AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SBI Customer Alert: ಎಸ್​ಬಿಐನಿಂದ ಹೊಸ ನಿಯಮ; ಹೀಗೆ ಮಾಡದಿದ್ದಲ್ಲಿ YONO ಲಾಗ್ ಇನ್ ಅಸಾಧ್ಯ

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರ ಗಮನಕ್ಕೆ ಕಡ್ಡಾಯವಾಗಿ ಬರಲೇಬೇಕಾದ ಅಂಶ ಇದು. ಹೊಸ ನಿಯಮವನ್ನು ಬ್ಯಾಂಕ್​ನಿಂದ ತರಲಾಗಿದ್ದು, ಅದನ್ನು ಅನುಸರಿಸದಿದ್ದಲ್ಲಿ YONO ಮೂಲಕ ಲಾಗ್ ಇನ್ ಸಾಧ್ಯವಿಲ್ಲ.

SBI Customer Alert: ಎಸ್​ಬಿಐನಿಂದ ಹೊಸ ನಿಯಮ; ಹೀಗೆ ಮಾಡದಿದ್ದಲ್ಲಿ YONO ಲಾಗ್ ಇನ್ ಅಸಾಧ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 27, 2021 | 11:35 AM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) YONO ಹೊಸ ಕಠಿಣ ನಿಯಮ ತಂದಿದ್ದು, ಗ್ರಾಹಕರು ಕಡ್ಡಾಯವಾಗಿ ಅನುಸರಿಸಲೇಬೇಕು. ಕಳೆದ ವರ್ಷದಿಂದ ಈಚೆಗೆ ನೆಟ್​ಬ್ಯಾಂಕಿಂಗ್ ವಹಿವಾಟುಗಳಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಆಗಿದೆ. ಆದರೆ ಇದರ ಜತೆಜತೆಗೆ ಹಲವು ಸಮಸ್ಯೆಗಳು ಎದುರಾಗಿವೆ. ಅದರಲ್ಲೂ ಸುರಕ್ಷತೆಗೆ ಮತ್ತು ವಂಚಕರಿಂದ ಹಣ ಕಳೆದುಕೊಳ್ಳುವುದನ್ನು ತಡೆಯುವುದಕ್ಕೆ ಸಂಬಂಧಿಸಿದಂತೆ ಸವಾಲಾಗಿ ಪರಿಣಮಿಸಿದೆ. ಬ್ಯಾಂಕ್ ಹೇಳಿಕೊಂಡಿರುವಂತೆ, YONO ಆ್ಯಪ್ ಹೊಸ ಭದ್ರತಾ ವೈಶಿಷ್ಟ್ಯಗಳ ಜತೆಗೆ ಬರುತ್ತದೆ. YONO ಆ್ಯಪ್​ನಲ್ಲಿ ಲಾಗ್​ ಇನ್ ಆಗಲು ಬಯಸುವವರು ತಮ್ಮ ಮೊಬೈಲ್ ಫೋನ್ ಸಂಖ್ಯೆ ಮೂಲಕ ಆಗಬೇಕು. YONOದಲ್ಲಿ ಹೊಸ ನೋಂದಣಿ ಆಗಬೇಕು ಅಂದರೆ ಬ್ಯಾಂಕ್ ಹೇಳಿರುವಂತೆ, ಅದಾಗಲೇ ಬ್ಯಾಂಕ್​ ಬಳಿ ನೋಂದಣಿ ಆಗಿರುವ ಮೊಬೈಲ್​ ಫೋನ್​ ಸಂಖ್ಯೆಯನ್ನೇ ಬಳಸಬೇಕು.

YONO ಎಸ್​ಬಿಐ ಜತೆ ಬ್ಯಾಂಕ್ ಸುರಕ್ಷಿತವಾಗಿದೆ! YONO ಎಸ್​ಬಿಐ ಭದ್ರತಾ ವೈಶಿಷ್ಟ್ಯಗಳನ್ನು ಜಾಸ್ತಿ ಮಾಡಿದೆ. ಬ್ಯಾಂಕ್​ ಜತೆಗೆ ನೋಂದಣಿ ಆಗಿರುವ ಮೊಬೈಲ್ ಸಂಖ್ಯೆಯನ್ನು ಬಳಸಿ ಮಾತ್ರ YONO ಸಂಪರ್ಕಿಸಲು ಸಾಧ್ಯ ಎಂಬ ಹೊಸ ಅಪ್​ಗ್ರೇಡ್ ಮಾಡಿದೆ. ಎಂದು ಟ್ವೀಟ್​ನಲ್ಲಿ ತಿಳಿಸಲಾಗಿದೆ. ಈಗ ಸಮಸ್ಯೆ ಆಗಿರುವುದು ಏನೆಂದರೆ, ವಂಚಕರು ಗ್ರಾಹಕರ ಯೂಸರ್​ ನೇಮ್, ಪಾಸ್​ವರ್ಡ್, ವೈಯಕ್ತಿಕ ಖಾತೆ ಮಾಹಿತಿಯನ್ನು ಮೋಸಗೊಳಿಸಿ ಪಡೆದುಕೊಂಡು, ತಮ್ಮ ಮೊಬೈಲ್ ಫೋನ್ ಮೂಲಕ ಖಾತೆಗೆ ಲಾಗ್ ಇನ್ ಆಗುತ್ತಾರೆ. ಆದರೆ ಈಗ ಎಸ್​ಬಿಐ YONO ಹೊಸ ನಿಯಮ ತಂದಿದೆ. ಅದರ ಪ್ರಕಾರವಾಗಿ, ಬಳಕೆದಾರರು ತಮ್ಮ ನೋಂದಾಯಿತ ಮೊಬೈಲ್ ಫೋನ್ ಸಂಖ್ಯೆಯಿಂದ ಲಾಗ್ ಇನ್ ಆದರಷ್ಟೇ ಸಂಪರ್ಕಕ್ಕೆ ಸಿಗುತ್ತದೆ. ಇದರಿಂದಾಗಿ ಹಣ ಕಳೆದುಕೊಳ್ಳುವ ಸಾಧ್ಯತೆ ಕಡಿಮೆ ಆಗುತ್ತದೆ.

ಆದರೆ, ಕೆಲವರಿಗೆ ಇದು ಅನನುಕೂಲವಾಗಿ ಪರಿಣಮಿಸಬಹುದು. ಇಲ್ಲಿ ಗಮನಕ್ಕೆ ತೆಗೆದುಕೊಳ್ಳಬೇಕಾದದ್ದು ಎಲ್ಲ ರೀತಿ ಅನುಕೂಲಗಳನ್ನು. ಎಸ್​ಬಿಐ ಇಂಟರ್​ನೆಟ್​ ಬ್ಯಾಂಕಿಂಗ್ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಕೆ ಮಾಡುವ ಗ್ರಾಹಕರ ಸಂಖ್ಯೆ ಕ್ರಮವಾಗಿ 8.9 ಕೋಟಿ ಮತ್ತು 2 ಕೋಟಿ ಇದೆ. 2016ರ ನವೆಂಬರ್​ನಲ್ಲಿ ನೋಟು ನಿಷೇಧ ಘೋಷಣೆ ಮಾಡಿದ ಮೇಲೆ ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಪ್ರಮಾಣ ಜಾಸ್ತಿಯಾಯಿತು. ಅದಾದ ಮೇಲೆ ಈಚೆಗೆ ಕೊರೊನಾ ಬಿಕ್ಕಟ್ಟು ಕಾಣಿಸಿಕೊಂಡ ಮೇಲೆ ದೇಶದಾದ್ಯಂತ ಲಾಕ್​ಡೌನ್​ ಹೇರಿದ್ದರಿಂದ ಇಂಟರ್​ನೆಟ್ ಬ್ಯಾಂಕಿಂಗ ಮತ್ತು ಮೊಬೈಲ್ ಬ್ಯಾಂಕಿಂಗ್ ಬಳಸುವವರ ಪ್ರಮಾಣ ಇನ್ನೂ ಹೆಚ್ಚಾಯಿತು.

ಇದನ್ನೂ ಓದಿ: SBI Customers Alert: ಕೆವೈಸಿ ನೆಪ ಹೇಳಿಕೊಂಡು ವಂಚಿಸುವ ವಂಚಕರ ಬಗ್ಗೆ ಎಚ್ಚರಿಕೆ ಎಂದ ಎಸ್​ಬಿಐ

(Alert SBI Customers If You Do Not Follow This Not Able To Access To YONO)

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ