ಪೋಸ್ಟ್ ಆಫೀಸ್ PPFನಲ್ಲಿ ದಿನಕ್ಕೆ 150 ರೂ. ಉಳಿಸಿದರೆ 15 ವರ್ಷದಲ್ಲಿ 15 ಲಕ್ಷ ಉಳಿತಾಯ

Post office Public Provident Fund: ದಿನಕ್ಕೆ 150 ರೂಪಾಯಿಯಂತೆ ಉಳಿತಾಯ ಮಾಡಿದರೆ ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ನಿಮ್ಮ ಹಣ 15 ವರ್ಷದಲ್ಲಿ 15 ಲಕ್ಷ ರೂಪಾಯಿ ಆಗುತ್ತದೆ ಎಂಬುದು ಗೊತ್ತಾ?

ಪೋಸ್ಟ್ ಆಫೀಸ್ PPFನಲ್ಲಿ ದಿನಕ್ಕೆ 150 ರೂ. ಉಳಿಸಿದರೆ 15 ವರ್ಷದಲ್ಲಿ 15 ಲಕ್ಷ ಉಳಿತಾಯ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on:Apr 22, 2021 | 3:01 PM

ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್: ನಮ್ಮ ಹತ್ತಿರ ಇರೋದೇ ಕಡಿಮೆ ದುಡ್ಡು. ಅದನ್ನೂ ಉಳಿತಾಯ ಮಾಡು ಮಾಡು ಅಂತಾರೆ. ಹೀಗೆ ಅದನ್ನೂ ಉಳಿಸಿದರೆ ಖರ್ಚು ಮಾಡುವುದಾದರೂ ಏನು? ಅಥವಾ ಅಷ್ಟೇ ಅಷ್ಟು ಹಣ ಉಳಿಸಿಬಿಟ್ಟರೆ ಏನು ಮಹಾ ಉಳಿತಾಯ ಆಗಿಬಿಡುತ್ತದೆ ಎಂಬ ಭಾವನೆ ಹಲವರಲ್ಲಿ ಇರುತ್ತದೆ. ನಿಮ್ಮಿಂದ ಒಂದು ತಿಂಗಳಲ್ಲಿ 5000 ರೂಪಾಯಿಯಷ್ಟು ಉಳಿತಾಯ ಮಾಡುವುದಕ್ಕೆ ಸಾಧ್ಯ ಇದೆಯಾ? ಇವತ್ತಿನ ಬಡ್ಡಿಯ ಲೆಕ್ಕಕ್ಕೆ ಇನ್ನು 15 ವರ್ಷದಲ್ಲಿ ಅದೇ ದುಡ್ಡು 15 ಲಕ್ಷ ಆಗುವುದನ್ನು ನೀವು ನೋಡುವಂಥ ಒಂದೊಳ್ಳೆ ಉಳಿತಾಯದ ಯೋಜನೆಯನ್ನು ನಾವು ನಿಮಗೆ ತಿಳಿಸುತ್ತೇವೆ.

ಈ ಉಳಿತಾಯ ಯೋಜನೆಗೆ ನೀವು ಹಾಕುವ ಹಣ ತೆರಿಗೆಯಿಂದ ಮುಕ್ತವಾಗಿರುತ್ತದೆ. ಇನ್ನು ವರ್ಷಾವರ್ಷ ಬರುವ ಬಡ್ಡಿ ಮೇಲೆ ಕೂಡ ತೆರಿಗೆ ಇಲ್ಲ. ಅಷ್ಟೇ ಅಲ್ಲ, 15 ವರ್ಷವಾದ ಮೇಲೆ ಮೆಚ್ಯೂರಿಟಿ ಆಗುತ್ತದಲ್ಲಾ ಅದಕ್ಕೂ ಯಾವುದೇ ತೆರಿಗೆ ಬೀಳಲ್ಲ. ಹೀಗೆ ತೆರಿಗೆ ಕಡಿತ ಆಗಲ್ಲ ಅನ್ನೋದನ್ನು ಲೆಕ್ಕ ಹಾಕಿಕೊಂಡರೆ ರಿಟರ್ನ್ಸ್ ಮತ್ತೂ ಹೆಚ್ಚಾಗುತ್ತದೆ. ಯಾವುದು ಆ ಸ್ಕೀಮ್ ಅಂತೀರಾ? ಅದರ ಹೆಸರು ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್. ಇದು ಸಂಪೂರ್ಣ ಸುರಕ್ಷಿತವೂ ಹೌದು. ಸದ್ಯಕ್ಕೆ ವಾರ್ಷಿಕ ಶೇ 7.1ರಷ್ಟು ಬಡ್ಡಿ ದರ ಇದೆ.

ನೀವು ಪೋಸ್ಟ್ ಆಫೀಸ್ ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ತಿಂಗಳಿಗೆ 4,500 ರೂಪಾಯಿ ಅಥವಾ ದಿನಕ್ಕೆ 150 ರೂಪಾಯಿಯಂತೆ ಅಂದುಕೊಂಡು,  ಹಣವನ್ನು ಒಟ್ಟುಗೂಡಿಸಿಕೊಂಡು ಹೂಡಿಕೆ ಮಾಡಿದರೆ, ಮೆಚ್ಯೂರಿಟಿ ಸಮಯದಲ್ಲಿ (15 ವರ್ಷಗಳು), ಪ್ರಸ್ತುತ ಬಡ್ಡಿದರಕ್ಕೆ (ವಾರ್ಷಿಕವಾಗಿ ಶೇ 7.10) 14 ಲಕ್ಷ 84 ಸಾವಿರ ರೂಪಾಯಿ ಬರುತ್ತದೆ. ಪ್ರತಿ ತಿಂಗಳು 4,500 ರೂ. ಹೂಡಿಕೆ ಮಾಡಿದ ನಂತರ, 15 ವರ್ಷಗಳಲ್ಲಿ ಈ ಮೊತ್ತ 8,21,250 ರೂಪಾಯಿ ಆಗುತ್ತದೆ. ವಾರ್ಷಿಕವಾಗಿ 7.1 ಶೇಕಡಾ ಬಡ್ಡಿದರದ ಪ್ರಕಾರ, 6.63 ಲಕ್ಷ ರೂಪಾಯಿ ಬಡ್ಡಿ ಸೇರಿ, ಒಟ್ಟು 14.84 ಲಕ್ಷ ರೂಪಾಯಿ ದೊರೆಯುವುದು.

ಈ ಯೋಜನೆಯಲ್ಲಿ ಒಂದು ಫೈನಾನ್ಷಿಯಲ್ ವರ್ಷದಲ್ಲಿ (ಏಪ್ರಿಲ್​ನಿಂದ- ಮಾರ್ಚ್ ತನಕ ಹಣಕಾಸು ವರ್ಷ) 1.50 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬಹುದು. ಈ ಹೂಡಿಕೆ ಮಾಡುವ ಮೂಲಕ ಸೆಕ್ಷನ್ 80 ಸಿ ಅಡಿಯಲ್ಲಿ ವಿನಾಯಿತಿಯ ಲಾಭವನ್ನೂ ಪಡೆಯಬಹುದು. ತೆರಿಗೆ ಉಳಿಸುವಲ್ಲಿ ಇದು ನಿಮಗೆ ಸಹಾಯ ಮಾಡುತ್ತದೆ. ಬಡ್ಡಿ ಆದಾಯವು ಸಂಪೂರ್ಣವಾಗಿ ತೆರಿಗೆ ಮುಕ್ತ ಮತ್ತು ಮೆಚ್ಯೂರಿಟಿ ಮೊತ್ತವೂ ತೆರಿಗೆಯಿಂದ ಮುಕ್ತವಾಗಿದೆ. ಈ ರೀತಿಯಾಗಿ, ಹಣದುಬ್ಬರದ ಆಧಾರದ ಮೇಲೆ, ಸದ್ಯಕ್ಕೆ ಚಿಲ್ಲರೆ ಹಣದುಬ್ಬರವು ಶೇಕಡಾ 5.5 ಕ್ಕಿಂತ ಹೆಚ್ಚಾಗಿದೆ. ಈ ಸಂದರ್ಭದಲ್ಲಿ, ನಿವ್ವಳ ಆದಾಯದ ದೃಷ್ಟಿಯಿಂದ ಇದು ಅತ್ಯುತ್ತಮ ಆಯ್ಕೆಯಾಗಿದೆ.

ಸಾರ್ವಜನಿಕ ಭವಿಷ್ಯ ನಿಧಿಯಲ್ಲಿನ ಬಡ್ಡಿಯನ್ನು ಪ್ರತಿ ತಿಂಗಳ 5 ರಂದು ಬಾಕಿ ಮೊತ್ತದ (ಬ್ಯಾಲೆನ್ಸ್) ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ 5 ನೇ ತಾರಿಕಿನೊಳಗೆ ಹೂಡಿಕೆ ಮಾಡಿ. ಒಂದು ದಿನದ ಕಡಿಮೆಯಿದ್ದರೆ, ಇಡೀ 25 ದಿನಗಳವರೆಗೆ ನಿಮಗೆ ಬಡ್ಡಿಯ ಲಾಭ ದೊರೆಯುವುದಿಲ್ಲ. ಪ್ರತಿ ತಿಂಗಳು ಈ ತಪ್ಪು ಮಾಡಿದರೆ, 365 ದಿನಗಳಲ್ಲಿ 300 ದಿನಗಳವರೆಗೆ ಬಡ್ಡಿ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಈ ಉಳಿತಾಯ ಸಾಧನವು 15 ವರ್ಷಗಳಲ್ಲಿ ಮೆಚ್ಯೂರ್ ಆಗುತ್ತದೆ. ಒಂದು ಹಣಕಾಸು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿವರೆಗೆ ಠೇವಣಿ ಇಡಬಹುದು ಎಂಬುದು ಗಮನದಲ್ಲಿರಲಿ. ಇನ್ನು ಕನಿಷ್ಠ ಮೊತ್ತ ಎಂದು 500 ರೂಪಾಯಿ ಠೇವಣಿ ಮಾಡಬೇಕಾಗುತ್ತದೆ.

ಅಂಚೆ ಕಚೇರಿಯಲ್ಲಿ ಇದೀಗ ಆನ್​ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಆರಂಭವಾಗಿದೆ. ಪೋಸ್ಟ್​ ಆಫೀಸ್​ ಪೇಮೆಂಟ್ ಬ್ಯಾಂಕ್ (ಪಿಒಪಿಬಿ) ಮೂಲಕ ನಿಮ್ಮ ಪಿಪಿಎಫ್ ಅಕೌಂಟ್​ಗೆ ಆನ್​ಲೈನ್​ನಲ್ಲಿ ಹಣ ಪಾವತಿಸಬಹುದು. ಇಷ್ಟು ದಿನ ಈ ಅವಕಾಶ ಇರಲಿಲ್ಲ. ಇನ್ನು ಅಂಚೆಕಚೇರಿಯನ್ನು ಹೊರತುಪಡಿಸಿ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಐಸಿಐಸಿಐ ಬ್ಯಾಂಕ್​ನಂಥ ಕಡೆಗಳಲ್ಲೂ ಪಿಪಿಎಫ್ ಖಾತೆ ತೆರೆಯಬಹುದು.

ಅಂಚೆ ಕಚೇರಿಯಲ್ಲಿನ ಪಿಪಿಎಫ್ ಖಾತೆಯ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: VPF or PPF: ಹಣ ಉಳಿತಾಯಕ್ಕೆ ನಿಮಗೆ ವಿಪಿಎಫ್ ಅಥವಾ ಪಿಪಿಎಫ್​ಗಳ ಪೈಕಿ ಯಾವುದು ಉತ್ತಮ?

(You can save Rs 15 lakhs in 15 years by saving Rs 4500 in post office PPF account)

Published On - 2:21 pm, Thu, 22 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ