Video: ಕಾಮಸೂತ್ರ ಪ್ರತಿಯನ್ನು ಹರಿದು, ಬೆಂಕಿಯಿಟ್ಟ ಭಜರಂಗದಳದ ಕಾರ್ಯಕರ್ತರು; ಪುಸ್ತಕದ ಅಂಗಡಿಗೇ ಬೆಂಕಿ ಹಚ್ಚುತ್ತೇವೆಂದು ಎಚ್ಚರಿಕೆ
ಪ್ರಾಚೀನ ಭಾರತದ ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ ಸಂಸ್ಕೃತ ಭಾಷೆಯಲ್ಲಿದ್ದು, ಪ್ರೀತಿ ಮತ್ತು ಲೈಂಗಿಕತೆಯ ಸೂತ್ರಗಳನ್ನೊಂಡ ಪ್ರಸಿದ್ಧ ಪುಸ್ತಕ.
ಹಿಂದು ಸಂಘಟನೆ ಭಜರಂಗ ದಳದ ಸದಸ್ಯರು ಕಾಮಸೂತ್ರ ಪುಸ್ತಕ (Kama Sutra)ದ ಪ್ರತಿಯನ್ನು ಹರಿದು, ಬೆಂಕಿ ಹಚ್ಚಿದ್ದಾರೆ. ಗುಜರಾತ್ (Gujarat)ನ ಅಹ್ಮದಾಬಾದ್ ನಗರದಲ್ಲಿ ಘಟನೆ ನಡೆದಿದ್ದು, ಈ ಪುಸ್ತಕದಲ್ಲಿ ಹಿಂದು ದೇವತೆಗಳನ್ನು ಅಶ್ಲೀಲ ಭಂಗಿಯಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಹ್ಮದಾಬಾದ್ನ ಪುಸ್ತಕದ ಅಂಗಡಿ ಹೊರಗೆ, ಕಾಮಸೂತ್ರದ ಪ್ರತಿಗಳನ್ನು ಹಾಕಿ, ಬೆಂಕಿ ಇಟ್ಟಿದ್ದಾರೆ.
ಪ್ರಾಚೀನ ಭಾರತದ ತತ್ವಜ್ಞಾನಿ ವಾತ್ಸಾಯನ ಬರೆದ ಕಾಮಸೂತ್ರ ಸಂಸ್ಕೃತ ಭಾಷೆಯಲ್ಲಿದ್ದು, ಪ್ರೀತಿ ಮತ್ತು ಲೈಂಗಿಕತೆಯ ಸೂತ್ರಗಳನ್ನೊಂಡ ಪ್ರಸಿದ್ಧ ಪುಸ್ತಕ. ಇದನ್ನು ಸುಡುವಾಗ ಭಜರಂಗ ದಳದ ಸದಸ್ಯರು ಜೈ ಶ್ರೀರಾಮ್, ಹರಹರ ಮಹದೇವ್ ಎಂದು ಘೋಷಣೆ ಕೂಗಿದ್ದಾರೆ. ಹಾಗೇ, ಇದರ ವಿಡಿಯೋಗಳೂ ಕೂಡ ಸಿಕ್ಕಾಪಟೆ ವೈರಲ್ ಆಗಿವೆ.
ಭಜರಂಗದಳದ ಕಾರ್ಯಕರ್ತರು ಯಾವ ಪುಸ್ತಕದ ಅಂಗಡಿಯಿಂದ ಈ ಕಾಮಸೂತ್ರ ಪುಸ್ತಕವನ್ನು ತಂದಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹಾಗೇ, ಆ ಪುಸ್ತಕದ ಅಂಗಡಿ ಮತ್ತೊಮ್ಮೆ ಕಾಮಸೂತ್ರ ಪುಸ್ತಕ ತಂದು ಮಾರಾಟ ಮಾಡಿದರೆ, ಇಟ್ಟುಕೊಂಡರೆ ಇಡೀ ಬುಕ್ ಸ್ಟಾಲ್ಗೇ ಬೆಂಕಿ ಹಚ್ಚುತ್ತೇವೆ ಎಂದೂ ಎಚ್ಚರಿಕೆ ನೀಡಿದ್ದಾರೆ ಎಂದು ಇಂಡಿಯಾ ಟುಡೆ ಎಚ್ಚರಿಕೆ ನೀಡಿದೆ.
Vatsayana’s Kaamsutra has been a pride of India for centuries as has been the sculptures of Ajanta Ellora Khajuraho and Konark. So what do we expect? Bamiyan Buddha style demolition of all Indian heritage? 2/N pic.twitter.com/HX4vwHWlOV
— DP (@dpbhattaET) August 28, 2021
ಇದನ್ನೂ ಓದಿ: ನನ್ನ ಮಗಳ ಸಾವು ಆಗಬೇಕು, ದೇವರಲ್ಲಿ ನನ್ನ ಪ್ರಾರ್ಥನೆ; ಮಗಳ ಸ್ಥಿತಿಗೆ ನೊಂದ ತಾಯಿಯ ವಿಚಿತ್ರ ಆಸೆ
Shivarajkumar: ‘ಭಜರಂಗಿ 2’ ರಿಲೀಸ್ ಡೇಟ್ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ
Published On - 12:58 pm, Mon, 30 August 21