Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ

ಪೋಸ್ಟ್ ಆಫೀಸ್ ಮಂತ್ಲಿ ಇನ್​ಕಮ್ ಸ್ಕೀಮ್ ಯೋಜನೆ ಬಗ್ಗೆ ವಿವರಗಳು ಇಲ್ಲಿವೆ. 9 ಲಕ್ಷ ರೂಪಾಯಿ ಹೂಡಿಕೆ ಮಾಡಿ, ತಿಂಗಳಿಗೆ 4,950 ರೂಪಾಯಿ ಆದಾಯ ಪಡೆಯಬಹುದು.

Post Office MIS: ಪೋಸ್ಟ್ ಆಫೀಸ್ ತಿಂಗಳ ಆದಾಯ ಯೋಜನೆಯಲ್ಲಿ ರೂ. 4,950 ಪಡೆಯಿರಿ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 27, 2021 | 7:29 PM

Post Office Monthly Income Scheme: ಈ ದಿನ ನಿಮಗೆ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯೊಂದರ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಉಳಿತಾಯದ ಮೂಲಕ ಹೂಡಿಕೆದಾರರು ಪ್ರತಿ ತಿಂಗಳು ಒಟ್ಟು ಮೊತ್ತದ ಠೇವಣಿಯಿಂದ ಆದಾಯವನ್ನು ಪಡೆಯುತ್ತಾರೆ. ಈ ಆದಾಯವು ಜೀವನ ನಡೆಸಲು ನೆರವಾಗುತ್ತದೆ. ನಿಮ್ಮ ಒಟ್ಟು ಮೊತ್ತವೂ ಸುರಕ್ಷಿತವಾಗಿರುತ್ತದೆ. ಇದರಲ್ಲಿ, ಹೂಡಿಕೆದಾರರು ಶೇಕಡಾ 6.6ರಷ್ಟು ಉತ್ತಮ ಆದಾಯವನ್ನು ಪಡೆಯುತ್ತಾರೆ ಮತ್ತು ಅದರ ಮೆಚ್ಯೂರಿಟಿ ಅವಧಿಯು 5 ವರ್ಷಗಳಾಗಿರುತ್ತದೆ.

ಈ ಪೋಸ್ಟ್ ಆಫೀಸ್ ಯೋಜನೆಯ ಹೆಸರು Post Office MIS (Monthly Income Scheme). ಇದರಲ್ಲಿ ಕನಿಷ್ಠ 1000 ರೂಪಾಯಿಗಳನ್ನು ಠೇವಣಿ ಇಡಬಹುದು. ಇದಕ್ಕಿಂತ ಹೆಚ್ಚಿನ ಮೊತ್ತವು 100 ರ ಗುಣಕದಲ್ಲಿ ಇರುತ್ತದೆ. ವೈಯಕ್ತಿಕವಾಗಿ ಗರಿಷ್ಠ 4.5 ಲಕ್ಷ ರೂ., ಜಂಟಿ ಖಾತೆಯಲ್ಲಿ 9 ಲಕ್ಷದವರೆಗೆ ಠೇವಣಿ ಇಡಬಹುದು. ಜಂಟಿ ಖಾತೆಯಲ್ಲಿ ಇಬ್ಬರ ಕೊಡುಗೆ ಸಮಾನವಾಗಿರುತ್ತದೆ ಎಂಬುದು ಮುಖ್ಯ. ಬಡ್ಡಿದರವು ಪ್ರಸ್ತುತ ಶೇಕಡಾ 6.6 ಆಗಿದೆ.

ಪ್ರತಿ ತಿಂಗಳು 4950 ರೂಪಾಯಿ ಬಡ್ಡಿ ಆದಾಯ ಉದಾಹರಣೆಗೆ, ಎ ಮತ್ತು ಬಿ ಒಟ್ಟಾಗಿ ಈ ಯೋಜನೆಯಲ್ಲಿ ಗರಿಷ್ಠ 4.5+ 4.5 ಲಕ್ಷ ರೂಪಾಯಿ ಈ ರೀತಿಯಾಗಿ ಠೇವಣಿಯ ಒಟ್ಟು ಮೊತ್ತ 9 ಲಕ್ಷ ರೂಪಾಯಿಗಳನ್ನು ಮಾಡುತ್ತಾರೆ. ಶೇ 6.6 ರಷ್ಟು ದರದಲ್ಲಿ ವಾರ್ಷಿಕ ಬಡ್ಡಿ (900000 * 1 * 6.6 / 100 = 59400) 59400 ರೂಪಾಯಿ ಆಗುತ್ತದೆ. ಈ ರೀತಿಯಾಗಿ ಮಾಸಿಕ ಬಡ್ಡಿ ಆದಾಯ 4950 ರೂ. ಬಂದು, ಇದರಲ್ಲಿ 2475-2475 ಎ ಮತ್ತು ಬಿ ಇಬ್ಬರಿಗೂ ಸಮಾನವಾಗಿ ದೊರೆಯುತ್ತದೆ.

ಅರ್ಹತೆ ಮತ್ತು ತೆರಿಗೆ ನಿಯಮಗಳು ಪೋಸ್ಟ್ ಆಫೀಸ್ ಎಂಐಎಸ್ ಖಾತೆಯನ್ನು 10 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ತೆರೆಯಬಹುದು. ವಯಸ್ಸು ಅದಕ್ಕಿಂತ ಕಡಿಮೆಯಿದ್ದರೆ, ಗಾರ್ಡಿಯನ್ ತನ್ನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು. ಖಾತೆ ತೆರೆದ 30 ದಿನಗಳ ನಂತರ ಬಡ್ಡಿ ಪಾವತಿ ಪ್ರಾರಂಭವಾಗುತ್ತದೆ. ಈ ಯೋಜನೆಯಲ್ಲಿ, ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ಪಾವತಿಸಲಾಗುತ್ತದೆ. ಖಾತೆದಾರರು ಮಾಸಿಕ ಬಡ್ಡಿಯನ್ನು ಪಡೆಯದಿದ್ದರೆ, ಹೆಚ್ಚುವರಿ ಬಡ್ಡಿಯ ಲಾಭವನ್ನು ನೀಡುವುದಿಲ್ಲ. ಅದೇ ಅಂಚೆ ಕಚೇರಿಯ ಉಳಿತಾಯ ಖಾತೆಗೆ ಆಟೋ ಮೋಡ್‌ನಲ್ಲಿ ಬಡ್ಡಿಯು ಪ್ರತಿ ತಿಂಗಳು ಬರುತ್ತದೆ. ಬಡ್ಡಿ ಆದಾಯಕ್ಕೆ ಖಾತೆದಾರರಿಗೆ ಸಂಪೂರ್ಣವಾಗಿ ತೆರಿಗೆ ವಿಧಿಸಲಾಗುತ್ತದೆ.

ಅವಧಿಗೆ ಪೂರ್ವ ಅಕೌಂಟ್ ಕ್ಲೋಸ್ ಮಾಡಿದರೆ ಅಥವಾ ಸಾವು ಸಂಭವಿಸಿದಲ್ಲಿ ಏನಾಗುತ್ತದೆ? ಪೋಸ್ಟ್ ಆಫೀಸ್ ಎಂಐಎಸ್​ಗೆ ಲಾಕ್-ಇನ್ ಅವಧಿ 1 ವರ್ಷ ಮತ್ತು ಮುಕ್ತಾಯ ಅವಧಿ 5 ವರ್ಷಗಳಾಗಿರುತ್ತವೆ. ಅದಕ್ಕೂ ಮೊದಲು ಒಟ್ಟು ಮೊತ್ತದ ಠೇವಣಿಗಳನ್ನು ಹಿಂಪಡೆಯಲು ಆಗುವುದಿಲ್ಲ. 1ರಿಂದ 3 ವರ್ಷಗಳ ನಡುವೆ ಖಾತೆಯನ್ನು ಕ್ಲೋಸ್ ಮುಚ್ಚಿದರೆ, ಅಸಲು ಮೊತ್ತದ 2% ಅನ್ನು ದಂಡವಾಗಿ ಕಡಿತಗೊಳಿಸಲಾಗುತ್ತದೆ. 3ರಿಂದ 5 ವರ್ಷಗಳ ಮಧ್ಯೆ ಹಿಂತೆಗೆದುಕೊಂಡರೆ ಶೇಕಡಾ 1ರಷ್ಟು ದಂಡ ಹಾಕಲಾಗುತ್ತದೆ. ಖಾತೆದಾರರು ಮೃತಪಟ್ಟರೆ, ನಾಮಿನಿಗೆ ಬಡ್ಡಿ ಸೇರಿದಂತೆ ಪೂರ್ಣ ಮೊತ್ತವನ್ನು ನೀಡಲಾಗುತ್ತದೆ.

ಇದನ್ನೂ ಓದಿ: ಪೋಸ್ಟ್ ಆಫೀಸ್ PPFನಲ್ಲಿ ದಿನಕ್ಕೆ 150 ರೂ. ಉಳಿಸಿದರೆ 15 ವರ್ಷದಲ್ಲಿ 15 ಲಕ್ಷ ಉಳಿತಾಯ

(Post office monthly income scheme, under this you can earn up to Rs 4950 every month)

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್