Forbes Asia 30 Under 30: ಬೆಂಗಳೂರಿನ 25 ವರ್ಷದ ವಿಭಾರ ಉದ್ಯಮ ವರ್ಷದಲ್ಲಿ 2 ಕೋಟಿ ರೂ. ವಹಿವಾಟು

ಬೆಂಗಳೂರಿನ 25 ವರ್ಷದ ವಿಭಾ ಹರೀಶ್ ಅವರು Forbes Asia 30 Under 30ರಲ್ಲಿ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಅವರು ಆರಂಭಿಸಿದ ಉದ್ಯಮ ಒಂದೇ ವರ್ಷದಲ್ಲಿ 2 ಕೋಟಿ ರೂ. ವಹಿವಾಟು ನಡೆಸಿದೆ.

Forbes Asia 30 Under 30: ಬೆಂಗಳೂರಿನ 25 ವರ್ಷದ ವಿಭಾರ ಉದ್ಯಮ ವರ್ಷದಲ್ಲಿ 2 ಕೋಟಿ ರೂ. ವಹಿವಾಟು
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 22, 2021 | 6:31 PM

ಕಳೆದ ವರ್ಷ ಕೊರೊನಾ ಬಿಕ್ಕಟ್ಟಿನಿಂದ ಭಾರತವೂ ಸೇರಿದ ಹಾಗೆ ಇಡೀ ವಿಶ್ವವೇ ತಲ್ಲಣಿಸಿತು. ಸರ್ಕಾರದಿಂದ ಕಠಿಣವಾದ ಲಾಕ್​ಡೌನ್ ಘೋಷಣೆ ಮಾಡಲಾಯಿತು. ಆ ನಂತರ ಹಲವು ಉದ್ಯಮಗಳು ನಷ್ಟವನ್ನು ಭರಿಸಲಾಗದೆ ಬಾಗಿಲು ಮುಚ್ಚಿದವು. ಆದರೆ ಬೆಂಗಳೂರಿನ 25 ವರ್ಷದ ವಿಭಾ ಹರೀಶ್ ಎಂಬ ಉದ್ಯಮಿ 2020ರಲ್ಲೇ ಬೆಳ್ಳಿ ಕಿರಣಗಳನ್ನು ಕಂಡುಕೊಂಡಿದ್ದಾರೆ. ಅದು ಯಾವ ಮಟ್ಟಿಗೆ ಅಂದರೆ, ಅವರು ವ್ಯವಹಾರ ಆರಂಭಿಸಿದ ಒಂದೇ ವರ್ಷದಲ್ಲಿ ಫೋರ್ಬ್ಸ್ ಏಷ್ಟಾದ 30 ಅಂಡರ್ 30 (30 ವರ್ಷದೊಳಗಿನ 30 ಮಂದಿ ಉದ್ಯಮಿಗಳು) ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಆಕೆಯ ಸಂಸ್ಥೆ Cosmix ಸಸ್ಯಗಳನ್ನು ಆಧಾರವಾಗಿಟ್ಟುಕೊಂಡು ಸಪ್ಲಿಮೆಂಟ್ ಮತ್ತು ಹರ್ಬಲ್ ನ್ಯೂಟ್ರಿಷನ್ ಉತ್ಪಾದಿಸುತ್ತದೆ. ಇದೀಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವ್ಯವಹಾರಗಳಲ್ಲಿ ಒಂದಾಗಿದೆ.

ಇದು ಶುರುವಾದ ಒಂದೇ ವರ್ಷದಲ್ಲಿ 2 ಕೋಟಿ ರೂಪಾಯಿ ವಹಿವಾಟು ನಡೆಸಿದೆ. ಇದರ ಎಲ್ಲ ಶ್ರೇಯವು ಉತ್ಪನ್ನಗಳು, ಅದರ ಉತ್ಪಾದನೆ ಮತ್ತು ಮಾರ್ಕೆಟಿಂಗ್ ತಂತ್ರಕ್ಕೆ ಸಲ್ಲಬೇಕು. ಸಮರ್ಪಕ ಪ್ರಮಾಣದಲ್ಲಿ ಮಹಿಳೆಯರಿಗೆ ನ್ಯೂಟ್ರಿಷನ್ ಇಲ್ಲದೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಬಗ್ಗೆ ಯುವತಿಯಾಗಿ ಆಕೆ ನೋಡಿದ ರೀತಿಯು ಕಳೆದ ವರ್ಷ ಈ ವ್ಯವಹಾರ ಆರಂಭಿಸುವುದಕ್ಕೆ ಮೂಲ ಆಯಿತು.

“ಅಲೋಪಥಿ ಔಷಧಗಳ ಬದಲಿಗೆ ಗಿಡಮೂಲಿಕೆಗಳನ್ನು ಬಳಸುವಂತೆ ನನ್ನ ತಾಯಿ ಸಲಹೆ ಮಾಡಿದರು. ನಾನು ಗಿಡಮೂಲಿಕೆಗಳ ಬಳಕೆ ಶುರು ಮಾಡಿದೆ. ಪಾಶ್ಚಾತ್ಯರಿಂದ ಹರ್ಬಲಿಸಂ ಹಾಗೂ ನಮ್ಮದೇ ದೇಶದ ಆಯುರ್ವೇದದಿಂದ ಸ್ಫೂರ್ತಿಗೊಂಡು, ನನ್ನದೇ ಪ್ರಯೋಗ ಶುರು ಮಾಡಿದೆ, ” ಎಂದು ವಿಭಾ ಹರೀಶ್ ಪಿಟಿಐಗೆ ತಿಳಿಸಿರುವುದಾಗಿ ಮಿಂಟ್ ವರದಿ ಮಾಡಿದೆ. ಅಂದಹಾಗೆ, ವಿಭಾ ಅವರಿಗೆ ಈ ಉದ್ಯಮವು ಪೋಷಕರಿಂದ ಬಂದಿದೆ. ಜತೆಗೆ ಅವರು ಈ ಮಾಡುತ್ತಿರುವ ಸಪ್ಲೈ ಚೈನ್ ಎಂಜಿನಿಯರಿಂಗ್ ಪದವಿ ಕೂಡ ಉದ್ಯಮಕ್ಕೆ ನೆರವಾಗಿದೆ.

ಇದನ್ನೂ ಓದಿ: Forbes Richest Billionaires List: ಸತತ ನಾಲ್ಕನೇ ವರ್ಷ ಫೋರ್ಬ್ಸ್ ವಾರ್ಷಿಕ ಪಟ್ಟಿಯಲ್ಲಿ ಬೆಜೋಸ್ ನಂಬರ್ 1 ಶ್ರೀಮಂತ

(Bengaluru based Vibha Harish is in the list of Forbes Asia 30 under 30)

ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್