CSK vs KKR Highlights, IPL 2025: ಸಿಎಸ್‌ಕೆ ವಿರುದ್ಧ 8 ವಿಕೆಟ್‌ಗಳಿಂದ ಗೆದ್ದ ಕೆಕೆಆರ್
Chennai Super Kings vs Kolkata Knight Riders Highlights in Kannada: ಕೆಕೆಆರ್ ವಿರುದ್ಧ ಇನ್ನು 59 ಎಸೆತಗಳು ಬಾಕಿ ಇರುವಾಗಲೇ ಸಿಎಸ್‌ಕೆ ಸೋಲೊಪ್ಪಿಕೊಂಡಿತು. ಇದು ಚೆಪಾಕ್‌ನಲ್ಲಿ ಚೆನ್ನೈ ತಂಡಕ್ಕೆ ಎದುರಾದ ಅತಿ ದೊಡ್ಡ ಸೋಲು. ಅಲ್ಲದೆ, ಈ ತಂಡವು ಮೊದಲ ಬಾರಿಗೆ ಚೆಪಾಕ್‌ನಲ್ಲಿ ಸತತ ಮೂರು ಪಂದ್ಯಗಳನ್ನು ಸೋತ ಬೇಡದ ದಾಖಲೆಗೆ ಕೊಳೊಡ್ಡಿತು. ಐಪಿಎಲ್‌ನ ಯಾವುದೇ ಸೀಸನ್ನಲ್ಲಿ ಚೆನ್ನೈ ತಂಡ ಸತತ ಐದು ಪಂದ್ಯಗಳಲ್ಲಿ ಸೋತಿರುವುದು ಇದೇ ಮೊದಲು.

ಸುನಿಲ್ ನರೈನ್ ಅವರ ಆಲ್-ರೌಂಡ್ ಪ್ರದರ್ಶನದ ಆಧಾರದ ಮೇಲೆ ಕೆಕೆಆರ್, ಸಿಎಸ್‌ಕೆ ತಂಡವನ್ನು ಎಂಟು ವಿಕೆಟ್‌ಗಳಿಂದ ಸೋಲಿಸಿತು. ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ನರೈನ್ ಅವರ ಮಾರಕ ದಾಳಿಗೆ ನಲುಗಿ 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 103 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುರಿ ಬೆನ್ನಟ್ಟಿದ ಕೆಕೆಆರ್ ಪರ ಅದ್ಭುತ ಬ್ಯಾಟಿಂಗ್ ಮಾಡಿದ ನರೈನ್ 18 ಎಸೆತಗಳಲ್ಲಿ 44 ರನ್ ಗಳಿಸಿದರು. ಇದರ ಸಹಾಯದಿಂದ ಕೆಕೆಆರ್ 10.1 ಓವರ್‌ಗಳಲ್ಲಿ ಎರಡು ವಿಕೆಟ್‌ಗಳಿಗೆ 107 ರನ್ ಗಳಿಸುವ ಮೂಲಕ ಜಯ ಸಾಧಿಸಿತು.
LIVE NEWS & UPDATES
-
ಸಿಎಸ್‌ಕೆಗೆ ಸೋಲು
ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್‌ಗಳಿಂದ ಸೋತಿತು. ಕೆಕೆಆರ್ ತಮ್ಮ ಮೂರನೇ ಗೆಲುವು ದಾಖಲಿಸಿ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿತು. 104 ರನ್‌ಗಳ ಗುರಿಯನ್ನು ಕೆಕೆಆರ್ ಕೇವಲ 10.1 ಓವರ್‌ಗಳಲ್ಲಿ ಬೆನ್ನಟ್ಟಿತು.
-
ನರೈನ್ ಔಟ್
ಸುನಿಲ್ ನರೈನ್ ಅರ್ಧಶತಕ ವಂಚಿತರಾದರು. 18 ಎಸೆತಗಳಲ್ಲಿ 44 ರನ್ ಗಳಿಸಿ ಔಟಾದರು. ನೂರ್ ಅಹ್ಮದ್ ಅವರನ್ನು ಬೌಲ್ಡ್ ಮಾಡಿದರು.
-
-
ನರೈನ್ ಸ್ಫೋಟಕ ಬ್ಯಾಟಿಂಗ್
ಅಶ್ವಿನ್ ಎಸೆದ ಓವರ್‌ನಲ್ಲಿ ಸುನಿಲ್ ನರೈನ್ 14 ರನ್ ಗಳಿಸಿದರು. 2 ಸಿಕ್ಸರ್‌ಗಳನ್ನು ಹೊಡೆದರು.
-
ಕೆಕೆಆರ್‌ಗೆ ಮೊದಲ ಹೊಡೆತ
ಐದನೇ ಓವರ್‌ನಲ್ಲಿ ಕೆಕೆಆರ್ ವಿಕೆಟ್ ಕಳೆದುಕೊಂಡಿತು. ಅನ್ಶುಲ್ ಕಾಂಬೋಜ್ ಎಸೆತದಲ್ಲಿ ಡಿ ಕಾಕ್ ಬೌಲ್ಡ್ ಆದರು.
-
ಕೆಕೆಆರ್‌ಗೆ ಬಿರುಸಿನ ಆರಂಭ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮೊದಲ 3 ಓವರ್‌ಗಳಲ್ಲಿ 34 ರನ್ ಗಳಿಸಿದೆ. ನರೈನ್ ಮತ್ತು ಡಿ ಕಾಕ್ ಒಟ್ಟಿಗೆ 3 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಚೆನ್ನೈ ತಂಡವನ್ನು ಆದಷ್ಟು ಬೇಗ ಸೋಲಿಸುವ ಉದ್ದೇಶದಿಂದ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೈದಾನಕ್ಕೆ ಇಳಿದಿದ್ದಾರೆ.
-
-
104 ರನ್‌ಗಳ ಟಾರ್ಗೆಟ್
ಶಿವಂ ದುಬೆ ಅವರ 31 ರನ್‌ಗಳ ಇನ್ನಿಂಗ್ಸ್ ಆಧಾರದ ಮೇಲೆ ಸಿಎಸ್‌ಕೆ ಕೆಕೆಆರ್‌ಗೆ 104 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ಮೊದಲು ಬೌಲಿಂಗ್ ಮಾಡಿ ಸಿಎಸ್‌ಕೆ ತಂಡವನ್ನು 103 ರನ್‌ಗಳಿಗೆ ಸೀಮಿತಗೊಳಿಸಿತು. ಸಿಎಸ್‌ಕೆ ಪರ ಶಿವಂ ದುಬೆ ಗರಿಷ್ಠ 31 ರನ್ ಗಳಿಸಿದರು. ಕೆಕೆಆರ್ ಪರ ನರೈನ್ ಗರಿಷ್ಠ ಮೂರು ವಿಕೆಟ್ ಪಡೆದರೆ, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಪಡೆದರು.
-
ಧೋನಿ 1 ರನ್ ಗಳಿಸಿ ಔಟ್
ಚೆನ್ನೈ ಸೂಪರ್ ಕಿಂಗ್ಸ್‌ಗೆ 8ನೇ ವಿಕೆಟ್ ಕಳೆದುಕೊಂಡಿದೆ. ಧೋನಿ 1 ರನ್ ಗಳಿಸಿ ಔಟಾದರು.
-
7ನೇ ವಿಕೆಟ್ ಪತನ
ಚೆನ್ನೈ ಸೂಪರ್ ಕಿಂಗ್ಸ್‌ಗೆ 7ನೇ ಹೊಡೆತ, ದೀಪಕ್ ಹೂಡಾ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿದ್ದ ಹೂಡಾ ಸೊನ್ನೆ ಸುತ್ತಿದರು.
-
ಶೂನ್ಯಕ್ಕೆ ಜಡೇಜಾ ಔಟ್
ರವೀಂದ್ರ ಜಡೇಜಾಗೆ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಸುನಿಲ್ ನರೈನ್ ಅವರನ್ನು ಔಟ್ ಮಾಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ದೊಡ್ಡ ಸಂಕಷ್ಟದಲ್ಲಿದೆ.
-
ಅಶ್ವಿನ್ ಔಟ್
ಆರ್ ಅಶ್ವಿನ್ ಔಟ್. ಸಿಕ್ಸರ್ ಹೊಡೆಯಲು ಪ್ರಯತ್ನಿಸಿ, ವಿಕೆಟ್ ಕಳೆದುಕೊಂಡರು. ಒಂದು ರನ್ ಗಳಿಸಿ ಅಶ್ವಿನ್ ಔಟ್.
-
ತ್ರಿಪಾಠಿ ಔಟ್
ರಾಹುಲ್ ತ್ರಿಪಾಠಿ, ಸುನಿಲ್ ನರೈನ್ ಎಸೆತದಲ್ಲಿ ಬೌಲ್ಡ್ ಆದರು. 22 ಎಸೆತಗಳಲ್ಲಿ ಕೇವಲ 16 ರನ್ ಗಳಿಸಿ ತ್ರಿಪಾಠಿ ವಿಕೆಟ್ ಕಳೆದುಕೊಂಡರು.
-
ಶಂಕರ್ ಔಟ್
ಚೆನ್ನೈ ಸೂಪರ್ ಕಿಂಗ್ಸ್ ಗೆ ವರುಣ್ ಚಕ್ರವರ್ತಿ ಮೂರನೇ ಹೊಡೆತ ನೀಡಿದರು. ವಿಜಯ್ ಶಂಕರ್ 29 ರನ್ ಗಳಿಸಿ ಔಟಾದರು.
-
ಪವರ್‌ಪ್ಲೇನಲ್ಲಿ ಕೇವಲ 31 ರನ್
ಪವರ್‌ಪ್ಲೇನ ಕೊನೆಯ ಓವರ್ ಅನ್ನು ವರುಣ್ ಚಕ್ರವರ್ತಿ ಎಸೆದರು, ವಿಜಯ್ ಶಂಕರ್ ಎರಡು ಬೌಂಡರಿಗಳ ಸಹಾಯದಿಂದ 13 ರನ್ ಗಳಿಸಿದರು. ಆದರೂ, ಚೆನ್ನೈ ತಂಡ ಪವರ್ ಪ್ಲೇನಲ್ಲಿ ಕೇವಲ 31 ರನ್ ಗಳಿಸಲು ಸಾಧ್ಯವಾಯಿತು.
-
ರಚಿನ್ ಕೂಡ ಔಟ್
ಚೆನ್ನೈ ಸೂಪರ್ ಕಿಂಗ್ಸ್ ಗೆ ಎರಡನೇ ಹೊಡೆತ. ರಚಿನ್ ರವೀಂದ್ರ ಕೂಡ ಔಟ್ ಆಗಿದ್ದಾರೆ. 8 ಎಸೆತಗಳಲ್ಲಿ 4 ರನ್ ಗಳಿಸಿ ಔಟಾದರು. ಮೊದಲ ಎಸೆತದಲ್ಲೇ ಹರ್ಷಿತ್ ರಾಣಾ ವಿಕೆಟ್ ಪಡೆದರು. ರಹಾನೆಗೆ ಇದು ಸುಲಭವಾದ ಕ್ಯಾಚ್ ಆಗಿತ್ತು.
-
ಚೆನ್ನೈ ಮೊದಲ ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ ಗೆ ಮೊದಲ ಹೊಡೆತ. ಡೆವೊನ್ ಕಾನ್ವೇ ಎಲ್ಬಿಡಬ್ಲ್ಯೂ ಆಗಿ ಔಟಾದರು. 11 ಎಸೆತಗಳಲ್ಲಿ 12 ರನ್ ಗಳಿಸಿದರು. ಮೊಯಿನ್ ಅಲಿ ವಿಕೆಟ್ ಪಡೆದರು.
-
ಚೆನ್ನೈ ನಿಧಾನಗತಿಯ ಆರಂಭ
ಚೆನ್ನೈ ಸೂಪರ್ ಕಿಂಗ್ಸ್ 3 ಓವರ್‌ಗಳಲ್ಲಿ ಕೇವಲ 16 ರನ್ ಕಲೆಹಾಕಿದೆ. ಚೆನ್ನೈ ತಂಡ ಬೌಂಡರಿಗಳಿಗಾಗಿ ಹಂಬಲಿಸುತ್ತಿದೆ.
-
ಚೆನ್ನೈ ಬ್ಯಾಟಿಂಗ್ ಆರಂಭ
ಚೆನ್ನೈ ತಂಡದ ಆರಂಭಿಕರಾದ ರಚಿನ್ ರವೀಂದ್ರ ಮತ್ತು ಡೆವೊನ್ ಕಾನ್ವೇ ಇಬ್ಬರೂ ಬ್ಯಾಟಿಂಗ್‌ಗೆ ಇಳಿದಿದ್ದಾರೆ. ಕೋಲ್ಕತ್ತಾ ಪರ ವೈಭವ್ ಅರೋರಾ ಬೌಲಿಂಗ್ ಆರಂಭಿಸಿದ್ದಾರೆ.
-
ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಯಿಂಗ್-11
ರಚಿನ್ ರವೀಂದ್ರ, ಡೆವೊನ್ ಕಾನ್ವೆ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಶಿವಂ ದುಬೆ, ಎಂಎಸ್ ಧೋನಿ (ವಿಕೆಟ್ ಕೀಪರ್/ನಾಯಕ), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಖಲೀಲ್ ಅಹ್ಮದ್.
-
ಕೋಲ್ಕತ್ತಾ ನೈಟ್ ರೈಡರ್ಸ್ ಪ್ಲೇಯಿಂಗ್-11
ಕ್ವಿಂಟನ್ ಡಿ ಕಾಕ್, ಸುನಿಲ್ ನರೈನ್, ಅಜಿಂಕ್ಯ ರಹಾನೆ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಮೊಯಿನ್ ಅಲಿ, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ.
-
ಟಾಸ್ ಗೆದ್ದ ಕೋಲ್ಕತ್ತಾ
ಟಾಸ್ ಗೆದ್ದ ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ.
Published On - Apr 11,2025 7:08 PM