Video: ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್​ ಹಿಡಿದು ನಿಂತ ತಾಲಿಬಾನಿಗಳು; ಆ ಒಂದು ಮಾತನ್ನು ಬಲವಂತವಾಗಿ ಹೇಳಿಸಿದರು !

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅವರು ನಾವು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಆ ಮಾತನ್ನು ಅವರು ಉಳಿಸಿಕೊಳ್ಳುತ್ತಿಲ್ಲ.

Video: ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್​ ಹಿಡಿದು ನಿಂತ ತಾಲಿಬಾನಿಗಳು; ಆ ಒಂದು ಮಾತನ್ನು ಬಲವಂತವಾಗಿ ಹೇಳಿಸಿದರು !
ಸುದ್ದಿ ನಿರೂಪಕನ ಹಿಂದೆ ಗನ್​ ಹಿಡಿದು ನಿಂತ ತಾಲಿಬಾನಿಗಳು
Follow us
TV9 Web
| Updated By: Lakshmi Hegde

Updated on:Aug 30, 2021 | 12:13 PM

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಬಂದಿದ್ದೇಬಂದಿದ್ದು, ಅಲ್ಲಿಂದ ಪರಾರಿಯಾಗಲು ಅನೇಕರು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ತಾಲಿಬಾನ್​ ಉಗ್ರರು ಜನರಿಗೆ ಭರವಸೆ ನೀಡುತ್ತಿದ್ದಾರೆ..ಯಾರೂ ದೇಶಬಿಟ್ಟು ಹೋಗಬೇಡಿ. ಇಸ್ಲಾಮಿಕ್​ ಆಡಳಿತಕ್ಕೆ ಹೆದರಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಮತ್ತೆಮತ್ತೆ ಭಯಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ.

ಇದೀಗ ತಾಲಿಬಾನಿಗಳು, ಸುದ್ದಿ ವಾಹಿನಿಯೊಂದರ ಕಚೇರಿಗೆ ನುಗ್ಗಿ, ಅಲ್ಲಿ ಸ್ಟುಡಿಯೋದಲ್ಲಿ ಸುದ್ದಿ ಓದುತ್ತಿದ್ದ ನಿರೂಪಕನ ಹಿಂದೆ ಗನ್​ ಹಿಡಿದು ನಿಂತು ಹೆದರಿಸುತ್ತಿರುವ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗಿದೆ. ಆ ನಿರೂಪಕನ ಸುತ್ತ 6-7 ಉಗ್ರರು ನಿಂತಿದ್ದನ್ನು ವಿಡಿಯೋದಲ್ಲಿ ನೋಡಬಹುದು. ‘ತಾಲಿಬಾನಿಗಳಿಗೆ ಹೆದರಬೇಡಿ ಎಂದು ನಿಮ್ಮ ಸುದ್ದಿ ವಾಹಿನಿ ಮೂಲಕ ಹೇಳು..ಇಸ್ಲಾಮಿಕ್ ಆಡಳಿತಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳು, ತಾಲಿಬಾನಿಗಳನ್ನು ಹೊಗಳು’ಎಂದು ನಿರೂಪಕನಿಗೆ ಗನ್​ ತೋರಿಸಿ, ಬಲವಂತವಾಗಿ ಹೇಳಿಸಿದ್ದಾರೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಅವರು ನಾವು ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಕೆಲವು ಮಾಧ್ಯಮಗಳು ತಾಲಿಬಾನಿಗಳ ಆಡಳಿತ ಶುರುವಾಗುತ್ತಿದ್ದಂತೆ ತಮ್ಮಲ್ಲಿರುವ ಮಹಿಳಾ ಉದ್ಯೋಗಿಗಳನ್ನೆಲ್ಲ ಕೆಲಸದಿಂದ ತೆಗೆದುಹಾಕಿದ್ದಾರೆ. ಕೆಲವೇ ದಿನಗಳ ಹಿಂದೆ, ಕಾಬೂಲ್​​ನಲ್ಲಿ ವರದಿ ಮಾಡುತ್ತಿದ್ದ ಟೋಲೋ ನ್ಯೂಸ್​ ವರದಿಗಾರ ಮತ್ತು ಕ್ಯಾಮರಾಮನ್​​ಗೆ ಉಗ್ರರು ಥಳಿಸಿದ್ದರು. ಕಾಬೂಲ್​ನ್ನು ವಶಪಡಿಸಿಕೊಂಡಾಗಿನಿಂದಲೂ ಅಲ್ಲಿನ ಪತ್ರಕರ್ತರ ಮನೆಗಳನ್ನು ತಾಲಿಬಾನಿಗಳು ಹುಡುಕುತ್ತಿದ್ದಾರೆ. DW ಎಂಬ ನ್ಯೂಸ್​ ಚಾನಲ್​ನಲ್ಲಿ ಕೆಲಸ ಮಾಡುತ್ತಿದ್ದ ವರದಿಗಾರನೊಬ್ಬನನ್ನು ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: Viral News: ಪ್ರತಿ ಶುಕ್ರವಾರ ಮೀನು ಮತ್ತು ಚಿಪ್ಸ್ ಸೇವನೆಯಿಂದ ಇವರು ದೀರ್ಘಾಯುಷ್ಯ ಪಡೆದರಂತೆ!

ಅತಿ ಹೆಚ್ಚು ಸರ್ಜರಿಗಳನ್ನು ಯಶಸ್ವಿಯಾಗಿ ನೆರವೇರಿಸಿದ ಕಿಮ್ಸ್​​; ಕರ್ನಾಟಕದಲ್ಲಿಯೇ ಅಗ್ರಸ್ಥಾನವನ್ನು ಪಡೆಯುವಲ್ಲಿ ಸಫಲ

Published On - 10:06 am, Mon, 30 August 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್