Karnataka Budget Session: ಕೆಪಿಎಸ್ಸಿ ಮೇಲಿನ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸಿದ ಸಿದ್ದರಾಮಯ್ಯ, ಕೊನೆಗೆ ಯತ್ನಾಳ್ ಮೇಲೆ ರೇಗಿದರು!
ಸಿದ್ದರಾಮಯ್ಯ ಮಾತಾಡುವಾಗ, ಅಶೋಕ ತಮ್ಮ ಪಕ್ಕದಲ್ಲಿದ್ದವರೊಂದಿಗೆ ಮಾತಾಡುತ್ತಿದ್ದುದ್ದನ್ನು ಗಮನಿಸಿ, ರೀ ಅಶೋಕ ನಾನು ಹೇಳೋದನ್ನು ಕೇಳ್ರೀ ಅನ್ನುತ್ತಾರೆ. ಬಸನಗೌಡ ಪಾಟೀಲ್ ಯತ್ನಾಳ್ ಆವರು ಕೆಪಿಎಸ್ಸಿ ಮರುಪರೀಕ್ಷೆ ಮಾಡಿಸಿ ಅಂದಾಗ ತಾಳ್ಮೆ ಕಳೆದುಕೊಳ್ಳುವ ಸಿಎಂ ಹಾಗೆ ಮಾಡಲು ಬರಲ್ಲ, ಅದನ್ನು ಕೋರ್ಟ್ ಹೇಳಬೇಕು, ಕೋರ್ಟ್ ಹೇಳಿದರೆ ತಾನು ಅಡ್ಡಗಾಲು ಹಾಕಲ್ಲ ಎಂದರು.
ಬೆಂಗಳೂರು, ಮಾರ್ಚ್ 12: ಕರ್ನಾಟಕ ಲೋಕಸೇವಾ ಆಯೋಗದ (Karnataka Public Service Commission) ಕರ್ಮಕಾಂಡದ ಮೇಲೆ ಇಂದು ಸದನದಲ್ಲಿ ಸುದೀರ್ಘವಾದ ಚರ್ಚೆ ನಡೆಯಿತು. ವಿರೋಧ ಪಕ್ಷದ ನಾಯಕರು ಎತ್ತಿದ ಪ್ರತಿಯೊಂದು ಲೋಪ, ಪ್ರಮಾದ, ಸಲಹೆ ಸೂಚನೆಯನ್ನು ತಾಳ್ಮೆಯಿಂದ ಕೇಳಿಸಿಕೊಂಡು ಸಮಾಧಾನಕರ ಉತ್ತರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದರು. ಸರ್ಕಾರದ ಆದ್ಯತೆ, ಪ್ರಾಧಾನ್ಯತೆ ಮತ್ತು ಅಸಹಾಯಕತೆಗಳನ್ನು ಅವರು ಸದನಕ್ಕೆ ವಿವರಿಸಿದರು. ವಿಷಯವೀಗ ಕೋರ್ಟ್ನಲ್ಲಿರುವುದರಿಂದ ಅದರ ಬಗ್ಗೆ ಜಾಸ್ತಿ ಮಾತಾಡುವುದು ಸಾಧ್ಯವಿಲ್ಲ, ಎಂದ ಸಿದ್ದರಾಮಯ್ಯ ತನ್ನ ಉತ್ತರಗಳಿಂದ ಎಲ್ಲರಿಗೂ ಸಮಾಧಾನವಾಗಿರಬಹುದು ಎಂದು ಹೇಳಿದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos