರ್ಡ್ ಕಾರ್ಯಕ್ರಮ ಆರಂಭ ಆಗಲಿದೆ. ಡಿಡಿ ನ್ಯೂಸ್ ಚಾನೆಲ್​​ನ ಯೂಟ್ಯೂಬ್ ಚಾನೆಲ್​ನಲ್ಲಿ ನೀವು ಇದನ್ನು ಉಚಿತವಾಗಿ ವೀಕ್ಷಣೆ ಮಾಡಬಹುದು.

ಕನ್ನಡದ ಪಾಲಿಗೆ ಈ ಬಾರಿಯ ರಾಷ್ಟ್ರೀಯ ಪ್ರಶಸ್ತಿ ವಿಶೇಷ ಎನಿಸಿಕೊಂಡಿದೆ. ರಿಷಬ್ ಶೆಟ್ಟಿ ಅವರಿಗೆ ‘ಕಾಂತಾರ’ ಸಿನಿಮಾದ ನಟನೆಗೆ ‘ಅತ್ಯುತ್ತಮ ನಟ’ ಅವಾರ್ಡ್ ಸಿಕ್ಕಿದೆ. ಅದೇ ರೀತಿ ‘ಕಾಂತಾರ’ ಚಿತ್ರಕ್ಕೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ಅವರು ಸಮಾರಂಭದಲ್ಲಿ ಭಾಗಿ ಆಗಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಉಳಿದಂತೆ ಮಾನಸಿ ಪರೇಖ್, ನಿತ್ಯಾ ಮೆನನ್, ಅರಿಜಿತ್ ಸಿಂಗ್, ನೀನಾ ಗುಪ್ತಾ, ಎಆರ್​ ರೆಹಮಾನ್, ಮನೋಜ್ ಬಾಜ್​ಪಾಯಿ, ಮಿಥುನ್ ಚಕ್ರವರ್ತಿ ಮೊದಲಾದವಾರು ಇದರಲ್ಲಿ ಭಾಗಿ ಆಗಲಿದ್ದಾರೆ.

ಇತ್ತೀಚೆಗಷ್ಟೇ ಭಾರತದ ಪ್ರತಿಷ್ಠಿತ ಅವಾರ್ಡ್ ‘ದಾದಾಸಾಹೇಬ್ ಫಾಲ್ಕೆ ಅವಾರ್ಡ್​’ನ ಘೋಷಣೆ ಮಾಡಲಾಯಿತು. ನಟ ಮಿಥುನ್ ಚಕ್ರವರ್ತಿ ಅವರಿಗೆ ಈ ಪ್ರಶಸ್ತಿ ಘೋಷಿಸಲಾಗಿದೆ. ಅವರಿಗೆ ಈ ಅವಾರ್ಡ್​​ನ ನೀಡಲಾಗುತ್ತದೆ.

ಇದನ್ನೂ ಓದಿ: ಅತ್ಯುತ್ತಮ ನಟ-ನಟಿ ‘ರಾಷ್ಟ್ರ ಪ್ರಶಸ್ತಿ’ ಪಡೆದ ಕನ್ನಡದ ಪ್ರತಿಭಾವಂತ ಕಲಾವಿದರು ಇವರು..

ಜಾನಿ ಮಾಸ್ಟರ್​ಗೆ ರಾಷ್ಟ್ರ ಪ್ರಶಸ್ತಿ ದೊರಕುವುದರಲ್ಲಿತ್ತು. ಆದರೆ, ಅವರ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಈ ಕಾರಣದಿಂದ ಅವರ ವಿರುದ್ಧ ಕೇಸ್ ದಾಖಲಾಗಿದೆ. ಅವರು ಅರೆಸ್ಟ್ ಕೂಡ ಆಗಿದ್ದಾರೆ. ಈ ಕಾರಣಕ್ಕೆ ಜಾನಿ ಮಾಸ್ಟರ್​ಗೆ ನೀಡಬೇಕಿದ್ದ ರಾಷ್ಟ್ರ ಪ್ರಶಸ್ತಿಯನ್ನು ಸರ್ಕಾರ ರದ್ದು ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.