AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post office savings account: ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೇಲೆ 3,500 ರೂ. ತನಕ ಬಡ್ಡಿಗೆ ತೆರಿಗೆ ವಿನಾಯಿತಿ

ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೇಲಿನ ಬಡ್ಡಿ ದರಕ್ಕೆ ರೂ. 3500 ತನಕ ಮಾತ್ರ ತೆರಿಗೆ ವಿನಾಯಿತಿ ದೊರೆಯುತ್ತದೆ. ಆ ಬಗ್ಗೆ ಮಾಹಿತಿ ಈ ಲೇಖನದಲ್ಲಿ ನಿಮ್ಮೆದುರು ಇದೆ.

Post office savings account: ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೇಲೆ 3,500 ರೂ. ತನಕ ಬಡ್ಡಿಗೆ ತೆರಿಗೆ ವಿನಾಯಿತಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jul 08, 2021 | 11:28 AM

Share

ನಿಮಗೆ ಪೋಸ್ಟ್ ಆಫೀಸ್​ನಲ್ಲಿ ಉಳಿತಾಯ ಖಾತೆ ಇದ್ದು, ಒಂದು ಹಣಕಾಸು ವರ್ಷದಲ್ಲಿ 3,500 ರೂಪಾಯಿವರೆಗೆ ಗಳಿಸಿದ ಬಡ್ಡಿಗೆ ವೈಯಕ್ತಿಕ ಖಾತೆದಾರರಿಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಒಂದು ವೇಳೆ ನೀವು ಜಂಟಿ ಖಾತೆಯನ್ನು (ಜಾಯಿಂಟ್ ಅಕೌಂಟ್) ಹೊಂದಿದ್ದರೆ ಆ ವಿನಾಯಿತಿ 7,000 ರೂಪಾಯಿವರೆಗೆ ಇರುತ್ತದೆ. ಆದ್ದರಿಂದ ಕಡಿಮೆ ಬಡ್ಡಿದರವನ್ನು ನೀಡುವ ಬ್ಯಾಂಕ್ ಉಳಿತಾಯ ಖಾತೆಗಿಂತ ಪೋಸ್ಟ್​ ಆಫೀಸ್ ಉಳಿತಾಯ ಖಾತೆಯಲ್ಲಿ ಹೆಚ್ಚಿನ ಬಡ್ಡಿದರದೊಂದಿಗೆ ತೆರಿಗೆ ವಿನಾಯಿತಿ ಕೂಡ ಇರುವುದರಿಂದ ಆಕರ್ಷಕವಾಗಿದೆ. ಉಳಿತಾಯ ಖಾತೆಗಳ ಬಡ್ಡಿದರಗಳು ಐತಿಹಾಸಿಕ ಕನಿಷ್ಠ ಮಟ್ಟದಲ್ಲಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಉಳಿತಾಯ ಖಾತೆಯ ಮೇಲೆ ಶೇ 2.7ರಷ್ಟು ಬಡ್ಡಿದರ ನೀಡುತ್ತಿದೆ. ಅದೇ ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ ಶೇಕಡಾ 4ರ ಬಡ್ಡಿ ದರವನ್ನು ಗಳಿಸಬಹುದು. ಅದರ ಜತೆಗೆ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಗಳಿಸಿದ ಬಡ್ಡಿಗೆ 10,000 ರೂಪಾಯಿವರೆಗೆ ಕಡಿತವನ್ನು ಪಡೆಯಬಹುದು.

ಕನಿಷ್ಠ 500 ರೂಪಾಯಿಯ ಠೇವಣಿಯೊಂದಿಗೆ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ತೆರೆಯಬಹುದು. ಪೋಸ್ಟ್ ಆಫೀಸ್ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ಪ್ರತಿ ತಿಂಗಳ 10ನೇ ತಾರೀಕು ಅಥವಾ ತಿಂಗಳ ಕೊನೆಯ ದಿನದ ಮಧ್ಯದ ಕನಿಷ್ಠ ಬಾಕಿಯನ್ನು ಆಧಾರವಾಗಿಟ್ಟುಕೊಂಡು ಲೆಕ್ಕ ಹಾಕಲಾಗುತ್ತದೆ. ಒಂದು ವೇಳೆ ಖಾತೆ ಬಾಕಿ ರೂ. 500ಕ್ಕಿಂತ ಹೆಚ್ಚಾಗದಿದ್ದಲ್ಲಿ ಹಣಕಾಸು ವರ್ಷದ ಕೊನೆಯಲ್ಲಿ ರೂ. 100 ಅನ್ನು ಖಾತೆ ನಿರ್ವಹಣಾ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ ಮತ್ತು ಹಣದ ಬ್ಯಾಲೆನ್ಸ್ ಇಲ್ಲದಿದ್ದರೆ ಖಾತೆಯು ಆಟೋಮೆಟಿಕ್ ಆಗಿ ಕ್ಲೋಸ್ ಆಗುತ್ತದೆ.

ರೀಟೇಲ್ ಹೂಡಿಕೆದಾರರಿಗೆ ಸಣ್ಣ ಉಳಿತಾಯ ಇನ್​ಸ್ಟ್ರುಮೆಂಟ್​ಗಳೇ ಆದ್ಯತೆಯದ್ದಾಗಿವೆ. ಏಕೆಂದರೆ, ಅವು ಸಾಮಾನ್ಯವಾಗಿ ಬ್ಯಾಂಕ್ ಠೇವಣಿ ಅಥವಾ ಉಳಿತಾಯ ಖಾತೆಗಳಂತಹ ಇತರ ಇನ್​ಸ್ಟ್ರುಮೆಂಟ್​ಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ನೀಡುತ್ತವೆ. ಪೋಸ್ಟ್ ಆಫೀಸ್ ಉಳಿತಾಯ ಖಾತೆ ಸೇರಿದಂತೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ತ್ರೈಮಾಸಿಕ (ಪ್ರತಿ ಮೂರು ತಿಂಗಳಿಗೆ ಒಮ್ಮೆ) ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಜುಲೈನಿಂದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಬದಲಾವಣೆ ಮಾಡದೆ ಹಾಗೇ ಇರಿಸಿದೆ.

ಇದನ್ನೂ ಓದಿ: Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ

ಇದನ್ನೂ ಓದಿ: Post Office FD: ಪೋಸ್ಟ್​ ಆಫೀಸ್​ನಲ್ಲಿ ಎಫ್​ಡಿ ಇಡುವುದರ ಫಾಯಿದೆಗಳು ಏನು? ಇಲ್ಲಿದೆ ವಿವರಣೆ

(Interest on post office savings accounts up to Rs 3500 exempted from Income Tax. Here is the details)

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ