ಸದನದಲ್ಲಿ ಸಿಎಂ ಸಿದ್ದರಾಮಯ್ಯರ ಕನ್ನಡ ಪ್ರೇಮ ಹಾಡಿ ಹೊಗಳಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ
ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿದದ್ದವರು ನೀವು ಅಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹೌದಪ್ಪ ಹೌದು ಎನ್ನುತ್ತಾರೆ! ಸಿದ್ದರಾಮಯ್ಯ ಸೀರಿಯಸ್ಸಾಗಿ ಆ ಮಾತನ್ನು ಹೇಳುತ್ತಿದ್ದಾರೋ ಅಥವಾ ಉಢಾಫೆ ಮಾಡುತ್ತಿದ್ದಾರೋ ಅಂತ ಗೊತ್ತಾಗದೆ ಅಶೋಕ ಪ್ರಶ್ನಾರ್ಥಕಾವಾಗಿ ಮುಖ್ಯಮಂತ್ರಿಯವರ ಕಡೆ ನೋಡುತ್ತಾರೆ. ಸದನದಲ್ಲಿದ್ದ ಸದಸ್ಯರೆಲ್ಲ ನಕ್ಕಾಗ ಅಶೋಕ ಅವರಿಗೆ ವಿಷಯ ಅರ್ಥವಾಗುತ್ತದೆ!
ಬೆಂಗಳೂರು, ಮಾರ್ಚ್ 12: ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ವಿರೋದ ಪಕ್ಷದ ನಾಯಕ ಆರ್ ಅಶೋಕ ಅವರ ನಡುವೆ ವಾಗ್ವಾದ ನಡೆದವು. ಈ ಸಂದರ್ಭದಲ್ಲಿ ಅಶೋಕ ಅವರು ಮುಖ್ಯಮಂತ್ರಿಯವರ ಕನ್ನಡ ಪ್ರೇಮವನ್ನು ಹಾಡಿ ಹೊಗಳಿದರು. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ರಾಜಕೀಯ ಬದುಕು ಆರಂಭಿಸಿರುವ ಮುಖ್ಯಮಂತ್ರಿಯವರು ಒಂದು ನಿಷ್ಪ್ರಯೋಜಕ ತಜ್ಞರ ಸಮಿತಿಯನ್ನು ರಚಿಸಬಾರದಿತ್ತು, ಅವರ ಎಸಗಿದ ತಪ್ಪುಗಳಿಂದ ಅಮಾಯಕ ಕನ್ನಡದ ಮಾಧ್ಯಮದ ಅಭ್ಯರ್ಥಿಗಳು ತೊಂದರೆ ಅನುಭವಿಸಬೇಕಾಯಿತು ಎನ್ನುತ್ತಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗ್ರೇಟರ್ ಬೆಂಗಳೂರು ವಿಧೇಯಕ: ಇದು ಬೆಂಗಳೂರಿನ ಪಾಲಿಗೆ ಮರಣ ಶಾಸನ ಎಂದ ಆರ್ ಅಶೋಕ್

ಪೊಲೀಸರಿಂದ ಸೂಕ್ತ ತನಿಖೆ ಆಗುತ್ತಿಲ್ಲವೆಂದು ಅರೋಪಿಸಿದ ಸಂಬಂಧಿಕರು

VIDEO: ರಾಕಿ ಭಾಯ್ ಸ್ಟೈಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಕನ್ನಡಿಗನ ಎಂಟ್

ಕಳ್ಳತನ ಮಾಡಿದ ಬಳಿಕ ತಮ್ಮ ಕಾರನ್ನೇ ಬೆಂಕಿಹಚ್ಚಿ ಸುಟ್ಟುಬಿಡುವ ಖದೀಮರು

ದರ್ಶನ್ ನಟನೆಯ ‘ಡೆವಿಲ್’ ಚಿತ್ರಕ್ಕೆ ಮೈಸೂರಿನಲ್ಲಿ ಕೊನೆಯ ದಿನದ ಶೂಟಿಂಗ್
