ಕನ್ನಡ ಚಿತ್ರರಂಗದಲ್ಲಿ ಪುನೀತ್ ರೀತಿ ಡ್ಯಾನ್ಸ್ ಮಾಡೋರು ಯಾರೂ ಇಲ್ಲ: ರಕ್ಷಿತಾ
23 ವರ್ಷಗಳ ಬಳಿಕ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗುತ್ತಿದೆ. ಅದು ಕೂಡ ಪುನೀತ್ ರಾಜ್ಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ. ಹಾಗಾಗಿ ಮೊದಲ ದಿನ ಮೊದಲ ಶೋ ನೋಡಲು ಚಿತ್ರದ ನಾಯಕಿ ರಕ್ಷಿತಾ ಪ್ರೇಮ್ ಅವರು ಕಾದಿದ್ದಾರೆ. ‘ಅಪ್ಪು’ ಸಿನಿಮಾದ ಬಗ್ಗೆ ಅವರು ನೆನಪಿನ ಪುಟ ತೆರೆದಿದ್ದಾರೆ.
ರಕ್ಷಿತಾ ಅವರು ನಟಿಸಿದ ಮೊದಲ ಸಿನಿಮಾ ‘ಅಪ್ಪು’. ಆ ಸಿನಿಮಾ ಮಾ.14ರಂದು ಮರು ಬಿಡುಗಡೆ ಆಗುತ್ತಿದ್ದು, ಆ ದಿನಗಳ ನೆನಪನ್ನು ರಕ್ಷಿತಾ ಅವರು ಮೆಲುಕು ಹಾಕಿದ್ದಾರೆ. ಪುನೀತ್ ರಾಜ್ಕುಮಾರ್ (Puneeth Rajkumar) ಬಗ್ಗೆ ಅವರು ಮಾತನಾಡಿದ್ದಾರೆ. ‘ಪುನೀತ್ ಜೊತೆ ನಟಿಸೋಕೆ, ಡ್ಯಾನ್ಸ್ ಮಾಡೋಕೆ ನನಗೆ ಕಷ್ಟ ಆಗುತ್ತಿತ್ತು. ಇಂದಿಗೂ ಅವರ ರೀತಿ ಡ್ಯಾನ್ಸ್ ಮಾಡುವವರು ಕನ್ನಡ ಚಿತ್ರರಂಗದಲ್ಲಿ ಯಾರೂ ಇಲ್ಲ’ ಎಂದು ರಕ್ಷಿತಾ ಪ್ರೇಮ್ (Rakshitha Prem) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.