ಜಪಾನ್​ನಲ್ಲಿ ಗೃಹಿಣಿಯಾಗಿದ್ದ ಮಹಿಳೆಯರಿಗಿಲ್ಲ ಉದ್ಯೋಗ ಭಾಗ್ಯ

ಜಪಾನಿನ ಹೆಣ್ಣು ಮಕ್ಕಳು ಕೆಲಸದ ಕುರಿತು ಅತ್ಯಂತ ಹೆಚ್ಚು ಒಲವು ಕಂಡುಕೊಂಡಿರುವ ವ್ಯಕ್ತಿಗಳು. ವ್ಯಕ್ತಿಗಳು ಎನ್ನುವುದಕ್ಕಿಂತ ಶ್ರಮ ಜೀವಿ ಎನ್ನಬಹುದು. ಆದರೆ, ಈಗ ಜಪಾನ್​ನಲ್ಲಿ ಉತ್ತಮ ಶಿಕ್ಷಣ ಪಡೆದ, ಬುದ್ಧಿವಂತ ಮಹಿಳೆಯರಿಗೆ ಉದ್ಯೋಗ, ರಾಜಕೀಯದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ.

ಜಪಾನ್​ನಲ್ಲಿ ಗೃಹಿಣಿಯಾಗಿದ್ದ ಮಹಿಳೆಯರಿಗಿಲ್ಲ ಉದ್ಯೋಗ ಭಾಗ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Vinay Bhat

Updated on: Aug 30, 2021 | 12:42 PM

ತನ್ನ ದಣಿವರಿಯದ ಕೆಲಸಗಳು ಮತ್ತು ಬದ್ಧತೆಗಳಿಗೆ ಹೆಸರಾಗಿರುವ ದೇಶ ಜಪಾನ್‌ (Japan). ಇಲ್ಲಿ ಉದ್ಯೋಗದ ಸಲುವಾಗಿ ಸ್ವಾತಂತ್ರ್ಯವನ್ನು ಕಂಡುಕೊಳ್ಳಲು ಮದುವೆಯನ್ನೇ ಆಗುತ್ತಿಲ್ಲ ಎಂಬ ಕಾಲವಿತ್ತು. ತಮ್ಮ ಕೆಲಸದ ಶೇ. 100 ಗಮನ ಹರಿಸುತ್ತಿದ್ದರು. ಜಪಾನಿಗರು ಕೆಲಸದ ಬದ್ಧತೆ ಮೂಲಕ ತಮ್ಮ ಜೀವನದ ಭದ್ರತೆಯನ್ನು ಕಾಪಾಡಿಕೊಳ್ಳಲು ಹಾತೋರೆಯುತ್ತಿದ್ದರು. ಆದರೆ, ಇದು ಮೂರು-ನಾಲ್ಕು ವರ್ಷಗಳ ಹಿಂದಿನ ಮಾತು. ಈಗ ಜಪಾನ್​ನಲ್ಲಿ ಎಲ್ಲವೂ ಬದಲಾಗಿದೆ. ಹಲವು ಬಾರಿ ಇತರೆ ದೇಶಕ್ಕೆ ಉದಾಹರಿಸಲ್ಪಡುತ್ತಿದ್ದ ಜಪಾನ್​ನಲ್ಲಿ ಈಗ ಮಹಿಳೆಯರಿಗೆ ಸರಿಯಾದ ಉದ್ಯೋಗ ಸಿಗುತ್ತಿಲ್ಲ.

ಜಪಾನಿನ ಹೆಣ್ಣು ಮಕ್ಕಳು ಕೆಲಸದ ಕುರಿತು ಅತ್ಯಂತ ಹೆಚ್ಚು ಒಲವು ಕಂಡುಕೊಂಡಿರುವ ವ್ಯಕ್ತಿಗಳು. ವ್ಯಕ್ತಿಗಳು ಎನ್ನುವುದಕ್ಕಿಂತ ಶ್ರಮ ಜೀವಿ ಎನ್ನಬಹುದು. ಆದರೆ, ಈಗ ಜಪಾನ್​ನಲ್ಲಿ ಉತ್ತಮ ಶಿಕ್ಷಣ ಪಡೆದ, ಬುದ್ಧಿವಂತ ಮಹಿಳೆಯರಿಗೆ ಉದ್ಯೋಗ, ರಾಜಕೀಯದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ.

ಉದ್ಯೋಗ ಸಿಕ್ಕರೂ ಅದಕ್ಕೆ ತಕ್ಕಂತೆ ಉತ್ತಮ ಸಂಬಳ ನೀಡುತ್ತಿಲ್ಲ ಎಂಬ ಪರಿಸ್ಥಿತಿ ಎದುರಾಗಿದೆ. 2019 ರಲ್ಲಿ ಜಪಾನ್‌ ನಲ್ಲಿ  ಮದುವೆ ಪ್ರಮಾಣ ಇಳಿಕೆಯಾಗಿತ್ತು. 7 ಜನರಲ್ಲಿ 1 ಮದುವೆಯಾಗುತ್ತಿರಲಿಲ್ಲ. ಅವರಿಗೆ ವಯಸ್ಸು 50 ಆದರೂ ಮದುವೆಯತ್ತ ಗಮನ ಕೆಂದ್ರೀಕರಿಸುತ್ತಿರಲಿಲ್ಲ.

ಈಗ ಮದುವೆ, ಮಕ್ಕಳು ಎಂದು ಸಂಸಾರದಲ್ಲಿ ತೊಡಗಿ ಮತ್ತೆ ಕೆಲಸಕ್ಕೆ ಹಾಜರಾಗುವ ಮಾಜಿ ಗೃಹಿಣಿಯರಿಗೆ ಅವಕಾಶ, ವೇತನದ ಕೊರತೆ ಎದುರಾಗಿದೆ. ಅಚ್ಚರಿಯ ವಿಚಾರ ಎಂದರೆ ಇಂಥಹ ನಿರ್ಲಕ್ಷಿತ ಮಹಿಳೆಯರ ದೊಡ್ಡ ದಂಡು ಜಪಾನ್​ನಲ್ಲಿ ತಲೆ ಎತ್ತಿದೆ. ಇದು ಒಳ್ಳೆಯ ಹವಾಮಾನ ಅಲ್ಲ ಎಂದು ಕೆಲವು ವಿಮರ್ಶಕರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಮುಖ್ಯವಾಗಿ ಜಪಾನ್​ನಲ್ಲಿರುವ ಪುರುಷ ಪ್ರಧಾನ ಸಮಾಜ ಕೂಡ ಕಾರಣ ಎಂದು ಹೇಳಿದ್ದಾರೆ.

ಈ ಹಿಂದೆ ಜಪಾನ್​ನಲ್ಲಿ ಶಿಂಝೋ ಅಬೆ ಪ್ರಧಾನಿಯಾಗಿದ್ದಾಗ, 2013ರಲ್ಲಿ ಒಂದು ವುಮೆನೊಮಿಕ್ಸ್​ ಎಂಬ ನೀತಿಯನ್ನು ಜಾರಿಗೆ ತಂದಿದ್ದರು. ಇದರ ಪ್ರಕಾರ ದೇಶದ ಆರ್ಥಿಕ ಪುನಶ್ಚೇತನಕ್ಕೆ ಸಂಬಂಧಪಟ್ಟಂತೆ ಮಹಿಳೆಯರು ಸಕ್ರಿಯವಾಗಿ ಉದ್ಯೋಗದಲ್ಲಿ ತೊಡಗಬೇಕು, ಆರ್ಥಿಕತೆ ಉತ್ತೇಜನಕ್ಕೆ ಮಹಿಳೆಯರ ಸಕ್ರಿಯತೆ ಹೆಚ್ಚಬೇಕು ಎಂಬುದು ಇದರ ಉದ್ದೇಶವಾಗಿತ್ತು. ಹೀಗಿದ್ದರು ಕೂಡ ಜಪಾನ್​ನಲ್ಲಿ ಮಹಿಳೆಯರಿಗೆ ಸೂಕ್ತ ವೇದಿಕೆ ಇಲ್ಲ ಎಂಬುದು ಅಚ್ಚರಿಯ ವಿಚಾರ. ಅಷ್ಟೇ ಅಲ್ಲದೆ ವಿವಾಹವಾದ ಬಳಿಕ ಕೆಲಸಕ್ಕೆ ಬರುವ ಮಹಿಳೆಯರಿಗೆ ಫುಲ್​ಟೈಂ ಕೆಲಸಗಳು ಸಿಗುತ್ತಿಲ್ಲ.

ಜಪಾನ್​ನಲ್ಲಿ 25 ವಯಸ್ಸಿನಲ್ಲಿ ಭಾರತದಂತೆ ಮದುವೆ ಮಾಡಿಸಲಾಗುತ್ತದೆ. “25 ಕಳೆದರೆ ಕ್ರಿಸ್ಮಸ್ ಕೇಕ್ ನಂತೆ’ ಎಂಬ ಮಾತಿದೆ. ಅಂದರೆ ಕ್ರಿಸ್ಮಸ್ ಕೆಕ್ ಅನ್ನು ಡಿಸೆಂಬರ್ 25ರ ಬಳಿಕ ಮಾರಾಟ ಮಾಡಲಾಗುವುದಿಲ್ಲ ಎಂದರ್ಥ. ಈ ಕಾರಣಕ್ಕೆ 25ನೇ ವಯಸ್ಸಿಗೆ ಮದುವೆಯಾಗುತ್ತಾರೆ. ಆದರೆ, ಮದುವೆಯ ಬಳಿಕ ಬುದ್ಧಿವಂತ ಮಹಿಳೆಯರಿಗೆ ಉದ್ಯೋಗ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಹುಡುಗ, ಹುಡುಗಿ ಒಟ್ಟಿಗೆ ಓದುವಂತಿಲ್ಲ; ಶಿಕ್ಷಕ, ಶಿಕ್ಷಕಿ ಒಂದೆಡೆ ಕೆಲಸ ಮಾಡುವಂತಿಲ್ಲ: ಶಿಕ್ಷಣ ಪದ್ಧತಿ ಬದಲಿಸಿ ಫತ್ವಾ ಹೊರಡಿಸಿದ ತಾಲಿಬಾನ್

Video: ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್​ ಹಿಡಿದು ನಿಂತ ತಾಲಿಬಾನಿಗಳು; ಆ ಒಂದು ಮಾತನ್ನು ಬಲವಂತವಾಗಿ ಹೇಳಿಸಿದರು !

(Japans huge army of under-employed ex-housewives)

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್