Gold Rate Today: ಚಿನ್ನಾಭರಣದ ದರ ಏರಿಳಿತ; ಪ್ರಮುಖ ನಗರಗಳಲ್ಲಿನ ಬಂಗಾರದ ಬೆಲೆ ವಿವರ ಇಲ್ಲಿದೆ
Gold Silver Price Today: ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,650 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,46,500 ರೂಪಾಯಿ ಆಗಿದೆ. ಬರೋಬ್ಬರಿ 2,500 ರೂಪಾಯಿ ಹೆಚ್ಚಳವಾಗಿದೆ.
Gold Silver Rate Today | ಬೆಂಗಳೂರು: ಚಿನ್ನದ ದರ ಕಳೆದ ಒಂದು ವಾರದಿಂದ ಕೊಂಚ ಏರುತ್ತಲೇ ಇತ್ತು. ಇಂದು (ಜುಲೈ 8, ಗುರವಾರ) ಮತ್ತೆ ಹೆಚ್ಚಳವಾಗಿದೆ. ನಗರದಲ್ಲಿ ಅಪರಂಜಿ ಚಿನ್ನ ಬರೋಬ್ಬರಿ 2,700 ರೂಪಾಯಿಗೆ ಏರಿಕೆ ಆಗಿದೆ. ಇದು ಚಿನ್ನ ಪ್ರಿಯರಿಗೆ ಕೊಂಚ ಬೇಸರ ತರಬಹುದು. ಚಿನ್ನ ಖರೀದಿಸುವ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ನೀವು ಕೂಡಿಟ್ಟ ಹಣಕ್ಕೆ ಚಿನ್ನ ಖರೀದಿಸಲು ಸರಿ ಹೊಂದುವುದಾದರೆ ಈ ಕುರಿತಾಗಿ ಯೋಚಿಸಬಹುದು. ಚಿನ್ನ ಮತ್ತು ಬೆಳ್ಳಿ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,650 ರೂಪಾಯಿ ಆಗಿದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,46,500 ರೂಪಾಯಿ ಆಗಿದೆ. ಬರೋಬ್ಬರಿ 2,500 ರೂಪಾಯಿ ಹೆಚ್ಚಳವಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,710 ರೂಪಾಯಿಗೆ ಏರಿಕೆ ಆಗಿದೆ. 100 ಗ್ರಾಂ ಚಿನ್ನದ ದರ 4,87,100 ರೂಪಾಯಿಗೆ ಏರಿದೆ. ಬರೋಬ್ಬರಿ 2,700 ರೂಪಾಯಿ ಏರಿಕೆ ಕಂಡಿದೆ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,150 ರೂಪಾಯಿ ಇದೆ. ಹಾಗೆಯೇ 100 ಗ್ರಾಂ ಚಿನ್ನದ ದರ 4,51,500 ರೂಪಾಯಿ ಆಗಿದೆ. ಸರಿಸುಮಾರು 500 ರೂಪಾಯಿಯಷ್ಟು ಇಳಿಕೆ ಆಗಿದೆ. ನಿನ್ನೆ ವೆನ್ನೈನಲ್ಲಿ ಚಿನ್ನದ ದರ ಕೊಂಚ ಏರಿಕೆ ಕಂಡಿತ್ತು. ಆದರೆ ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಇಂದು ಕೊಂಚ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಇಂದು 49,250 ರೂಪಾಯಿಗೆ ಇಳಿದಿದೆ. 100 ಗ್ರಾಂ ಚಿನ್ನದ ದರ 4,92,500 ರೂಪಾಯಿಗೆ ಇಳಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,800 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,68,000 ರೂಪಾಯಿಗೆ ಏರಿಕೆಯಾಗಿದೆ. ಬರೋಬ್ಬರಿ 2,500 ರೂಪಾಯಿಯಷ್ಟು ಹೆಚ್ಚಳವಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 50,850 ರೂಪಾಯಿಗೆ ಹೆಚ್ಚಳವಾಗಿದೆ. 100 ಗ್ರಾಂ ಚಿನ್ನಕ್ಕೆ 5,08,500 ರೂಪಾಯಿ ನಿಗದಿ ಮಾಡಲಾಗಿದೆ. ಸರಿಸುಮಾರು 3,000 ರೂಪಾಯಿ ಏರಿಕೆ ಮಾಡಲಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,970 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ 4,69,700 ರೂಪಾಯಿ ನಿಗದಿಯಾಗಿದೆ. ಸರಿಸುಮಾರು 2,200 ರೂಪಾಯಿಯಷ್ಟು ಹೆಚ್ಚಳ ಮಾಡಲಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,970 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,79,700 ರೂಪಾಯಿ ಮಾಡಲಾಗಿದೆ. ಸರಿಸುಮಾರು 2,200 ರೂಪಾಯಿ ಹೆಚ್ಚಳವಾಗಿದೆ.
ವಿವಿಧ ನಗರಗಳಲ್ಲಿನ ಬೆಳ್ಳಿ ಬೆಲೆ ಮಾಹಿತಿ ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಬೆಳ್ಳಿ ಬೆಲೆಯೂ ಸಹ ಕೊಂಚ ಏರಿಕೆ ಆಗಿತ್ತು. ಆದರೆ ಇಂದು ಸ್ವಲ್ಪ ಇಳಿಕೆಯ ಹಾದಿ ಹಿಡಿದಿದೆ. ಬೆಂಗಳೂರು ನಗರದಲ್ಲಿ ಕೆಜಿ ಬೆಳ್ಳಿ ಬೆಲೆ 600 ರೂಪಾಯಿ ಇಳಿಕೆಯ ಬಳಿಕ 70,000 ರೂಪಾಯಿ ಆಗಿದೆ. ಹಾಗೆಯೇ ಚೆನ್ನೈನಲ್ಲಿ ಕೆಜಿ ಬೆಳ್ಳಿ ಬೆಲೆ 1,100 ರೂಪಾಯಿ ಕಡಿತದ ಬಳಿಕ 74,100 ರೂಪಾಯಿ ನಿಗದಿಯಾಗಿದೆ.
ದೆಹಲಿಯಲ್ಲಿ ಕೆಜಿ ಬೆಳ್ಳಿ ಬೆಲೆ 600 ರೂಪಾಯಿ ಇಳಿಕೆ ಕಂಡಿದೆ. ಆ ಮೂಲಕ 70,000 ರೂಪಾಯಿ ನಿಗದಿ ಮಾಡಲಾಗಿದೆ. ಅದೇ ರೀತಿ ಮುಂಬೈ ನಗರದಲ್ಲಿ ಕೆಜಿ ಬೆಳ್ಳಿಗೆ 70,000 ರೂಪಾಯಿ ನಿಗದಿ ಮಾಡಲಾಗಿದೆ. ದೈನಂ್ಇನ ದರ ಬದಲಾವಣೆಯಲ್ಲಿ ಗಮನಿಸಿದಾಗ ಸರಿಸುಮಾರು 600 ರೂಪಾಯಿಯಷ್ಟು ಕಡಿತಗೊಳಿಸಲಾಗಿದೆ.
ಇದನ್ನೂ ಓದಿ:
Gold Rate Today: ಚಿನ್ನದ ದರ ಅಲ್ಪವೇ ಏರಿದೆ ಅಷ್ಟೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವ ಕುರಿತು ಯೋಚಿಸಬಹುದು
Published On - 8:34 am, Thu, 8 July 21