UAE flights suspend: ಏಪ್ರಿಲ್ 25ರಿಂದ 10 ದಿನ ಭಾರತದಿಂದ ವಿಮಾನ ಹಾರಾಟ ಅಮಾನತು ಮಾಡಿದ ಯುಎಇ

UAE suspends flights: ಇದೇ ಏಪ್ರಿಲ್ 25ರಿಂದ ಹತ್ತು ದಿನಗಳ ಕಾಲ ಭಾರತದಿಂದ ವಿಮಾನ ಹಾರಾಟವನ್ನು ಅಮಾನತು ಮಾಡಿ ಯುಎಇ ಹೇಳಿಕೆ ನೀಡಿದೆ.

UAE flights suspend: ಏಪ್ರಿಲ್ 25ರಿಂದ 10 ದಿನ ಭಾರತದಿಂದ ವಿಮಾನ ಹಾರಾಟ ಅಮಾನತು ಮಾಡಿದ ಯುಎಇ
ಪ್ರಾತಿನಿಧಿಕ ಚಿತ್ರ
Follow us
Srinivas Mata
|

Updated on: Apr 22, 2021 | 9:05 PM

ಇದೇ ಏಪ್ರಿಲ್ 25ನೇ ತಾರೀಕಿನಿಂದ 10 ದಿನಗಳ ಕಾಲ ದುಬೈ ಮತ್ತು ಭಾರತದ ಮಧ್ಯೆ ವಿಮಾನ ಹಾರಾಟವನ್ನು ಅಮಾನತು ಮಾಡಿರುವುದಾಗಿ ಗುರುವಾರ ಅಂತರರಾಷ್ಟ್ರೀಯ ವಿಮಾನಯಾನ ಸಂಸ್ಥೆ ಎಮಿರೇಟ್ಸ್ ತಿಳಿಸಿದೆ. ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಲಾಗಿದೆ ಎಂದು ವರದಿ ಆಗಿದೆ. ಅಂದ ಹಾಗೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳು ತಮ್ಮ ಪ್ರಯಾಣ ನಿರ್ಬಂಧ ಪಟ್ಟಿಯಲ್ಲಿ ಭಾರತವನ್ನು ಸೇರಿಸಿವೆ. ಅಮೆರಿಕ, ಹಾಂಕಾಂಗ್, ಯುನೈಟೆಡ್ ಕಿಂಗ್​ಡಮ್ ಈಗಾಗಲೇ ತಮ್ಮ ನಾಗರಿಕರಿಗೆ ಹೊಸದಾಗಿ ಎಚ್ಚರಿಕೆಯನ್ನು ನೀಡಿವೆ. ಭಾರತಕ್ಕೆ ತೆರಳುವುದನ್ನು ಮತ್ತು ಇಲ್ಲಿಂದ ಪ್ರಯಾಣಿಸುವುದನ್ನು ನಿಲ್ಲಿಸುವಂತೆ ಸೂಚಿಸಿದೆ.

ಈಗಿನ ಪ್ರಯಾಣ ನಿರ್ಬಂಧವು ಏಪ್ರಿಲ್ 24ರ ಶನಿವಾರ ರಾತ್ರಿ 11.59ರಿಂದ ಜಾರಿಗೆ ಬರಲಿದೆ. 10 ದಿನಗಳ ನಂತರ ಮತ್ತೊಮ್ಮೆ ಪರಿಸ್ಥಿತಿಯ ಅವಲೋಕನ ಮಾಡಲಾಗುತ್ತದೆ ಎಂದು ಗಲ್ಫ್​ ನ್ಯೂಸ್ ಸುದ್ದಿಯನ್ನು ಆಧರಿಸಿ, ಪಿಟಿಐ ವರದಿ ಮಾಡಿದೆ. ಇನ್ನು ಕಳೆದ 14 ದಿನಗಳಲ್ಲಿ ಭಾರತದಿಂದ ತೆರಳಿರುವ ಯಾವುದೇ ಪ್ರಯಾಣಿಕರಿಗೂ ಎಲ್ಲಿಂದಲೂ ಯುಎಇಗೆ ಪ್ರವೇಶ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಯುಎಇಯಿಂದ ಹೊರಡುವುದು ಹಾಗೂ ಸರಕು ಸಾಗಣೆ ವಿಮಾನಗಳು ಅಲ್ಲಿಂದ ಭಾರತಕ್ಕೆ ಬರುವುದು ಮುಂದುವರಿಯಲಿದೆ. ಯುಎಇ ನಾಗರಿಕರು, ರಾಜತಾಂತ್ರಿಕ ನಿಯೋಗ, ಅಧಿಕೃತ ನಿಯೋಗಗಳು ಮತ್ತು ಉದ್ಯಮಿಗಳ ವಿಮಾನಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವರದಿಯ ಅನ್ವಯ, ಈ ಮೇಲಿನ ಪ್ರಯಾಣಿಕರಿಗೆ 10 ದಿನಗಳ ಕ್ವಾರಂಟೈನ್ ಕಡ್ಡಾಯ ಆಗಿರುತ್ತದೆ. ಅವರು ಅಲ್ಲಿಗೆ ತೆರಳುವ ದಿನ ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಅದರ ಜತೆಗೆ ನಾಲ್ಕು ಹಾಗೂ ಎಂಟನೇ ದಿನ ಕೂಡ ಪರೀಕ್ಷೆ ಆಗಲೇಬೇಕು. ಇನ್ನು ಯುಎಇಯಿಂದ ಹೊರಡುವ ಮೊದಲು ಈ ಹಿಂದೆ ಇದ್ದ 72 ಗಂಟೆಗಳ ಮುಂಚಿನ ಪರೀಕ್ಷೆಯನ್ನು 48 ಗಂಟೆಗೆ ಇಳಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಧಿಕೃತ ಲ್ಯಾಬ್​ಗಳ ಪರೀಕ್ಷೆ ಫಲಿತಾಂಶವನ್ನು ಮಾತ್ರ ಸ್ವೀಕರಿಸಲಾಗುತ್ತದೆ. ಅವುಗಳು ಕ್ಯೂಆರ್​ ಕೋಡ್ ಜನರೇಟ್ ಮಾಡಿರುತ್ತವೆ.

ಖಲೀಜಾ ಟೈಮ್ಸ್ ವರದಿ ಪ್ರಕಾರ, ಏಪ್ರಿಲ್ 24ರ ನಂತರ ಭಾರತದ ಯಾವುದೇ ಸ್ಥಳಗಳಿಗೆ ವಿಮಾನ ಬುಕ್ ಮಾಡುವುದನ್ನು ಎಮಿರೇಟ್ಸ್, ಎಥಿಹಾದ್. ಫ್ಲೈದುಬೈ ಮತ್ತು ಏರ್ ಅರೇಬಿಯಾ ವೆಬ್​ಸೈಟ್​ಗಳು ನಿರ್ಬಂಧಿಸಿವೆ. ಭಾರತದಲ್ಲಿ ಸದ್ಯಕ್ಕೆ ಕೊರೊನಾ ಎರಡನೇ ಅಲೆಯು ತೀವ್ರ ಸ್ವರೂಪದಲ್ಲಿ ಇದ್ದು, ಕಳೆದ 24 ಗಂಟೆಯಲ್ಲಿ 3 ಲಕ್ಷಕ್ಕೂ ಹೆಚ್ಚು ಹೊಸ ಸೋಂಕಿತ ಪ್ರಕರಣಗಳು ವರದಿ ಆಗಿವೆ.

ಇದನ್ನೂ ಓದಿ: Corona second wave | ಎರಡು ಗಂಟೆಗಿಂತ ಕಡಿಮೆ ಅವಧಿಯ ದೇಶೀ ವಿಮಾನಗಳ ಒಳಗೆ ಆಹಾರ ಪೂರೈಕೆಗೆ ನಿಷೇಧ

(UAE suspends flights from India for 10 days with effect from April 24, 2021. Due to increasing number of covid cases in India)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ