ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India)ದಿಂದ ಗ್ರಾಹಕರಿಗಾಗಿ ಇಎಂಐ ವ್ಯವಸ್ಥೆ ಒದಗಿಸಲಾಗುತ್ತಿದೆ. ಎಸ್ಬಿಐ ಡೆಬಿಟ್ ಕಾರ್ಡ್ಗಳನ್ನು ಬಳಸಿ, ಪಾಯಿಂಟ್ ಆಫ್ ಸೇಲ್ಸ್ನಲ್ಲಿ ಮರ್ಚೆಂಟ್ ಸ್ಟೋರ್ನಿಂದ ಗ್ರಾಹಕ ಉಪಯೋಗಿ ವಸ್ತುಗಳನ್ನು ಖರೀದಿ ಮಾಡಬಹುದು. ಇನ್ನು ಅಮೆಜಾನ್, ಫ್ಲಿಪ್ಕಾರ್ಟ್ನಂಥ ಇ-ಕಾಮರ್ಸ್ನಲ್ಲಿ ಎಸ್ಬಿಐ ಡೆಬಿಟ್ ಕಾರ್ಡ್ನಲ್ಲಿ ಆನ್ಲೈನ್ ಮೂಲಕ ಖರೀದಿ ಮಾಡಿದರೂ ಇಎಂಐ ಸೌಲಭ್ಯ ದೊರೆಯಲಿದೆ.
ವೈಶಿಷ್ಟ್ಯ ಮತ್ತು ಅನುಕೂಲಗಳು – ಶೂನ್ಯ ಪ್ರೊಸೆಸಿಂಗ್ ಫೀ – ಶೂನ್ಯ ದಾಖಲಾತಿಗಳು ಹಾಗೂ ತಕ್ಷಣದ ವಿಲೇವಾರಿ – ಉಳಿತಾಯ ಖಾತೆ ಬ್ಯಾಲೆನ್ಸ್ ಬ್ಲಾಕ್ ಮಾಡುವುದಿಲ್ಲ – ಈ ಇಎಂಐ ಸೌಲಭ್ಯ ಪಡೆಯುತ್ತಿದ್ದಂತೆ ತಿಂಗಳಿಗೆ ಕಟ್ಟಬೇಕಾದಷ್ಟು ಮೊತ್ತದೊಂದಿಗೆ ಗ್ರಾಹಕರ ಉಳಿತಾಯ ಖಾತೆಯೊಂದಿಗೆ ಸ್ಟ್ಯಾಂಡಿಂಗ್ ಸೂಚನೆ ನೀಡಲಾಗುತ್ತದೆ.
ಈ ಕೆಳಗಿನ ಹಂತಗಳನ್ನು ಅನುಸರಿಸುವುದರೊಂದಿಗೆ ಡೆಬಿಟ್ ಕಾರ್ಡ್ ಇಎಂಐ ಮತ್ತು ಆನ್ಲೈನ್ ಇಎಂಐ ಪಡೆಯಿರಿ: ಡೆಬಿಟ್ ಕಾರ್ಡ್ ಇಎಂಐ – ಮರ್ಚೆಂಟ್ ಸ್ಟೋರ್ನ ಪಿಒಎಸ್ ಮಶೀನ್ನಲ್ಲಿ ಎಸ್ಬಿಐ ಡೆಬಿಟ್ ಕಾರ್ಡ್ ಸ್ವೈಪ್ ಮಾಡಬೇಕು – ಬ್ರ್ಯಾಂಡ್ ಇಎಂಐ- ಬ್ಯಾಂಕ್ ಇಎಂಐ ಆಯ್ಕೆ ಮಾಡಬೇಕು – ಮೊತ್ತ- ಮರುಪಾವತಿ ಅವಧಿ ನಮೂದಿಸಬೇಕು – ಪಿಒಎಸ್ ಮಶೀನ್ ಅರ್ಹತೆ ಪರಿಶೀಲಿಸಿದ ಮೇಲೆ PIN ನಮೂದಿಸಿ OK ಎಂಬುದನ್ನು ಒತ್ತಬೇಕು – ಯಶಸ್ವಿ ವಹಿವಾಟಿನ ನಂತರ ಸಾಲದ ಮೊತ್ತವು ಕಾಯ್ದಿರಿಸಲಾಗುತ್ತದೆ – ಚಾರ್ಜ್ ಸ್ಲಿಪ್ನಲ್ಲಿ ನಿಯಮ ಮತ್ತು ನಿಬಂಧನೆಗಳು ಇರುತ್ತವೆ. ಅದರ ಮೇಲೆ ಗ್ರಾಹಕರು ಸಹಿ ಮಾಡಬೇಕು
ಆನ್ಲೈನ್ ಇಎಂಐ – ಬ್ಯಾಂಕ್ನಲ್ಲಿನ ನೋಂದಾಯಿತ ಮೊಬೈಲ್ ಸಂಖ್ಯೆಯೊಂದಿಗೆ ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ಗೆ ಲಾಗ್ ಇನ್ ಆಗಬೇಕು – ಯಾವ ಬ್ರ್ಯಾಂಡ್ನ ವಸ್ತು ಎಂಬುದನ್ನು ಆರಿಸಿಕೊಳ್ಳಿ ಮತ್ತು ಪಾವತಿಯತ್ತ ತೆರಳಿ – ಸುಲಭ ಇಎಂಐ ಆಯ್ಕೆಯನ್ನು ವಿವಿಧ ಪಾವತಿ ಆಯ್ಕೆಯೊಂದಿಗೆ ಆರಿಸಿಕೊಳ್ಳಬೇಕು ಮತ್ತು ನಂತರ ಎಸ್ಬಿಐ ಆಯ್ಕೆ ಮಾಡಿಕೊಳ್ಳಬೇಕು – ಮೊತ್ತವು ತಾನಾಗಿಯೇ ತರಲಾಗುವುದು, ಅವಧಿಯನ್ನು ನಮೂದಿಸಿ ಹಾಗೂ Proceed ಎಂಬುದರ ಮೇಲೆ ಕ್ಲಿಕ್ ಮಾಡಿ – ಎಸ್ಬಿಐ ಲಾಗ್ ಇನ್ ಪುಟ ಕಾಣಿಸಿಕೊಳ್ಳುತ್ತದೆ, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಡೆಬಿಟ್ ಕಾರ್ಡ್ ಕ್ರೆಡಿನ್ಷಿಯಲ್ಗಳನ್ನು ನಮೂದಿಸಿ – ಸಾಲವು ಕಾಯ್ದಿರಿಸಲಾಗುತ್ತದೆ. ನಿಯಮ ಹಾಗೂ ನಿಬಂಧನೆಗಳು ಕಾಣಿಸಿಕೊಳ್ಳುತ್ತದೆ, ಒಂದು ವೇಳೆ ಅದನ್ನು ಒಪ್ಪಿಕೊಂಡಲ್ಲಿ ಆರ್ಡರ್ ಬುಕ್ ಆಗುತ್ತದೆ.
ಸಾಲದ ಮೊತ್ತ ಹಾಗೂ ಬಡ್ಡಿ ದರ ಗ್ರಾಹಕರು ರೂ. 8000ದಿಂದ ರೂ. 1 ಲಕ್ಷದ ತನಕ ಪರಿಣಾಮಕಾರಿ ದರದಲ್ಲಿ 2 ವರ್ಷದ ಎಂಸಿಎಲ್ಆರ್ + ಶೇ 7.50, ಅಂದರೆ ಸದ್ಯಕ್ಕೆ ಶೇ 14.70 ಆಗುತ್ತದೆ.
ಸಾಲದ ಅವಧಿ ಆರಾಮದಾಯಕ ಸಾಲದ ಅವಧಿ ಆಯ್ಕೆಯು 6/9/12/18 ತಿಂಗಳಿನದಾಗಿರುತ್ತದೆ.
ಅರ್ಹತೆ ಗ್ರಾಹಕರು ತಮ್ಮ ಅರ್ಹತೆಯನ್ನು ಪರಿಶೀಲನೆ ಮಾಡಿಕೊಳ್ಳಬೇಕು ಎಂದಾದಲ್ಲಿ DCEMI ಅನ್ನು 567676 ಅನ್ನು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಕಳುಹಿಸಬೇಕು.
ಇದನ್ನೂ ಓದಿ: Cash Withdrawal: ಎಸ್ಬಿಐ, ಪಿಎನ್ಬಿ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್ ನಗದು ವಿಥ್ಡ್ರಾ ಮಿತಿ ಇಂತಿವೆ
SBI Branch Transfer: ಎಸ್ಬಿಐ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡೋದು ಹೀಗೆ
(How To Convert Payment Through SBI Debit Card In To EMI Here Is The Step By Step Details)