Gold Rate Today: ಬೆಂಗಳೂರಿನಲ್ಲಿ ಸ್ಥಿರತೆಯಲ್ಲಿದೆ ಚಿನ್ನದ ದರ; ಚಿನ್ನಾಭರಣ ಪ್ರಿಯರಿಗಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ
Gold Silver Price Today: ಅದೆಷ್ಟೋ ವರ್ಷಗಳಿಂದ ಕಷ್ಟಪಟ್ಟು ದುಡಿಯುತ್ತಿರುತ್ತೀರಿ. ಅಷ್ಟು ವರ್ಷಗಳ ಕಾಲ ಸಾಕಿ-ಸಲುಹಿದ ಅಪ್ಪ ಅಮ್ಮನಿಗೆ ಏನಾದರೂ ಕೊಡಿಸಬೇಕು ಎಂಬ ಆಸೆಯೂ ಇರಬಹುದು. ಇಂದು ಮಾರುಕಟ್ಟೆಯಲ್ಲಿನ ಚಿನ್ನ, ಬೆಳ್ಳಿ ದರ ವಿವರ ಪರಿಶೀಲಿಸಿ.
Gold Silver Rate Today | ಬೆಂಗಳೂರು: ನಿನ್ನೆ ನಗರದಲ್ಲಿ ಚಿನ್ನದ ದರ ಕೊಂಚವೇ ಏರಿಕೆ ಕಂಡು ಬಂದಿತ್ತು. ಇನ್ನಿತರ ಪ್ರಮುಖ ನಗರಗಳಲ್ಲಿಯೂ ಸಹ ಚಿನ್ನಾಭರಣದ ದರ ಸ್ವಲ್ಪವೇ ಏರಿಕೆ ಕಂಡಿತ್ತು. ಆದರೆ ಇಂದು (ಜುಲೈ 6, ಮಂಗಳವಾರ) ಬೆಂಗಳೂರಿನಲ್ಲಿ ಚಿನ್ನದ ದರ ಸ್ಥಿರತೆಯನ್ನು ಕಾಪಾಯಿಕೊಂಡಿದೆ. ಹಾಗೆಯೇ ವಿವಿಧ ನಗರಗಳಲ್ಲಿ ಕೊಂಚ ಹೆಚ್ಚಳವಾಗಿದೆ. ಬೆಳ್ಳಿ ದರ ನಿನ್ನೆ ಕೂಡಾ ಏರಿಕೆ ಕಂಡಿತ್ತು. ಇಂದು ಸಹ ಸ್ವಲ್ಪ ಏರಿಕೆ ಆಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 1,000 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,310 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,43,100 ರೂಪಾಯಿ ಇದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ 48,340 ರೂಪಾಯಿ ಇದೆ. 100 ಗ್ರಾಂ ಚಿನ್ನದ ದರ 4,83,400 ರೂಪಾಯಿ ಇದೆ. ಬೆಳ್ಳಿ ದರದಲ್ಲಿ 1,200 ರೂಪಾಯಿ ಏರಿಕೆ ಕಂಡು ಬಂದ ಬಳಿಕ ಕೆಜಿ ಬೆಳ್ಳಿ ಬೆಲೆ 70,400 ರೂಪಾಯಿಗೆ ಹೆಚ್ಚಳವಾಗಿದೆ.
ಅದೆಷ್ಟೋ ವರ್ಷಗಳಿಂದ ಕಷ್ಟಪಟ್ಟು ದುಡಿಯುತ್ತಿರುತ್ತೀರಿ. ಅಷ್ಟು ವರ್ಷಗಳ ಕಾಲ ಸಾಕಿ-ಸಲುಹಿದ ಅಪ್ಪ ಅಮ್ಮನಿಗೆ ಏನಾದರೂ ಕೊಡಿಸಬೇಕು ಎಂಬ ಆಸೆಯೂ ಇರಬಹುದು. ಚಿಕ್ಕವರಿದ್ದಾಗಿನಿಂದಲೂ ಇಲ್ಲಿಯವರೆಗೂ ಅವರೇ ನಮಗೆ ಉಡುಗೊರೆಯನ್ನು ನೀಡುತ್ತಾ ಬಂದಿದ್ದಾರೆ. ನಾವು ದುಡಿತ ಸ್ವಂತ ಹಣದಲ್ಲಿ ಚಿನ್ನದ ಬಳೆಗಳನ್ನೋ, ಸರವನ್ನೋ ಅಥವಾ ಉಂಗುರವನ್ನೋ ಮಾಡಿಸಿ ಕೊಡುವ ಆಸೆ ಇದ್ದರೆ ಇಂದು ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿ.
ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,730 ರೂಪಾಯಿಗೆ ಇಳಿಕೆ ಆಗಿದೆ. 100 ಗ್ರಅಮ ಚಿನ್ನದ ದರದಲ್ಲಿ 1,300 ರೂಪಾಯಿ ಇಳಿಕೆ ಕಂಡು ಬಂದಿದೆ. ಆ ಮೂಲಕ 4,47,300 ರೂಪಾಯಿ ದಾಖಲಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,800 ರೂಪಾಯಿಗೆ ಇಳಿದಿದೆ. 100 ಗ್ರಅಂ ಚಿನ್ನದ ದರ 4,88,000 ರೂಪಾಯಿಗೆ ಇಳಿಕೆಯಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಆ ಮೂಲಕ 75,000 ರೂಪಾಯಿ ನಿಗದಿ ಆಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಕೊಂಚವೇ ಏರಿಕೆ ಕಂಡಿದ್ದು, 50,500 ರೂಪಾಯಿ ನಿದಿಯಾಗಿದೆ. 100 ಗ್ರಾಂ ಚಿನ್ನದ ದರ 5,05,000 ರೂಪಾಯಿಗೆ ಏರಿಕೆ ಆಗಿದೆ. ಸರಿಸುಮಾರು 400 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ 1,200 ರೂಪಾಯಿ ಏರಿಕೆ ಆಗಿದೆ. ಆ ಮೂಲಕ ಕೆಜಿ ಬೆಳ್ಳಿಗೆ 70,400 ರೂಪಾಯಿ ನಿಗದಿಯಾಗಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,430 ರೂಪಾಯಿ ನಿಗದಿ ಮಾಡಲಾಗಿದೆ. 100 ಗ್ರಾಂ ಚಿನ್ನದ ದರ 4,64,300 ರೂಪಾಯಿ ನಿಗದಿಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,430 ರೂಪಾಯಿ ಹಾಗೂ 100 ಗ್ರಾಂ ಚಿನ್ನದ ದರ 4,74,300 ರೂಪಾಯಿ ಆಗಿದೆ. ಸರಿಸುಮಾರು 1,200 ರೂಪಾಯಿ ನಿಗದಿ ಮಾಡಲಾಗಿದೆ. ಕೆಜಿ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದೆ. ದೈನಂದಿನ ದರ ಬದಲಾವಣೆಯಲ್ಲಿ 1,200 ರೂಪಾಯಿ ಏರಿಕೆ ಬಳಿಕ, 70,400 ರೂಪಾಯಿ ನಿಗದಿ ಮಾಡಲಾಗಿದೆ.
ಇದನ್ನೂ ಓದಿ:
Gold Rate Today: ಚಿನ್ನದ ದರ ಅಲ್ಪವೇ ಏರಿದೆ ಅಷ್ಟೆ! ಕೂಡಿಟ್ಟ ಹಣದಲ್ಲಿ ಆಭರಣ ಖರೀದಿಸುವ ಕುರಿತು ಯೋಚಿಸಬಹುದು