AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಜೀನ್ಸ್ ಪ್ಯಾಂಟ್​ ಮೇಲೆ ಪೇಂಟ್ ಇರುವುದಲ್ಲ’ ಕೇರಳದಲ್ಲಿ ಚಿನ್ನ ಸಾಗಣೆ ಮಾಡಲು ವ್ಯಕ್ತಿ ಮಾಡಿದ ತಂತ್ರ

ಎಎನ್ಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್​ಗೆ ಹಚ್ಚಲಾಗಿತ್ತು. ನೋಡಲು ಹಳದಿ ಬಣ್ಣದ ಪೇಂಟ್​ನಂತೆ ಗೋಚರವಾಗುತ್ತಿತ್ತು.

‘ಜೀನ್ಸ್ ಪ್ಯಾಂಟ್​ ಮೇಲೆ ಪೇಂಟ್ ಇರುವುದಲ್ಲ’ ಕೇರಳದಲ್ಲಿ ಚಿನ್ನ ಸಾಗಣೆ ಮಾಡಲು ವ್ಯಕ್ತಿ ಮಾಡಿದ ತಂತ್ರ
‘ಜೀನ್ಸ್ ಮೇಲೆ ಪೇಂಟ್ ಇರುವುದಲ್ಲ’ ಕೇರಳದಲ್ಲಿ ಚಿನ್ನ ಸಾಗಣೆ ಮಾಡಲು ವ್ಯಕ್ತಿ ಮಾಡಿದ ತಂತ್ರ
TV9 Web
| Updated By: shruti hegde|

Updated on:Aug 30, 2021 | 2:32 PM

Share

ಕೇರಳದ ಕಣ್ಣೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕನಿಂದ 302 ಗ್ರಾಂ ಚಿನ್ನವನ್ನು ಅಧಿಕಾರಿಗಳು ಸೋಮವಾರ ವಶಪಡಿಸಿಕೊಂಡಿದ್ದಾರೆ. ಏರ್ ಇಂಟೆಲಿಜೆನ್ಸ್ ಯುನಿಟ್ ಮತ್ತು ಕಸ್ಟಮ್ ಅಧಿಕಾರಿಗಳು ಪ್ರಯಾಣಿಕನಿಂದ ಸುಮಾರು 14 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಪ್ರಯಾಣಿಕನಿಂದ ವಶವಡಿಸಿಕೊಂಡಿದ್ದಾರೆ. ಎಎನ್ಐ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಚಿನ್ನವನ್ನು ಪೇಸ್ಟ್ ರೂಪದಲ್ಲಿ ಜೀನ್ಸ್ ಪ್ಯಾಂಟ್​ಗೆ ಹಚ್ಚಲಾಗಿತ್ತು. ನೋಡಲು ಹಳದಿ ಬಣ್ಣದ ಪೇಂಟ್​ನಂತೆ ಗೋಚರವಾಗುತ್ತಿತ್ತು. ಎರಡು ಲೇಯರ್ ಹೊಂದಿರುವ ಜೀನ್ಸ್ ಪ್ಯಾಂಟ್ ಧರಿಸಿದ ಪ್ರಯಾಣಿಕ ಚಿನ್ನದ ಪೇಸ್ಟ್ಅನ್ನು ಹಚ್ಚಿಕೊಂಡಿದ್ದರು ಎಂಬುದು ತಿಳಿದು ಬಂದಿದೆ.

ಜೀನ್ಸ್ ಪ್ಯಾಂಟ್​ನ ಫೋಟೋ ಇದೀಗ ಫುಲ್ ವೈರಲ್ ಆಗಿದೆ. ಜೀನ್ಸ್ ಪ್ಯಾಂಟ್​ ಎರಡನೇ ಲೇಯರ್​ನಲ್ಲಿ ಹಳದಿ ಬಣ್ಣದಲ್ಲಿ ಗೋಚರವಾಗುತ್ತಿರುವ ಚಿನ್ನದ ಪೇಸ್ಟ್ಅನ್ನು ನೋಡಬಹುದು. ಜೀನ್ಸ್ ಪ್ಯಾಂಟ್​ ಉದ್ದಕ್ಕೂ ಚಿನ್ನದ ಪೇಸ್ಟ್ಅನ್ನು ಹಚ್ಚಲಾಗಿದೆ.

ಡಬಲ್ ಲೇಯರ್ ಪ್ಯಾಂಟ್​ನಲ್ಲಿ ಚಿನ್ನದ ಪೇಸ್ಟ್ಅನ್ನು ತೆಳುವಾಗಿ ಹಚ್ಚಲಾಗಿದೆ ಎಂದು ಏರ್ ಇಂಟಲಿಜೆನ್ಸ್​ ಯೂನಿಟ್ಸ್ ಅಧಿಕಾರಿಯೋರ್ವರು ಮಾಹಿತಿ ಹಂಚಿಕೊಂಡಿದ್ದಾರೆ. ಇದು 302 ಗ್ರಾಂ ಗೋಲ್ಡ್. ತೆಳುವಾದ ಪೇಸ್ಟ್ ತಯಾರಿಸಿ ಪೇಂಟ್ನಂತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯಗೊಂಡಿದ್ದಾರೆ. ಕಳ್ಳಸಾಗಾಟನೆಗೆ ಏನೆಲ್ಲಾ ಪ್ಲಾನ್ ಮಾಡುತ್ತಾರೆ .. ಎಂತಾ ತಂತ್ರವಿದು! ಎಂದು ಓರ್ವರು ಹೇಳಿದ್ದಾರೆ. ಇಂತಹ ವಿಲಕ್ಷಣ ಚಿನ್ನದ ಕಳ್ಳಸಾಗಣೆ ತಂತ್ರಗಳು ಹೊಸದೇನಲ್ಲ. ಇತ್ತೀಚೆಗೆ ಅಮೃತಸರದ ವ್ಯಕ್ತಿಯು ತನ್ನ ಒಳ ಉಡುಪಿನಲ್ಲಿ 1,894 ಗ್ರಾಂ ಚಿನ್ನದ ಪೇಸ್ಟ್ ಕಳ್ಳಸಾಗಣೆ ಮಾಡಲು ಪ್ರಯತ್ನಿಸಿರುವುದು ಬೆಳಕಿಗೆ ಬಂದಿತ್ತು. ಈ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ:

ಕಳ್ಳತನ, ಕೊರೊನಾ ನಿಯಮ ಉಲ್ಲಂಘನೆಗೆ ಬ್ರೇಕ್ ಹಾಕಲು ವಿನೂತನ ಪ್ರಯತ್ನ; ಅಶರೀರ ವಾಣಿಯಿಂದ ಬರುತ್ತೆ ಎಚ್ಚರಿಕೆ

ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿದ ಆರೋಪದಡಿ ಮಹಿಳೆ ಬಂಧನ; 18 ಲಕ್ಷ ಮೌಲ್ಯದ ಚಿನ್ನಾಭರಣ ವಶ

(Air intelligence seized 302 gram gold by passengers in Kannur airport kerala)

Published On - 2:31 pm, Mon, 30 August 21

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?