AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಕಂಪೆನಿಯಲ್ಲಿ ಫಿಟ್​ ಆಗಿದ್ರೆ ಸಿಗುತ್ತೆ ಹೆಚ್ಚುವರಿ ವೇತನ ಹಾಗೂ 10 ಲಕ್ಷ ರೂ..!

ತನ್ನ ಉದ್ಯೋಗಿಗಳ ಆರೋಗ್ಯದ ಬಗ್ಗೆ ಜೆರೋಧಾ ಕಂಪೆನಿ ವಹಿಸಿರುವ ಕಾಳಜಿ ಬಗ್ಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಆದರೆ ಇಂಡಿಯನ್ ಯುನಿಕಾರ್ನ್ ಜೆರೋಧಾ ಬ್ರೋಕಿಂಗ್ ಲಿಮಿಟೆಡ್ ಇದೇ ಮೊದಲ ಬಾರಿ ಇಂತಹ ವಿಭಿನ್ನತೆಗೆ ಕೈ ಹಾಕಿಲ್ಲ ಎಂಬುದು ಇಲ್ಲಿ ವಿಶೇಷ.

ಈ ಕಂಪೆನಿಯಲ್ಲಿ ಫಿಟ್​ ಆಗಿದ್ರೆ ಸಿಗುತ್ತೆ ಹೆಚ್ಚುವರಿ ವೇತನ ಹಾಗೂ 10 ಲಕ್ಷ ರೂ..!
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 30, 2021 | 5:47 PM

Share

ಭಾರತದ ಬಹುತೇಕ ಐಟಿ ಕಂಪೆನಿಗಳು ಕೊರೋನಾ ಕಾರಣದಿಂದ ತನ್ನ ಉದ್ಯೋಗಿಗಳಿಗೆ ವರ್ಕ್​ ಫ್ರಮ್ ಹೋಮ್ ಆಯ್ಕೆ ನೀಡಿದೆ. ಹೀಗೆ ಮನೆಯಿಂದ ಕೆಲಸ ಮಾಡುವ ಅನೇಕ ಉದ್ಯೋಗಿಗಳ ದೊಡ್ಡ ಕಂಪ್ಲೇಟ್ ಎಂದರೆ ಹೆಚ್ಚುವರಿ ಕೆಲಸದ ಒತ್ತಡ ಎಂಬುದು. ಇದಾಗ್ಯೂ ಇಲ್ಲೊಂದು ಕಂಪೆನಿ ಮಾತ್ರ ತನ್ನ ಉದ್ಯೋಗಿಗಳ ಆರೋಗ್ಯದ ಕಡೆ ಗಮನಹರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ವೇಳೆ ವರ್ಕ್​ ಫ್ರಮ್ ಹೋಮ್​​ನಲ್ಲಿ ಫಿಟ್​ ಅ್ಯಂಡ್ ಫೈನ್ ಆಗಿದ್ರೆ ಇದೇ ಕಂಪೆನಿ ಬೋನಸ್ ವೇತನ ಕೂಡ ನೀಡುತ್ತದೆ. ಅಷ್ಟೇ ಅಲ್ಲದೆ ಕಂಪೆನಿಯ ಆರೋಗ್ಯವೇ ಭಾಗ್ಯದ ಟಾರ್ಗೆಟ್ ತಲುಪಿದರೆ 10 ಲಕ್ಷ ರೂ. ಗೆಲ್ಲುವ ಅವಕಾಶ ಕೂಡ ಇದೆ. ಹೌದು, ಇಂತಹದೊಂದು ವಿಭಿನ್ನ ಆಫರ್ ನೀಡಿರುವುದು ಇಂಡಿಯನ್ ಯುನಿಕಾರ್ನ್ ಜೆರೋಧಾ ಬ್ರೋಕಿಂಗ್ ಲಿಮಿಟೆಡ್ (Indian unicorn Zerodha Broking Limited) ಕಂಪೆನಿ.

ಈ ಕಂಪೆನಿಯು ತನ್ನ ಉದ್ಯೋಗಿಗಳನ್ನು ಸದೃಢವಾಗಿ ಮತ್ತು ಆರೋಗ್ಯವಾಗಿರಲು ಪ್ರೋತ್ಸಾಹಿಸಲು ಗೆಟ್ ಹೆಲ್ತಿ ಎಂಬ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ತನ್ನ ಉದ್ಯೋಗಿಗಳು ಆರೋಗ್ಯವಂತರಾಗಿ ಇರಬೇಕೆಂಬುದು. ಏಕೆಂದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಉದ್ಯೋಗಿಗಳ ದೈಹಿಕ ಚಟುವಟಿಕೆ ಕಡಿಮೆಯಾಗಿದೆ. ಇದು ಅವರ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಪರಿಗಣಿಸಿ, ಜೆರೋಧಾದ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಅವರು ‘Get Healthy’ ಕಾರ್ಯಕ್ರಮವನ್ನು ಘೋಷಿಸಿದ್ದಾರೆ. ಇದರ ಅಡಿಯಲ್ಲಿ ಉದ್ಯೋಗಿಗಳಿಗೆ ಒಂದು ತಿಂಗಳ ಬೋನಸ್ ವೇತನ ಮತ್ತು 10 ಲಕ್ಷ ರೂ. ನೀಡಿ ಪ್ರೋತ್ಸಾಹಿಸಲಾಗುತ್ತಿದೆ.

ಮೊದಲ ಲಾಕ್‌ಡೌನ್ ವೇಳೆ ನಮ್ಮ ತಂಡದ ಬಹುತೇಕ ಉದ್ಯೋಗಿಗಳು ದೈಹಿಕ ಚಟುವಟಿಕೆಯ ಕೊರತೆ, ಕೆಲಸದ ಒತ್ತಡ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಿತ್ತು. ಇಂತಹ ಸಮಸ್ಯೆಯನ್ನು ಹೋಗಲಾಡಿಸಲು ಇರುವ ಮಾರ್ಗಗಳೇನು ಎಂದು ಯೋಚಿಸಿದ್ದೆವು. ಅದರಂತೆ ಉದ್ಯೋಗಿಗಳನ್ನು ಆರೋಗ್ಯವಾಗಿಟ್ಟು ಅವರನ್ನು ಪ್ರೋತ್ಸಾಹಿಸುವುದು ಉತ್ತಮ ಎಂಬುದನ್ನು ಕಂಡುಕೊಂಡೆವು. ಇದೀಗ ಅದರ ಫಲಿತಾಂಶಗಳು ಅದ್ಭುತವಾಗಿದೆ ಎಂದು ಜೆರೋಧಾದ ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ತಿಳಿಸಿದ್ದಾರೆ.

ಇದಕ್ಕಾಗಿ ಉದ್ಯೋಗಿಗಳಿಗೆ ಒಂದು ರೀತಿಯಲ್ಲಿ ಆರೋಗ್ಯಕರ ಟಾಸ್ಕ್ ನೀಡುತ್ತಿದ್ದೇವೆ. ಅಂದರೆ ಇಲ್ಲಿ 12 ತಿಂಗಳಲ್ಲಿ ಫಿಟ್​ನೆಸ್ ಗುರಿ ನೀಡಲಾಗುತ್ತದೆ. ಪ್ರತಿ ತಿಂಗಳು ಆರೋಗ್ಯದಲ್ಲಿ ಉಂಟಾದ ಬದಲಾವಣೆಯ ಪ್ರಗತಿಯನ್ನು ಅಪ್​ಡೇಟ್ ಮಾಡಬೇಕು. ಹೀಗೆ ಫಿಟ್​ನೆಸ್ ವಿಷಯದಲ್ಲಿ ಗುರಿ ತಲುಪಿದ ಪ್ರತಿಯೊಬ್ಬರೂ 1 ತಿಂಗಳ ಸಂಬಳವನ್ನು ಬೋನಸ್ ಆಗಿ ಪಡೆಯಲಿದ್ದಾರೆ. ಹಾಗೆಯೇ ಗುರಿ ತಲುಪಿದವರಲ್ಲಿ ಒಬ್ಬರನ್ನು ಲಕ್ಕಿ ಡ್ರಾ ಮೂಲಕ ಆಯ್ಕೆ ಮಾಡಿ ಆತನಿಗೆ 10 ಲಕ್ಷ ರೂ ಬಹುಮಾನವಾಗಿ ನೀಡಲಿದ್ದೇವೆ ಎಂದು ಕಾಮತ್ ತಿಳಿಸಿದ್ದಾರೆ.

ತನ್ನ ಉದ್ಯೋಗಿಗಳ ಆರೋಗ್ಯದ ಬಗ್ಗೆ ಜೆರೋಧಾ ಕಂಪೆನಿ ವಹಿಸಿರುವ ಕಾಳಜಿ ಬಗ್ಗೆ ಇದೀಗ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಒಂದು ಕಂಪೆನಿ ಎಂದರೆ ಹೀಗಿರಬೇಕು ಎಂದು ಜೆರೋಧಾ ಕಂಪೆನಿಯ ನಡೆಯನ್ನು ಹಲವರು ಸೋಷಿಯಲ್ ಮೀಡಿಯಾದಲ್ಲಿ ಹಾಡಿಹೊಗಳಿದ್ದಾರೆ. ಆದರೆ ಇಂಡಿಯನ್ ಯುನಿಕಾರ್ನ್ ಜೆರೋಧಾ ಬ್ರೋಕಿಂಗ್ ಲಿಮಿಟೆಡ್ ಇದೇ ಮೊದಲ ಬಾರಿ ಇಂತಹ ವಿಭಿನ್ನತೆಗೆ ಕೈ ಹಾಕಿಲ್ಲ ಎಂಬುದು ಇಲ್ಲಿ ವಿಶೇಷ. ಏಕೆಂದರೆ ಈ ಹಿಂದೆಯೇ ಕಂಪೆನಿಯು ಸಂಜೆ 6 ರ ನಂತರ ಮತ್ತು ರಜಾದಿನಗಳಲ್ಲಿ ಕೆಲಸಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತುಕತೆಯನ್ನು ನಿಷೇಧಿಸಿತ್ತು. ಆ ಮೂಲಕ ಉದ್ಯೋಗಿಗಳ ವೈಯುಕ್ತಿಕ ಜೀವನದ ಮೌಲ್ಯವನ್ನು ಎತ್ತಿಹಿಡಿದಿತ್ತು. ಇದೀಗ ಆರೋಗ್ಯವೇ ಭಾಗ್ಯ ಎಂದು ಸಾರಲು ಬೋನಸ್ ವೇತನ ಹಾಗೂ 10 ಲಕ್ಷ ರೂ. ನೀಡುವುದಾಗಿ ಘೋಷಿಸಿಕೊಂಡು ಮತ್ತೊಮ್ಮೆ ಸುದ್ದಿಯಾಗಿದೆ. ಒಟ್ಟಿನಲ್ಲಿ ಕಂಪೆನಿಯ ಈ ನಡೆ ನೋಡಿ ಹೀಗೂ ಆಫರ್ ಕೊಡ್ತಾರಾ ಎಂದು ಉಳಿದ ಕಂಪೆನಿಗಳಲ್ಲಿರುವ ಉದ್ಯೋಗಿಗಳೂ ಆಶ್ಚರ್ಯ ವ್ಯಕ್ತಪಡಿಸುತ್ತಿರುವುದಂತು ಸುಳ್ಳಲ್ಲ.

ಇದನ್ನೂ ಓದಿ: ಮುಂದುವರೆದ ದರ ಸಮರ: ಭರ್ಜರಿ ರಿಚಾರ್ಜ್​ ಆಫರ್ ನೀಡಿದ ಮೂರು ಕಂಪೆನಿಗಳು

ಇದನ್ನೂ ಓದಿ: ಫ್ರೀಡಂ 251 ರೂ. ಮೊಬೈಲ್ ಕಥೆ ಏನಾಯ್ತು? ಮತ್ತೆ ಸುದ್ದಿಯಲ್ಲಿ ಕಂಪೆನಿಯ ಮಾಲೀಕ

ಇದನ್ನೂ ಓದಿ: ವಿದೇಶಿ ತಂಡದ ನಾಯಕತ್ವನ್ನು ತ್ಯಜಿಸಿ ಭಾರತದಲ್ಲಿ ಕಣಕ್ಕಿಳಿಯಲಿರುವ ಸ್ಟಾರ್ ಆಟಗಾರ

(This Company is Offering 1-month Salary, ₹10 Lakh Bonus to Its Employees Who Stay Fit)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ