Amazon Apple Day Sale: ಅಮೆಜಾನ್​ನಿಂದ ಜುಲೈ 17ರ ತನಕ ಆಪಲ್ ಡೇ ಸೇಲ್; ಏನೇನು ಆಫರ್​ಗಳಿವೆ ಎಂಬ ಮಾಹಿತಿ ಇಲ್ಲಿದೆ

ಮಾರಾಟಗಾರರಿಂದ ಉತ್ತಮ ಕೊಡುಗೆಗಳೊಂದಿಗೆ ಆಪಲ್ ಡೇಸ್ ಜುಲೈ 17ರ ವರೆಗೆ ಲೈವ್ ಆಗಿರುತ್ತದೆ. ಇತರ ಉತ್ಪನ್ನಗಳ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವಹಿವಾಟಿನಲ್ಲಿ ಗ್ರಾಹಕರು ₹ 6,000 ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಲು ಸಾಧ್ಯವಾಗುತ್ತದೆ.

Amazon Apple Day Sale: ಅಮೆಜಾನ್​ನಿಂದ ಜುಲೈ 17ರ ತನಕ ಆಪಲ್ ಡೇ ಸೇಲ್; ಏನೇನು ಆಫರ್​ಗಳಿವೆ ಎಂಬ ಮಾಹಿತಿ ಇಲ್ಲಿದೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Srinivas Mata

Updated on: Jul 12, 2021 | 11:28 PM

ಅಮೆಜಾನ್ ಇಂಡಿಯಾದಿಂದ (Amazon India) ಇಂದು (ಜುಲೈ 12, 2021) ‘ಆಪಲ್ ಡೇಸ್’ ಮಾರಾಟವನ್ನು (Apple Day Sale) ಪ್ರಕಟಿಸಿದ್ದು, ಇದು ಇತ್ತೀಚಿನ ಐಫೋನ್ 12 ಸರಣಿ, ಐಫೋನ್ 11 ಮತ್ತು ಹೆಚ್ಚಿನವುಗಳಿಗೆ ಡೀಲ್ ಮತ್ತು ಕೊಡುಗೆಗಳನ್ನು ನೀಡುತ್ತದೆ. ಮಾರಾಟಗಾರರಿಂದ ಉತ್ತಮ ಕೊಡುಗೆಗಳೊಂದಿಗೆ ಆಪಲ್ ಡೇಸ್ ಜುಲೈ 17ರ ವರೆಗೆ ಲೈವ್ ಆಗಿರುತ್ತದೆ. ಇತರ ಉತ್ಪನ್ನಗಳ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ವಹಿವಾಟಿನಲ್ಲಿ ಗ್ರಾಹಕರು ₹ 6,000 ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಲು ಸಾಧ್ಯವಾಗುತ್ತದೆ.

* ಐಫೋನ್ 12 ಮೊಬೈಲ್​ಫೋನ್ ರೂ. 72,900 ಬೆಲೆಯಲ್ಲಿ ರೂ. 7,000 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ. * ಐಫೋನ್ 12 ಮಿನಿ ಫೋನ್ ರೂ. 66,400 ಬೆಲೆಯಲ್ಲಿ ರೂ. 3,500 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ. * ಐಫೋನ್ 12 ಪ್ರೊ (128 ಜಿಬಿ) ರೂ. 1,15,100 ಬೆಲೆಯಲ್ಲಿ ರೂ. 4,800 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ. * ಐಫೋನ್ 11 ರೂ. 51,999 ಬೆಲೆಯಲ್ಲಿ ರೂ. 1,999 ರಿಯಾಯಿತಿಯೊಂದಿಗೆ ಮಾರಾಟ ಆಗುತ್ತಿದೆ. * ಎಂ 1 ಚಿಪ್‌ಸೆಟ್ 8 ಜಿಬಿ RAM ಹೊಂದಿರುವ 2020ರ ಮ್ಯಾಕ್‌ಬುಕ್ ಪ್ರೊ 13 ಇಂಚಿನದು ರೂ 1,35,799ಕ್ಕೆ ಮಾರಾಟ ಆಗುತ್ತಿದೆ * 16 ಜಿಬಿ RAMನೊಂದಿಗೆ 2019ರ ಮ್ಯಾಕ್‌ಬುಕ್ ಪ್ರೊ 16 ಇಂಚು, 512 ಜಿಬಿಗೆ ರೂ.1,85,659 ಬೆಲೆಯೊಂದಿಗೆ ರೂ. 14,241 ರಿಯಾಯಿತಿ ನೀಡಲಾಗುತ್ತಿದೆ. * 2020ರ ಆಪಲ್ ಮ್ಯಾಕ್‌ಬುಕ್ ಏರ್ 10ನೇ ತಲೆಮಾರಿನ ಇಂಟೆಲ್ ಐ5 ಪ್ರೊಸೆಸರ್​ನೊಂದಿಗೆ ರೂ.99,990 ಬೆಲೆಯಲ್ಲಿ ಮಾರಾಟ ಆಗುತ್ತಿದೆ.

ಈ ಮಧ್ಯೆ, ಅಮೆಜಾನ್ ಇಂಡಿಯಾವು ಜುಲೈ 26 (ಸೋಮವಾರ) ಮತ್ತು ಜುಲೈ 27 (ಮಂಗಳವಾರ) ರಂದು ಪ್ರೈಮ್ ಡೇ ಮಾರಾಟವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಇ-ಕಾಮರ್ಸ್ ವೆಬ್‌ಸೈಟ್ ಈಚೆಗೆ ತಿಳಿಸಿದೆ. ಅಮೆಜಾನ್ ಪ್ರೈಮ್ ಡೇ ಮಾರಾಟವು ಜುಲೈ 26ರಂದು ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು, ಅನೇಕ ವಿಭಾಗಗಳಲ್ಲಿ “ಬೆಸ್ಟ್ ಡೀಲ್ ಮತ್ತು ಉಳಿತಾಯ”ಗಳನ್ನು ದೊರಕಿಸುತ್ತದೆ. “ಉತ್ತಮ ವ್ಯವಹಾರಗಳು, ಬ್ಲಾಕ್​ಬಸ್ಟರ್ ಮನರಂಜನೆ ಮತ್ತು ಹೊಸ ಬಿಡುಗಡೆಗಳು ಅಮೆಜಾನ್ ಪ್ರೈಮ್ ಡೇ ಜುಲೈ 26 ಮತ್ತು 27ಕ್ಕೆ ಸಿದ್ಧರಾಗಿ,” ಎಂದು ಅಮೆಜಾನ್ ಇಂಡಿಯಾ ಟ್ವಿಟ್ಟರ್​ನಲ್ಲಿ ಪ್ರಕಟಿಸಿತ್ತು.

ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಎಂಐನೊಂದಿಗೆ ಶೇ 10ರಷ್ಟು ತಕ್ಷಣ ರಿಯಾಯಿತಿ ಇರುತ್ತದೆ. ಅಮೆಜಾನ್ ಪ್ರೈಮ್ ಸದಸ್ಯತ್ವವು ವರ್ಷಕ್ಕೆ 999 ರೂಪಾಯಿಗೆ ಅಥವಾ ಮೂರು ತಿಂಗಳ ಅವಧಿಗೆ ರೂ. 329ಕ್ಕೆ ಲಭ್ಯವಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ: Amazon Prime Day Sale: ಅಮೆಜಾನ್ ಇಂಡಿಯಾ ಪ್ರೈಮ್ ಡೇ ಮಾರಾಟ ಜುಲೈ 26, 27 ಏನೇನು ನಿರೀಕ್ಷಿಸಬಹುದು?

(Amazon India announced Apple day sale from today. It will be live till July 17th, 2021. Here is the offer details)

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್