SBI Customers Alert: ಕೆವೈಸಿ ನೆಪ ಹೇಳಿಕೊಂಡು ವಂಚಿಸುವ ವಂಚಕರ ಬಗ್ಗೆ ಎಚ್ಚರಿಕೆ ಎಂದ ಎಸ್ಬಿಐ
ನೋ ಯುವರ್ ಕಸ್ಟಮರ್ (ಕೆವೈಸಿ) ಹೆಸರಲ್ಲಿ ಭಾರತದಾದ್ಯಂತ ನಡೆಯುತ್ತಿರುವ ವಂಚನೆಗಳ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಎಚ್ಚರಿಕೆ ನೀಡಿದೆ.
ನೋ ಯುವರ್ ಕಸ್ಟಮರ್ (ಕೆವೈಸಿ) ಹೆಸರಲ್ಲಿ ಭಾರತದಾದ್ಯಂತ ನಡೆಯುತ್ತಿರುವ ವಂಚನೆಗಳ ಬಗ್ಗೆ ಸೋಮವಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India) ಸೋಮವಾರದಂದು ಗ್ರಾಹಕರಿಂದ ಎಚ್ಚರಿಕೆ ನೀಡಿದೆ. ವಂಚನೆಗಳು ನಿಜವಾಗಿಯೂ ನಡೆಯುತ್ತಿದ್ದು, ಭಾರತದಾದ್ಯಂತ ವ್ಯಾಪಿಸಿದೆ ಎಂದು ಹೇಳಿದೆ. ಟ್ವಿಟ್ಟರ್ ಮೂಲಕ ಎಸ್ಬಿಐನಿಂದ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗಿದೆ. ಕೆವೈಸಿ ದೃಢೀಕರಣದ ಹೆಸರಿನಲ್ಲಿ ಗ್ರಾಹಕರಿಗೆ ವಂಚಕರು ಮೋಸ ಮಾಡುತ್ತಿದ್ದಾರೆ ಎಂದು ಎಸ್ಬಿಐ ಎಚ್ಚರಿಕೆ ನೀಡಿದೆ. ಎಸ್ಬಿಐ ಬ್ಯಾಂಕ್ ಪರವಾಗಿ ಅಥವಾ ಬ್ಯಾಂಕ್ನ ಪ್ರತಿನಿಧಿಯಾಗಿ ಕಂಪೆನಿಯೊಂದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ ಎಂದು ಟ್ವೀಟ್ ಮಾಡಿದೆ.
ಇಂಥ ಆನ್ಲೈನ್ ವಂಚನೆಯ ಪ್ರಕರಣಗಳು ಇದ್ದಲ್ಲಿ ಸೈಬರ್ ಕ್ರೈಮ್ ಇಲಾಖೆಗೆ https://www.cybercrime.gov.in ಈ ವೆಬ್ಸೈಟ್ಗೆ ದೂರು ನೀಡುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಗ್ರಾಹಕರಿಗೆ ತಿಳಿಸಿದೆ. ರಾಷ್ಟ್ರೀಯ ಸೈಬರ್ ಅಪರಾಧ ವರದಿಯಂತೆ ಪೋರ್ಟಲ್ ಗೃಹ ವ್ಯವಹಾರದ ಸಚಿವಾಲಯದ ಅಡಿಯಲ್ಲಿ ಬರುತ್ತದೆ. ಗ್ರಾಹಕರಿಗೆ ತಮ್ಮ ಖಾತೆಯ ಸುರಕ್ಷತೆಗಾಗಿ ಮೂರು ಸೇಫ್ಟಿ ಟಿಪ್ಸ್ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನೀಡಲಾಗಿದೆ.
* ಯಾವುದೇ ಲಿಂಕ್ ಕ್ಲಿಕ್ ಮಾಡುವ ಮೊದಲಿಗೆ ಆಲೋಚನೆ ಮಾಡಿ. * ಕೆವೈಸಿ ಅಪ್ಡೇಟ್ ಮಾಡುವುದಕ್ಕೆ ಬ್ಯಾಂಕ್ನಿಂದ ಯಾವುದೇ ಲಿಂಕ್ ಕಳಿಸುವುದಿಲ್ಲ. * ಮೊಬೈಲ್ ನಂಬರ್ ಮತ್ತು ಕ್ರೆಡೆನ್ಷಿಯಲ್ ಡೇಟಾವನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.
ವರದಿಯ ಪ್ರಕಾರ, ಚೀನೀ ಹ್ಯಾಕರ್ಗಳು ಈಚೆಗೆ ಎಸ್ಬಿಐ ಗ್ರಾಹಕರನ್ನು ಕೆವೈಸಿ ಪ್ರಕ್ರಿಯೆ ಅಪ್ಡೇಟ್ ಮಾಡುವುದಕ್ಕೆ ಟಾರ್ಗೆಟ್ ಮಾಡಿ, 50 ಲಕ್ಷ ಗಿಫ್ಟ್ ಪಡೆದಿದ್ದಾರೆ. 2020ರಲ್ಲಿ 67 ವರ್ಷದ ವೃದ್ಧರೊಬ್ಬರು 3 ಲಕ್ಷ ರೂಪಾಯಿಯನ್ನು ಸೈಬರ್ ಕ್ರಿಮಿನಲ್ಸ್ಗೆ ಕಳೆದುಕೊಂಡಿದ್ದಾರೆ. ದುಷ್ಕರ್ಮಿಗಳು ಕೆವೈಸಿ ಕಾರಣವನ್ನು ಹೇಳಿಕೊಂಡು, ಸಂತ್ರಸ್ತರ ಬಳಿ ಬ್ಯಾಂಕ್ ಸೇರಿ ಇತರ ಪ್ರಮುಖ ಮಾಹಿತಿಯನ್ನು ಕೇಳಿ ಪಡೆಯಲು ಸಫಲರಾಗಿದ್ದಾರೆ.
ಇದನ್ನೂ ಓದಿ: SBI savings account: ಈ ಉಳಿತಾಯ ಖಾತೆದಾರರಿಗೆ ಎಸ್ಬಿಐನಿಂದ ರೂ. 2 ಲಕ್ಷದ ಉಚಿತ ಇನ್ಷೂರೆನ್ಸ್
(State Bank Of India alert customers about online fraud in the name of KYC. Here is the details)