ಅಧಿವೇಶನ ವೇಳೆ ವಿಧಾನಸೌಧಕ್ಕೆ ಬಂದ ಬುಸ್ ಬುಸ್ ನಾಗಪ್ಪ..ಮೈ ಜುಮ್ಮೆನಿಸುವ ವಿಡಿಯೋ
ಸದ್ಯ ವಿಧಾನಸಭೆಯಲ್ಲಿ 2025ನೇ ಸಾಲಿನ ಕರ್ನಾಟಕ ಬಜೆಟ್ ಅಧಿವೇಶನ ನಡೆಯುತ್ತಿದ್ದು, ಸದನದೊಳಗೆ ಆಡಳಿತರೂಢ ಕಾಂಗ್ರೆಸ್ ಹಾಗೂ ವಿಪಕ್ಷಗಳಾದ ಬಿಜೆಪಿ, ಜೆಡಿಎಸ್ ನಡುವೆ ಆರೋಪ ಪ್ರತ್ಯಾರೋಪಗಳು ಜೋರಾಗಿ ನಡೆಯುತ್ತಿವೆ. ಇದರ ಮಧ್ಯ ವಿಧಾನಸೌಧಕ್ಕೆ ನಲ್ಲಿ ನಾಗರಹಾವು ಬಂದಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಹಾವು ಪತ್ತೆಯಾಗಿದೆ.
ಬೆಂಗಳೂರು, (ಮಾರ್ಚ್ 12): ಕಳೆದ ವಾರ ವಿಧಾನಸೌಧದ ಖಜಾನೆ ಇಲಾಖೆ ಕಚೇರಿಯೊಳಗೆ ಹಾವು ನುಗ್ಗಿತ್ತು. ಇದರ ಬೆನ್ನಲ್ಲೇ ಇದೀಗ ವಿಧಾನಸೌಧದಲ್ಲಿ ಮತ್ತೊಂದು ಹಾವು ಪತ್ತೆಯಾಗಿದೆ. 2025ನೇ ಸಾಲಿನ ಕರ್ನಾಟಕ ಬಜೆಟ್ ಅಧಿವೇಶನ ನಡೆಯುತ್ತಿರುವ ಮಧ್ಯ ವಿಧಾನಸೌಧದಕ್ಕೆ ನಾಗರಹಾವು ಬಂದಿದೆ. ಶಾಸಕರ ಭವನದಿಂದ ವಿಧಾನಸೌಧ ಪ್ರವೇಶಿಸುವ ಮಾರ್ಗದಲ್ಲಿ ಕೆ.ಸಿ.ರೆಡ್ಡಿ ಪ್ರತಿಮೆ ಬಳಿ 5 ಅಡಿ ಉದ್ದದ ನಾಗರಹಾವು ಪ್ರತ್ಯಕ್ಷವಾಗಿದೆ. ಕೂಡಲೇ ಸ್ಥಳಕ್ಕೆ ಬಂದ ಉರಗತಜ್ಞರು ಒಂದೂವರೆ ಗಂಟೆ ಕಾಲ ಹುಡುಕಾಟ ನಡೆಸಿ ನಾಗರಹಾವನ್ನು ಹಿಡಿದುಕೊಂಡು ಹೋಗಿದ್ದಾರೆ.
Latest Videos
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

