Post Office Monthly Income Scheme: 10 ವರ್ಷ ಮೇಲ್ಪಟ್ಟವರು ಠೇವಣಿ ಇಡಬಹುದಾದ ಪೋಸ್ಟ್​ ಆಫೀಸ್ ಎಂಐಎಸ್​ ಬಗ್ಗೆ ನಿಮಗೆಷ್ಟು ಗೊತ್ತು?

ಪೋಸ್ಟ್​ ಆಫೀಸ್ ಮಂತ್ಲಿ ಇನ್​ಕಮ್ ಸ್ಕೀಮ್​ಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ. ಇದರಿಂದ ಯಾರು ಪೋಸ್ಟ್​ ಆಫೀಸ್​ನಲ್ಲಿ ಹೂಡಿಕೆ ಮಾಡಬೇಕು ಅಂತಿರುತ್ತಾರೋ ಅಂಥವರಿಗೆ ಸಹಾಯ ಆಗಬಹುದು.

Post Office Monthly Income Scheme: 10 ವರ್ಷ ಮೇಲ್ಪಟ್ಟವರು ಠೇವಣಿ ಇಡಬಹುದಾದ ಪೋಸ್ಟ್​ ಆಫೀಸ್ ಎಂಐಎಸ್​ ಬಗ್ಗೆ ನಿಮಗೆಷ್ಟು ಗೊತ್ತು?
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jul 12, 2021 | 1:42 PM

ಪೋಸ್ಟ್​ ಆಫೀಸ್​ನಿಂದ ಮಂತ್ಲಿ ಇನ್​ಕಮ್​ ಸ್ಕೀಮ್ (MIS) ಎಂಬ ಪ್ಲಾನ್ ಎಂಬುದಿದೆ. ಇದನ್ನು 10 ವರ್ಷದ ವಯಸ್ಸಿನ ಮೇಲ್ಪಟ್ಟವರು ಆಯ್ಕೆ ಮಾಡಿಕೊಳ್ಳಬಹುದು. ತಮ್ಮದೇ ಹೆಸರಿನಲ್ಲಿ ಖಾತೆ ಆರಂಭಿಸಬಹುದು. ನಿಶ್ಚಿತವಾದ ಹಾಗೂ ಸುರಕ್ಷಿತವಾದ ಹೂಡಿಕೆ, ಜತೆಗೆ ಬಡ್ಡಿ ದರ ಕೂಡ ಉತ್ತಮವಾಗಿಯೇ ಇದೆ. ಅಪ್ರಾಪ್ತ ಹೂಡಿಕೆದಾರರಿದ್ದಲ್ಲಿ ಅವರ ಪರವಾಗಿ ಗಾರ್ಡಿಯನ್ ಆಗಿ ನಿಂತು ಖಾತೆ ತೆರೆಯಬಹುದು. ಅಥವಾ ಮಾನಸಿಕವಾಗಿ ಸ್ಥಿಮಿತ ಇಲ್ಲದ ವ್ಯಕ್ತಿಗಳ ಪರವಾಗಿ ಕೂಡ ಒಬ್ಬರು ಖಾತೆ ತೆರೆದು, ನಿಶ್ಚಿತ ಆದಾಯ ಬರುವಂತೆ ಮಾಡಿಕೊಳ್ಳಬಹುದು. ಈ ಮಂತ್ಲಿ ಇನ್​ಕಮ್ ಸ್ಕೀಮ್​ಗೆ ಸಂಬಂಧಿಸಿದಂತೆ ಪ್ರಶ್ನೋತ್ತರ ಮಾದರಿಯಲ್ಲಿ ಮಾಹಿತಿಯನ್ನು ನೀಡಲಾಗುತ್ತಿದೆ. ಇದರಿಂದ ಯಾರು ಪೋಸ್ಟ್​ ಆಫೀಸ್​ನಲ್ಲಿ ಹೂಡಿಕೆ ಮಾಡಬೇಕು ಅಂತಿರುತ್ತಾರೋ ಅಂಥವರಿಗೆ ಸಹಾಯ ಆಗಬಹುದು.

MIS ಖಾತೆಯನ್ನು ಯಾರು ತೆರೆಯಬಹುದು? 1. ಅಪ್ರಾಪ್ತರು ಅಥವಾ ಮಾನಸಿಕವಾಗಿ ಸ್ಥಿಮಿತ ಇಲ್ಲದ ವ್ಯಕ್ತಿಗಳ ಪರವಾಗಿ ಗಾರ್ಡಿಯನ್ ಖಾತೆ ತೆರೆಯಬಹುದು. 2. 10 ವರ್ಷ ಮೇಲ್ಪಟ್ಟ ಅಪ್ರಾಪ್ತರು ತಮ್ಮದೇ ಹೆಸರಿನಲ್ಲಿ ಖಾತೆ ತೆರೆಯಬಹುದು. 3. ಒಬ್ಬರದೇ ಹೆಸರಿನಲ್ಲಿ ವಯಸ್ಕರು. 4. ಜಂಟಿಯಾಗಿ ಮೂವರು ವಯಸ್ಕರು ಖಾತೆ ತೆರೆಯಬಹುದು.

2021ರಲ್ಲಿ ಪೋಸ್ಟ್​ ಆಫೀಸ್ MIS ಬಡ್ಡಿ ದರ ಎಷ್ಟಿದೆ? ಪೋಸ್ಟ್​ ಆಫೀಸ್ ಮಂತ್ಲಿ ಇನ್​ಕಮ್ ಸ್ಕೀಮ್ ಅಡಿಯಲ್ಲಿ ವಾರ್ಷಿಕವಾಗಿ ಶೇ 6.6ರಷ್ಟು ದರವನ್ನು ಪಾವತಿ ಮಾಡಲಾಗುತ್ತದೆ.

ಹೂಡಿಕೆ/ಠೇವಣಿ 1. ಪೋಸ್ಟ್​ ಆಫೀಸ್ ಮಂತ್ಲಿ ಇನ್​ಕಮ್ ಸ್ಕೀಮ್ (MIS) ಖಾತೆಯನ್ನು ಕನಿಷ್ಠ ರೂ. 1000ದೊಂದಿಗೆ ತೆರೆಯಬಹುದು. 2. ಒಬ್ಬ ವ್ಯಕ್ತಿಯ ಖಾತೆಯಲ್ಲಿ ಗರಿಷ್ಠ 4.50 ಲಕ್ಷ ರೂ. ಠೇವಣಿ ಮಾಡಬಹುದು. ಮತ್ತು ಜಂಟಿ ಖಾತೆಯಾದಲ್ಲಿ 9 ಲಕ್ಷ ರೂ. ಠೇವಣಿ ಮಾಡಬಹುದು. 3. ಠೇವಣಿ ಮಾಡಿದ ದಿನದಿಂದ 1 ವರ್ಷದ ಅವಧಿ ಮುಗಿಯುವ ತನಕ ವಿಥ್​ ಡ್ರಾ ಮಾಡವುದು ಸಾಧ್ಯವಿಲ್ಲ. 4. ಒಂದು ವೇಳೆ ಖಾತೆ 1 ವರ್ಷದ ನಂತರ ಮತ್ತು 3 ವರ್ಷದ ಮುಂಚೆ ಕ್ಲೋಸ್ ಆದಲ್ಲಿ ಅಸಲು ಮೊತ್ತದಲ್ಲಿ ಶೇ 2ರಷ್ಟು ಮೊತ್ತವನ್ನು ಕಡಿತ ಮಾಡಿ, ಬಾಕಿ ಹಣವನ್ನು ನೀಡಲಾಗುತ್ತದೆ. 5. ಖಾತೆಯು 3 ವರ್ಷದ ನಂತರ ಹಾಗೂ 5 ವರ್ಷದ ಮುಂಚೆ ಕ್ಲೋಸ್ ಆದಲ್ಲಿ ಅಸಲು ಮೊತ್ತದಲ್ಲಿ ಶೇ 1ರಷ್ಟು ಕಡಿತ ಮಾಡಿ, ಉಳಿದ ಮೊತ್ತವನ್ನು ನೀಡಲಾಗುತ್ತದೆ. 6. ಒಂದು ವೇಳೆ ಖಾತೆದಾರರು ಮೊತ್ತದ ಮೆಚ್ಯೂರಿಟಿಗಿಂತ ಮುಂಚೆ ಮೃತಪಟ್ಟಲ್ಲಿ ಖಾತೆಯನ್ನು ಕ್ಲೋಸ್ ಮಾಡಬಹುದು ಮತ್ತು ಮೊತ್ತವನ್ನು ನಾಮಿನಿ/ಕಾನೂನು ಬದ್ಧ ಉತ್ತರಾಧಿಕಾರಿಗಳಿಗೆ ರೀಫಂಡ್ ಮಾಡಲಾಗುತ್ತದೆ. 7. ಗಮನಿಸಬೇಕಾದ ಅಂಶ ಏನೆಂದರೆ, ಪೋಸ್ಟ್​ ಆಫೀಸ್ ಮಂತ್ಲಿ ಇನ್​​ಕಮ್​ ಸ್ಕೀಮ್​ ಖಾತೆಯಲ್ಲಿ (MIS) ಬರುವ ಬಡ್ಡಿಗೆ ಠೇವಣಿದಾರರು ತೆರಿಗೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: Post office savings account: ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೇಲೆ 3,500 ರೂ. ತನಕ ಬಡ್ಡಿಗೆ ತೆರಿಗೆ ವಿನಾಯಿತಿ

ಇದನ್ನೂ ಓದಿ: Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ

(Here is the must know details about Post Office Monthly Income Scheme (MIS) by investors)

Published On - 1:41 pm, Mon, 12 July 21

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ