AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Prime Day Sale: ಅಮೆಜಾನ್ ಇಂಡಿಯಾ ಪ್ರೈಮ್ ಡೇ ಮಾರಾಟ ಜುಲೈ 26, 27 ಏನೇನು ನಿರೀಕ್ಷಿಸಬಹುದು?

ಉತ್ತಮ ವ್ಯವಹಾರಗಳು, ಬ್ಲಾಕ್​ಬಸ್ಟರ್ ಮನರಂಜನೆ ಮತ್ತು ಹೊಸ ಬಿಡುಗಡೆಗಳು ಅಮೆಜಾನ್ ಪ್ರೈಮ್ ಡೇ ಜುಲೈ 26 ಮತ್ತು 27ಕ್ಕೆ ಸಿದ್ಧರಾಗಿ ಎಂದು ಅಮೆಜಾನ್ ಇಂಡಿಯಾ ಟ್ವೀಟ್​ ಮಾಡಿ ತಿಳಿಸಿದೆ.

Amazon Prime Day Sale: ಅಮೆಜಾನ್ ಇಂಡಿಯಾ ಪ್ರೈಮ್ ಡೇ ಮಾರಾಟ ಜುಲೈ 26, 27 ಏನೇನು ನಿರೀಕ್ಷಿಸಬಹುದು?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jul 08, 2021 | 11:01 PM

Share

ಅಮೆಜಾನ್ ಇಂಡಿಯಾವು ಜುಲೈ 26 (ಸೋಮವಾರ) ಮತ್ತು ಜುಲೈ 27 (ಮಂಗಳವಾರ) ರಂದು ಪ್ರೈಮ್ ಡೇ ಮಾರಾಟವನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಇ-ಕಾಮರ್ಸ್ ವೆಬ್‌ಸೈಟ್ ಗುರುವಾರ ತಿಳಿಸಿದೆ. ಅಮೆಜಾನ್ ಪ್ರೈಮ್ ಡೇ ಮಾರಾಟವು ಜುಲೈ 26ರಂದು ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದ್ದು, ಅನೇಕ ವಿಭಾಗಗಳಲ್ಲಿ “ಬೆಸ್ಟ್ ಡೀಲ್ ಮತ್ತು ಉಳಿತಾಯ”ಗಳನ್ನು ದೊರಕಿಸುತ್ತದೆ. “ಉತ್ತಮ ವ್ಯವಹಾರಗಳು, ಬ್ಲಾಕ್​ಬಸ್ಟರ್ ಮನರಂಜನೆ ಮತ್ತು ಹೊಸ ಬಿಡುಗಡೆಗಳು ಅಮೆಜಾನ್ ಪ್ರೈಮ್ ಡೇ ಜುಲೈ 26 ಮತ್ತು 27ಕ್ಕೆ ಸಿದ್ಧರಾಗಿ,” ಎಂದು ಅಮೆಜಾನ್ ಇಂಡಿಯಾ ಟ್ವಿಟ್ಟರ್​ನಲ್ಲಿ ಪ್ರಕಟಿಸಿದೆ. ಕೊವಿಡ್-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣಕ್ಕೆ ಅಮೆಜಾನ್ ಇಂಡಿಯಾ ಮೇ ತಿಂಗಳಲ್ಲಿ ಮಾರಾಟವನ್ನು ನಿಲ್ಲಿಸಿತ್ತು.

ಎರಡು ದಿನಗಳ ಅಮೆಜಾನ್ ಪ್ರೈಮ್ ಡೇ ಮಾರಾಟದಲ್ಲಿ ಏನನ್ನು ನಿರೀಕ್ಷಿಸಬಹುದು? ಪ್ರೈಮ್ ಗ್ರಾಹಕರು ಅದರ ಇನ್- ಹವಸ್ ಅಲೆಕ್ಸಾ ಸಾಧನಗಳಾದ ಕಿಂಡಲ್ ಮತ್ತು ಫೈರ್ ಟಿವಿಯ ಮೇಲೆ ಶೇ 50ರ ವರೆಗೆ ರಿಯಾಯಿತಿ ಪಡೆಯುತ್ತಾರೆ. ಹೊಸದಾಗಿ ಬಿಡುಗಡೆಯಾದ ಎಕೋ ಶೋ 10 ಮತ್ತು ಫೈರ್ ಟಿವಿ ಕ್ಯೂಬ್ ಸಹ ಮಾರಾಟ ಡೀಲ್​ಗಳೊಂದಿಗೆ ಲಭ್ಯವಾಗಬಹುದು ಎಂದು ನಿರೀಕ್ಷೆಯಿದೆ. ಅಲ್ಲದೆ, ಅಮೆಜಾನ್‌ನ ಗ್ರಾಹಕರು ತಾತ್ಕಾಲಿಕ ಬೆಲೆ ಕಡಿತದೊಂದಿಗೆ ಅಲೆಕ್ಸಾ-ಎನೇಬಲ್ಡ್ ಬಲ್ಬ್ ಮತ್ತು ಸ್ಪೀಕರ್‌ನಂತಹ ಕಾಂಬೊ ಡೀಲ್​ಗಳನ್ನು ಪಡೆಯುತ್ತಾರೆ. ಅಮೆಜಾನ್ ಪ್ರೈಮ್ ಡೇ ಮಾರಾಟದ ಸಂದರ್ಭದಲ್ಲಿ ಇಂಟೆಲ್, ಬೋಟ್, ಮೈಗ್ಲಾಮ್, ಮಾಮಅರ್ತ್, ಸ್ಯಾಮ್ಸಂಗ್, ಕ್ಯಾಡ್ಬರಿ ಮತ್ತು ಇನ್ನಿತರ ಮಾರಾಟದ ಬ್ರ್ಯಾಂಡ್‌ಗಳಿಂದ “300ಕ್ಕೂ ಹೆಚ್ಚು ಹೊಸ ಉತ್ಪನ್ನಗಳು” ಬಿಡುಗಡೆ ಆಗಲಿವೆ.

ಪ್ರೈಮ್ ವಿಡಿಯೋ ಸೇವೆಗಾಗಿ, ಅಮೆಜಾನ್ ಪ್ರೈಮ್ ಸದಸ್ಯರು ಫರ್ಹಾನ್ ಅಖ್ತರ್ ಅಭಿನಯದ ತೂಫಾನ್ (ಹಿಂದಿ), ಮಲಯಾಳಂ ಚಿತ್ರ ಮಲಿಕ್, ತಮಿಳು ಚಿತ್ರ ಪರಂಬರೈ ಮತ್ತು ಕನ್ನಡ ಚಲನಚಿತ್ರ ಇಕ್ಕತ್ ಮುಂತಾದ ಬಹು ನಿರೀಕ್ಷಿತ ಚಲನಚಿತ್ರಗಳವನ್ನು ಆನಂದಿಸಲಿದ್ದಾರೆ. ಪ್ರೈಮ್ ಡೇ ಮನರಂಜನಾ ತಂಡವು ಜುಲೈ 23ರಂದು ಜನಪ್ರಿಯ ಅಮೆಜಾನ್ ಒರಿಜಿನಲ್ ಸರಣಿಯ ಹಾಸ್ಟೆಲ್ ಡೇಜ್‌ನ ಸೀಸನ್ 2 ಅನ್ನು ಪ್ರಾರಂಭಿಸುತ್ತದೆ. ಅಲ್ಲದೆ, ಎಚ್‌ಡಿಎಫ್‌ಸಿ ಬ್ಯಾಂಕ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಎಂಐನೊಂದಿಗೆ ಶೇ 10ರಷ್ಟು ತಕ್ಷಣ ರಿಯಾಯಿತಿ ಇರುತ್ತದೆ. ಅಮೆಜಾನ್ ಪ್ರೈಮ್ ಸದಸ್ಯತ್ವವು ವರ್ಷಕ್ಕೆ 999 ರೂಪಾಯಿಗೆ ಅಥವಾ ಮೂರು ತಿಂಗಳ ಅವಧಿಗೆ ರೂ. 329ಕ್ಕೆ ಲಭ್ಯವಿದೆ.

ಇದನ್ನೂ ಓದಿ: Jeff Bezos: ಪುಟ್ಟ ಗ್ಯಾರೇಜಿನಿಂದ 131.58 ಲಕ್ಷ ಕೋಟಿ ರೂಪಾಯಿ ಸಾಮ್ರಾಜ್ಯದ ತನಕ ಅಮೆಜಾನ್​.ಕಾಮ್ ಕಟ್ಟಿದ ಜೆಫ್​ ಬೆಜೋಸ್​

(Amazon India announced Prime day sale on July 26th and 27th. Here are the best deals)

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ