AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧ್ರುವ 369’ ಸಿನಿಮಾದ ಟೀಸರ್​ನಲ್ಲಿ ಪುನೀತ್, ಡಾ. ರಾಜ್​ಕುಮಾರ್​ ಪಾತ್ರಗಳ ಮರುಸೃಷ್ಟಿ

ಗ್ರಾಫಿಕ್ಸ್ ಮೂಲಕ ‘ಧ್ರುವ 369’ ಸಿನಿಮಾದ ಟೀಸರ್​ ಮೂಡಿಬಂದಿದೆ. ಈ ಟೀಸರ್​ನಲ್ಲಿ ಡಾ. ರಾಜ್​ಕುಮಾರ್ ಮತ್ತು ಪುನೀತ್​ ರಾಜ್​ಕುಮಾರ್​ ಅವರ ಪಾತ್ರಗಳು ಇವೆ. ಹಾಗಾಗಿ ಸಿನಿಮಾದ ಕಥೆ ಬಗ್ಗೆ ಪ್ರೇಕ್ಷಕರಿಗೆ ಕೌತುಕ ಹೆಚ್ಚಾಗಿದೆ. ಜೆ.ಕೆ. ಶಂಕರ್‌ನಾಗ್ ನಿರ್ದೇಶನ ಮಾಡಿದ ಈ ಸಿನಿಮಾಗೆ ಶ್ರೀಕೃಷ್ಣ ಕಾಂತಿಲ ಅವರು ಬಂಡವಾಳ ಹೂಡಿದ್ದಾರೆ.

‘ಧ್ರುವ 369’ ಸಿನಿಮಾದ ಟೀಸರ್​ನಲ್ಲಿ ಪುನೀತ್, ಡಾ. ರಾಜ್​ಕುಮಾರ್​ ಪಾತ್ರಗಳ ಮರುಸೃಷ್ಟಿ
Dhruva 369 Movie Poster
ಮದನ್​ ಕುಮಾರ್​
|

Updated on: Mar 16, 2025 | 9:12 PM

Share

ಪುನೀತ್ ರಾಜ್​ಕುಮಾರ್  (Puneeth Rajkumar) ಅವರನ್ನು ಮತ್ತೆ ಮತ್ತೆ ದೊಡ್ಡ ಪರದೆ ಮೇಲೆ ನೋಡಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ಅದು ಅಷ್ಟು ಸುಲಭವಲ್ಲ. ಈಗ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪುನೀತ್ ಅವರನ್ನು ಹಿರಿತೆರೆಯಲ್ಲಿ ಜೀವಂತವಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ‘ಧ್ರುವ 369’ ಸಿನಿಮಾ (Dhruva 369 Movie) ಕೂಡ ಅದೇ ನಿಟ್ಟಿನಲ್ಲಿ ಕಾರ್ಯನಿರತವಾಗಿದೆ. ಈ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಡಿಫರೆಂಟ್ ಕಾನ್ಸೆಪ್ಟ್​ನಲ್ಲಿ ಮೂಡಿಬಂದ ಈ ಟೀಸರ್​ನಲ್ಲಿ ಪುನೀತ್ ರಾಜ್​ಕುಮಾರ್ ಮಾತ್ರವಲ್ಲದೇ ಡಾ. ರಾಜ್​ಕುಮಾರ್​ ಕೂಡ ಕಾಣಿಸಿಕೊಂಡಿದ್ದಾರೆ. ಆ ಮೂಲಕ ಚಿತ್ರದ ಬಗ್ಗೆ ಕೌತುಕ ಮೂಡಿಸಲಾಗಿದೆ.

‘ಧ್ರುವ 369’ ಸಿನಿಮಾ ಶೀರ್ಷಿಕೆಯೇ ಭಿನ್ನವಾಗಿದೆ. ಈ ಚಿತ್ರದ ಟೀಸರ್​ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ. ಗೋವಿಂದು ಅವರು ಟೀಸರ್ ಬಿಡುಗಡೆ ಮಾಡಿದರು. ಬಳಿಕ ಅವರು ಮಾತನಾಡಿದರು. ‘ನಿರ್ದೇಶಕರ ಶ್ರಮ ಈ ಟೀಸರ್​​ನಲ್ಲಿ ಕಾಣುತ್ತಿದೆ. ಇಂಥ ನಿರ್ದೇಶಕರ ಅವಶ್ಯಕತೆ ಕನ್ನಡ ಚಿತ್ರರಂಗಕ್ಕೆ ತುಂಬ ಇದೆ. ಮುಂದಿನ ದಿನಗಳಲ್ಲಿ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿವೆ’ ಎಂದು ಸಾ.ರಾ. ಗೋವಿಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಎನ್.ಎಂ. ಸುರೇಶ್, ರಮೇಶ್ ಭಟ್ ಮುಂತಾದವರು ಹಾಜರಿದ್ದರು.

ಆಧುನಿಕ ತಂತ್ರಜ್ಞಾನ ಬಳಸಿಕೊಂಡು ‘ಧ್ರುವ 369’ ಸಿನಿಮಾದ 1.40 ನಿಮಿಷದ ಅವಧಿಯ ಟೀಸರ್ ಸಿದ್ಧಪಡಿಸಲಾಗಿದೆ. ಡಾ. ರಾಜ್‌ಕುಮಾರ್ ಹಾಗೂ ಪುನೀತ್‌ ರಾಜ್‌ಕುಮಾರ್ ಅವರನ್ನು ಈ ಟೀಸರ್​​ನಲ್ಲಿ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ಮಂಗಳೂರಿನ ಉದ್ಯಮಿ ಶ್ರೀಕೃಷ್ಣ ಕಾಂತಿಲ ಅವರು ‘ಅಚಿಂತ್ಯ ಸ್ಟುಡಿಯೋಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ
Image
ಪುನೀತ್ ಪೋಸ್ಟರ್​ಗೆ ಹಾಲಿನ ಅಭಿಷೇಕ; ‘ಅಪ್ಪು’ ಸಿನಿಮಾ ಭರ್ಜರಿ ಪ್ರದರ್ಶನ
Image
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
Image
ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತ
Image
ಯಾರ ಬಗ್ಗೆಯೂ ಪುನೀತ್ ನೆಗೆಟಿವ್ ಮಾತಾಡಿದ್ದು ನಾನು ಕೇಳಿಲ್ಲ: ಕೆ. ಕಲ್ಯಾಣ್

‘ಧ್ರುವ 369’ ಸಿನಿಮಾ ಟೀಸರ್: 

‘ಧ್ರುವ 369’ ಸಿನಿಮಾಗೆ ಜೆ.ಕೆ. ಶಂಕರ್‌ನಾಗ್ ಅವರು ನಿರ್ದೇಶನ ಮಾಡಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್, ರಮೇಶ್‌ ಭಟ್, ಸಂದೀಪ್‌ ಮಲಾನಿ, ಅತೀಶ್‌ ಶೆಟ್ಟಿ, ಚಂದನಾ, ನಮಿತಾ ಮುಂತಾದವರು ಈ ಚಿತ್ರಕ್ಕೆ ನಟಿಸಿದ್ದಾರೆ. ಮಂಗಳೂರಿನ ರಂಗಭೂಮಿ ಕಲಾವಿದರು ಕೂಡ ಈ ಚಿತ್ರದಲ್ಲಿ ಅವಕಾಶ ಪಡೆದಿದ್ದಾರೆ. ಮಂಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು, ನಂದಿ ಬೆಟ್ಟ, ಜವಹರಲಾಲ್ ನೆಹರು ತಾರಾಲಯ ಮುಂತಾದ ಕಡೆಗಳಲ್ಲಿ ಶೂಟಿಂಗ್ ಮಾಡಲಾಗಿದೆ.

ಇದನ್ನೂ ಓದಿ: ಹೊಸ ನಟರು ಬಂದರೂ ಪುನೀತ್ ಫ್ಯಾನ್ಸ್ ನಿಯತ್ತು ಬದಲಾಗಲ್ಲ: ರಮ್ಯಾ ಮೆಚ್ಚುಗೆ

ಈ ಸಿನಿಮಾಗೆ ಸತೀಶ್‌ ಬಾಬು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸುಬ್ರಮಣ್ಯ ಐರೋಡಿ ಅವರು ಸಂಕಲನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ‘ಕೆಲವೊಂದು ನಕ್ಷತ್ರಗಳು ಆಕಾಶದಲ್ಲಿ ಹಾಗೆಯೇ ಉಳಿದುಕೊಂಡಿರುತ್ತದೆ. ಅದರಲ್ಲಿ ಒಂದು ಧ್ರುವ ನಕ್ಷತ್ರ ಆಗಿರುತ್ತೆ. ಅದೇ ನಮ್ಮ ಪವರ್ ಸ್ಟಾರ್ ಹಾಗೂ ಡಾ. ರಾಜ್‌ಕುಮಾರ್. ಅವರನ್ನು ಸ್ಫೂರ್ತಿಯಾಗಿಸಿಕೊಂಡು ಈಗಿನ ಯುವ ಜನಾಂಗದವರು ಏನು ಮಾಡುತ್ತಾರೆ ಎಂಬುದೇ ಈ ಸಿನಿಮಾದ ತಿರುಳು. ಈ ಸಿನಿಮಾದಲ್ಲಿ ಶೇಕಡ 45 ಭಾಗ ಗ್ರಾಫಿಕ್ಸ್ ಇರುತ್ತದೆ. ಇನ್ನು, 5 ನಿಮಿಷದ ದೃಶ್ಯಗಳು ಬಾಕಿ ಆಗಿವೆ’ ಎಂದು ನಿರ್ದೇಶಕರು ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
ಬಿಜೆಪಿ ಕಾರ್ಯಕರ್ತೆಯ ಬಟ್ಟೆಬಿಚ್ಚಿ ಹಲ್ಲೆ: ಗೃಹ ಸಚಿವರು ಹೇಳಿದ್ದೇನು?
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
30 ಕಾಂಗ್ರೆಸ್​​​ ಕಾರ್ಯಕರ್ತರಿಗೆ ಶಾಕ್​​ ಕೊಟ್ಟ ಪೊಲೀಸರು
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಥ್ರಿಲ್ಲರ್ ಸೂಪರ್ ಥ್ರಿಲ್ಲರ್... ಕೊನೆಯ ಎಸೆತದಲ್ಲಿ ಸಿಕ್ಸ್, ಮ್ಯಾಚ್ ವಿನ್
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಗವಿಸಿದ್ದೇಶ್ವರ ಜಾತ್ರೆ: ದಾಸೋಹದಲ್ಲಿ ಹೊಸ ದಾಖಲೆ, ಲಕ್ಷ ರೊಟ್ಟಿ ಸಂಗ್ರಹ!
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಬಾಲ್ಕನಿಯಲ್ಲಿ ಸಿಲುಕಿದ್ದವರನ್ನು ರಕ್ಷಿಸಿದ ಬ್ಲಿಂಕಿಟ್ ಡೆಲಿವರಿ ಏಜೆಂಟ್
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಧ್ರುವಂತ್-ಅಶ್ವಿನಿ ಮಧ್ಯೆ ಕಿತ್ತಾಟ; ಉರಿಯೋ ಬೆಂಕಿಗೆ ತುಪ್ಪ ಸುರಿದ ಗಿಲ್ಲಿ
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಮರಣಿಸಿದವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಯಾಕೆ?
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಓಲಾ, ಊಬರ್, ರ್ಯಾಪಿಡೋ, ನಮ್ಮ ಯಾತ್ರಿ ಬಗ್ಗೆ ಸರ್ಕಾರ ಬಿಗ್ ಅಪ್​ಡೇಟ್!
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಈ ರಾಶಿಯವರಿಗೆ ಇಂದು ವೃತ್ತಿಯಲ್ಲಿ ಪ್ರಗತಿ, ವ್ಯವಹಾರದಲ್ಲಿ ಲಾಭ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ