SBI Branch Transfer: ಎಸ್​ಬಿಐ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡೋದು ಹೀಗೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡುವುದು ಹೇಗೆ ಎಂಬ ವಿವರ ಇಲ್ಲಿದೆ.

SBI Branch Transfer: ಎಸ್​ಬಿಐ ಗ್ರಾಹಕರು ಒಂದು ಶಾಖೆಯಿಂದ ಮತ್ತೊಂದಕ್ಕೆ ಖಾತೆ ವರ್ಗಾವಣೆ ಮಾಡೋದು  ಹೀಗೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Aug 11, 2021 | 4:29 PM

ಗ್ರಾಹಕರು ಬ್ಯಾಂಕ್​ಗೆ ಭೇಟಿ ನೀಡದೆ ತಮ್ಮ ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಬಹುದು ಎಂದು ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಘೋಷಿಸಿದೆ. ಖಾತೆದಾರರು ಯೋನೋ ಎಸ್‌ಬಿಐ, ಯೋನೋ ಲೈಟ್ ಆ್ಯಪ್‌ಗಳು ಮತ್ತು ಆನ್‌ಲೈನ್ ಎಸ್‌ಬಿಐ ಸೇವೆಗಳನ್ನು ಖಾತೆಯ ವರ್ಗಾವಣೆಗಾಗಿ ಬಳಸಬಹುದು. “ನಿಮ್ಮ ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಲು ಸಹಾಯ ಬೇಕಾದರೆ, SBI ನಿಮ್ಮ ನೆರವಿಗಾಗಿ ಇದೆ. ನಿಮ್ಮ ಮನೆಗಳಿಂದ ಆರಾಮವಾಗಿ ಯೋನೋ ಎಸ್‌ಬಿಐ, ಯೋನೋ ಲೈಟ್ ಮತ್ತು ಆನ್‌ಲೈನ್ ಎಸ್‌ಬಿಐ ಬಳಸಿ,” ಎಂದು ಎಸ್‌ಬಿಐ ಮೇ 7ರಂದು ಟ್ವೀಟ್ ಮಾಡಿದೆ. ದೇಶದಲ್ಲಿ ಕೊವಿಡ್-19 ಹಿನ್ನೆಲೆಯಲ್ಲಿ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಎಸ್​ಬಿಐ, ಸಂಪರ್ಕ ಅಗತ್ಯವಿಲ್ಲದ (ಕಾಂಟ್ಯಾಕ್ಟ್​ಲೆಸ್) ಹಲವಾರು ಸೇವೆಗಳನ್ನು ಜಾರಿಗೆ ತಂದಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಡಿಜಿಟಲ್ ಸೇವೆಗಳಿಗೆ ಆದ್ಯತೆ ನೀಡುವುದು ಇದರ ಉದ್ದೇಶವಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರು ತಮ್ಮ ಖಾತೆಯನ್ನು ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ವರ್ಗಾಯಿಸಲು ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಯನ್ನು ಹೊಂದಿರಬೇಕು.

YONO SBI ಆ್ಯಪ್ ಮೂಲಕ ಖಾತೆ ವರ್ಗಾವಣೆ ಹೇಗೆ ಎಂಬ ವಿವರ ಇಲ್ಲಿದೆ: 1) ಮೊಬೈಲ್ ಫೋನಿನಲ್ಲಿ SBI YONO ಆ್ಯಪ್​ಗೆ ಲಾಗಿನ್ ಆಗಿ. 2) ‘Services’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 3) Transfer Saving Account ‘ಸೇವಿಂಗ್ ಅಕೌಂಟ್ ವರ್ಗಾವಣೆ’ ಆಯ್ಕೆಗೆ ಹೋಗಿ. 4) ಆ ನಂತರ, ನಿಮ್ಮ ಉಳಿತಾಯ ಖಾತೆಯನ್ನು ಆಯ್ಕೆ ಮಾಡಿ. ಖಾತೆಯನ್ನು ವರ್ಗಾಯಿಸಲು ನೀವು ಬಯಸುವ ಹೊಸ ಶಾಖೆ ಕೋಡ್ ಅನ್ನು ಒದಗಿಸಬೇಕು. ಆ ಮೇಲೆ, ‘Get Branch’ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ಹೊಸ ಶಾಖೆಯ ಹೆಸರನ್ನು ನೋಡಲು ಸಾಧ್ಯವಾಗುತ್ತದೆ. 5) ನಿಮ್ಮ ಖಾತೆಯನ್ನು ಆ ಶಾಖೆಗೆ ವರ್ಗಾಯಿಸಲು ಬಯಸಿದರೆ, ನಂತರ ‘ಸಲ್ಲಿಸು’ (Submit) ಮೇಲೆ ಕ್ಲಿಕ್ ಮಾಡಿ. 6) ನಿಮ್ಮ ಮನವಿಯ ಅಂತಿಮ ಸಲ್ಲಿಕೆಗೆ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಬೇಕು ಎಂಬುದನ್ನು ಗಮನಿಸಿ.

ಎಸ್‌ಬಿಐ ವೆಬ್‌ಸೈಟ್ ಬಳಸಿ ಖಾತೆಯನ್ನು ವರ್ಗಾಯಿಸುವುದು ಹೇಗೆ? 1) ನಿಮ್ಮ ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಿ www.onlinesbi.comಗೆ ಲಾಗ್ ಇನ್ ಮಾಡಿ ಮತ್ತು ‘ವೈಯಕ್ತಿಕ ಬ್ಯಾಂಕಿಂಗ್’ (Personal Banking) ಟ್ಯಾಬ್‌ಗೆ ಹೋಗಿ 2) ನಂತರ, ‘ಇ-ಸೇವೆಗಳು’ (e-services) ಆಯ್ಕೆಯನ್ನು ಕ್ಲಿಕ್ ಮಾಡಿ 3) ‘ಉಳಿತಾಯ ಖಾತೆಯ ವರ್ಗಾವಣೆ’ (Transfer of Savings Account) ಆಯ್ಕೆಯನ್ನು ಆರಿಸಿ. ಖಾತೆಯ ಸಂಖ್ಯೆ ಮತ್ತು ಶಾಖೆಯ ಹೆಸರಿನಂತಹ ವಿವರಗಳನ್ನು ವೀಕ್ಷಿಸಬಹುದು. 4) ನೀವು ವರ್ಗಾಯಿಸಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ನೀವು ಖಾತೆಯನ್ನು ವರ್ಗಾಯಿಸಲು ಬಯಸುವ ಹೊಸ ಶಾಖೆಯ ಕೋಡ್ ಅನ್ನು ಒದಗಿಸಬೇಕು. 5) ನೀವು ಕೋಡ್ ಅನ್ನು ಹಾಕಿದ ನಂತರ, ಶಾಖೆಯ ಹೆಸರನ್ನು ಪಡೆಯುತ್ತೀರಿ. ಶಾಖೆಯ ಹೆಸರನ್ನು ಆಯ್ಕೆ ಮಾಡಿ ಮತ್ತು ವಿನಂತಿಯನ್ನು ಸಲ್ಲಿಸಬೇಕು. 6) ಅಸ್ತಿತ್ವದಲ್ಲಿರುವ ಮತ್ತು ಹೊಸ ಶಾಖೆ ಕೋಡ್‌ಗಳನ್ನು ಬಳಸಿಕೊಂಡು, ಖಾತೆ ವರ್ಗಾವಣೆ ವಿವರಗಳನ್ನು ಪರಿಶೀಲಿಸಬೇಕು. 7) ‘Confirm’ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ. 8) ಆ OTP ನಮೂದಿಸಿ ಮತ್ತು ವಿನಂತಿಯನ್ನು ನೋಂದಾಯಿಸಲು ‘Confirm’ ಎಂಬುದನ್ನು ಕ್ಲಿಕ್ ಮಾಡಿ.

ಖಾತೆದಾರರು ತಮ್ಮ KYC (ನೋ ಯುವರ್ ಕಸ್ಟಮರ್) ದಾಖಲೆಗಳನ್ನು ನವೀಕರಿಸಲು ಶಾಖೆಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ ಎಂದು ಎಸ್‌ಬಿಐ ಹೇಳಿದೆ. ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಗೆ ಇಮೇಲ್ ಅಥವಾ ಕೊರಿಯರ್ ಮೂಲಕ ವಿಳಾಸ ಮತ್ತು ಗುರುತಿನ ಪುರಾವೆ ಸಲ್ಲಿಸಬಹುದು.

ಇದನ್ನೂ ಓದಿ: SBI Home Loan: ಎಸ್​ಬಿಐ ಗೃಹ ಸಾಲಕ್ಕೆ ಆಗಸ್ಟ್​ 31ರ ತನಕ ಪ್ರೊಸೆಸಿಂಗ್ ಶುಲ್ಕ ಮನ್ನಾ ವಿಸ್ತರಣೆ

ಇದನ್ನೂ ಓದಿ: SBI Customer Alert: ಎಸ್​ಬಿಐನಿಂದ ಹೊಸ ನಿಯಮ; ಹೀಗೆ ಮಾಡದಿದ್ದಲ್ಲಿ YONO ಲಾಗ್ ಇನ್ ಅಸಾಧ್ಯ

(This Is How SBI Customers Transfer Account From One Branch To Another )

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್