AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shivarajkumar: ‘ಭಜರಂಗಿ 2’ ರಿಲೀಸ್​ ಡೇಟ್​ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ

Bhajarangi 2 release date: ‘ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ. ಆದರೆ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರಿಗೆ ಕೊರೊನಾ ಅಡ್ಡಿಯಾಗಿದೆ. ಚಿತ್ರದ ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದೆ.

Shivarajkumar: ‘ಭಜರಂಗಿ 2’ ರಿಲೀಸ್​ ಡೇಟ್​ ಮುಂದೂಡಿಕೆ; ಕೊರೊನಾ ಭೀತಿಯಿಂದ ಚಿತ್ರತಂಡದ ನಿರ್ಧಾರ
‘ಭಜರಂಗಿ 2’ ರಿಲೀಸ್​ ಡೇಟ್​ ಮುಂದೂಡಿಕೆ
TV9 Web
| Edited By: |

Updated on: Aug 30, 2021 | 12:24 PM

Share

ಚಿತ್ರರಂಗವನ್ನು ಕೊರೊನಾ ವೈರಸ್​ ಕಾಡುತ್ತಿದೆ. ಮೊದಲನೇ ಅಲೆ ಆರಂಭ ಆದಾಗಿನಿಂದ ಇಂದಿನವರೆಗೆ ಸಿನಿಮಾರಂಗದ ವ್ಯವಹಾರದ ಮೇಲೆ ಕೊವಿಡ್​ ಪೆಟ್ಟು ಕೊಡುತ್ತಲೇ ಇದೆ. ಇನ್ನೇನು ಎರಡನೇ ಅಲೆ ಶಮನ ಆಗುತ್ತಿದೆ ಎಂದುಕೊಂಡಿದ್ದ ಹಲವು ಸಿನಿಮಾ ತಂಡಗಳು ರಿಲೀಸ್​ ಡೇಟ್​ ಘೋಷಿಸಿಕೊಂಡಿದ್ದವು. ಶಿವರಾಜ್​ಕುಮಾರ್​ (Shivarajkumar) ನಟನೆಯ ಬಹುನಿರೀಕ್ಷಿತ ‘ಭಜರಂಗಿ 2’ (Bhajarangi 2) ಸಿನಿಮಾ ಸೆ.10ರಂದು ಬಿಡುಗಡೆಯಾಗಲು ಸಜ್ಜಾಗಿತ್ತು. ಆದರೆ ಈಗ ಕೊರೊನಾ ಭೀತಿಗೆ ಚಿತ್ರತಂಡ ನಿರ್ಧಾರ ಬದಲಿಸಿದೆ. ಸೆ.10ರಂದು ಸಿನಿಮಾ ರಿಲೀಸ್​ ಮಾಡುವುದು ಬೇಡ ಎಂದು ನಿರ್ಮಾಪಕರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಶಿವರಾಜ್​ಕುಮಾರ್​ ಹೇಳಿಕೆ ನೀಡಿದ್ದಾರೆ.

‘ಸೆ.1ರಂದು ನಮ್ಮ ಚಿತ್ರದ ಟ್ರೇಲರ್​ ಬಿಡುಗಡೆ ಆಗಬೇಕಿತ್ತು. ಸೆ.10 ಸಿನಿಮಾ ರಿಲೀಸ್​ ಆಗಬೇಕಿತ್ತು. ಆದರೆ ಅದು ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣ ನಿಮಗೂ ಗೊತ್ತು. ಕೊರೊನಾ ಕೇಸ್​ಗಳು ಜಾಸ್ತಿ ಆಗುತ್ತಿವೆ. ವೀಕೆಂಡ್​ ಲಾಕ್​ಡೌನ್​ ಮತ್ತು ನೈಟ್​ ಕರ್ಫ್ಯೂ ಇರುವುದರಿಂದ ಸೆ.10ರಂದು ಸಿನಿಮಾ ಬಿಡುಗಡೆ ಮಾಡಲು ಆಗುತ್ತಿಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

‘ಆದಷ್ಟು ಬೇಗ ಹೊಸ ರಿಲೀಸ್​ ದಿನಾಂಕವನ್ನು ನಾವು ನಿಮಗೆ ತಿಳಿಸುತ್ತೇವೆ. ತುಂಬಾ ಲೇಟ್​ ಆಗುವುದಿಲ್ಲ. ಆದಷ್ಟು ಬೇಗ ರಿಲೀಸ್​ ಮಾಡಬೇಕು ಎಂದು ನಾವು ಪ್ರಯತ್ನಿಸುತ್ತಿದ್ದೇವೆ. ಶೇ.100ರಷ್ಟು ಚಿತ್ರಮಂದಿರ ತುಂಬಿದ್ದಾಗಲೇ ಜನರು ಸಿನಿಮಾದ ಮಜವನ್ನು ಅನುಭವಿಸಬಹುದು. ತಡ ಆಗುತ್ತಿರುವುದಕ್ಕೆ ದಯವಿಟ್ಟು ಬೇಜಾರು ಮಾಡಿಕೊಳ್ಳಬೇಡಿ. ಟ್ರೇಲರ್​ ರಿಲೀಸ್​ ಮಾಡಿ, ಅದರಲ್ಲೇ ಹೊಸ ರಿಲೀಸ್​ ಡೇಟ್​​ ತಿಳಿಸುತ್ತೇವೆ’ ಎಂದು ಶಿವಣ್ಣ ಹೇಳಿದ್ದಾರೆ.

‘ಈ ಸಿನಿಮಾ ಸೆಟ್ಟೇರಿದಾಗಿನಿಂದಲೂ ಎಷ್ಟೇ ಅಡೆತಡೆಗಳು ಬಂದರೂ ಆಂಜನೇಯ ಸ್ವಾಮಿ ಕೃಪೆಯಿಂದ ಮುನ್ನುಗ್ಗಿಕೊಂಡು ಹೋಗುತ್ತಿದ್ದೇವೆ. ನಾವು ಪಟ್ಟ ಕಷ್ಟವನ್ನು ನೀವು ಅನುಭವಿಸಬಾರದು. ನೀವು ಆರಾಮಾಗಿ ಬಂದು ಸಿನಿಮಾ ನೋಡಬೇಕು. ನಾವು ಪಟ್ಟಿರುವ ಕಷ್ಟಕ್ಕೆ ನೀವು ಪ್ರತಿಫಲ ನೀಡುತ್ತೀರಿ ಎಂಬ ಭರವಸೆ ಇದೆ. ರಿಲೀಸ್​ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಇಡೀ ತಂಡದಿಂದ ಮತ್ತೊಮ್ಮೆ ಕ್ಷಮೆ ಕೇಳುತ್ತೇನೆ’ ಎಂದು ಅಭಿಮಾನಿಗಳ ಜೊತೆ ಶಿವರಾಜ್​ಕುಮಾರ್​ ಮಾಹಿತಿ ಹಂಚಿಕೊಂಡಿದ್ದಾರೆ.

ಎ. ಹರ್ಷ ನಿರ್ದೇಶನದ ಈ ಚಿತ್ರಕ್ಕೆ ಜಯಣ್ಣ ಮತ್ತು ಭೋಗೇಂದ್ರ ಬಂಡವಾಳ ಹೂಡಿದ್ದಾರೆ. ‘ಭಜರಂಗಿ’ ಸೂಪರ್​ ಹಿಟ್​ ಆಗಿದ್ದರಿಂದ ‘ಭಜರಂಗಿ 2’ ಮೇಲೆ ಜನರಿಗೆ ಹೆಚ್ಚು ನಿರೀಕ್ಷೆ ಇದೆ. ಆದರೆ ಸಿನಿಮಾ ಕಣ್ತುಂಬಿಕೊಳ್ಳಲು ಪ್ರೇಕ್ಷಕರಿಗೆ ಕೊರೊನಾ ಅಡ್ಡಿಯಾಗಿದೆ. ಹೊಸ ರಿಲೀಸ್​ ಡೇಟ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ಇದನ್ನೂ ಓದಿ:

ಯುವ ನಟನಿಗೆ ಮಚ್ಚು ಹಿಡಿಯುವ ಪಾಠ ಮಾಡಿದ ಶಿವರಾಜ್​ಕುಮಾರ್​

ಕೆಎಸ್​ ಈಶ್ವರಪ್ಪ ಜೊತೆ ಶಿವರಾಜ್​ಕುಮಾರ್​ ನಡೆಸಿದ ಮಾತುಕತೆ ಏನು? ಇಲ್ಲಿದೆ ವಿಡಿಯೋ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'