Explained | ಭೂಮಿ ಮೇಲೆ ಆಕ್ಸಿಜನ್​ಗಾಗಿ ಪರದಾಟ: ಮಂಗಳದಲ್ಲಿ ಆಕ್ಸಿಜನ್ ತಯಾರಿಸಿದ ನಾಸಾ! ಯಾಕೆ? ಹೇಗೆ?

ರೋವರ್​ ನೌಕೆಯಲ್ಲಿ ಅಡಗಿರುವ ಈ ಮಾಕ್ಸಿ (MOXIE) ಎಂಬ ಪುಟ್ಟ ಬಾಟ್​ ಯಂತ್ರವು ಮಂಗಳನ ಪರಿಸರದಲ್ಲಿ ಆಮ್ಲಜನಕ ಉತ್ಪಾದಿಸುವಲ್ಲಿ ಯಶಸ್ಸು ಕಂಡಿದೆ. ಮೊನ್ನೆ ಮಂಗಳವಾರ ಮಂಗಳನ ಅಂಗಳದಲ್ಲಿ ಉತ್ಪಾದನೆಯಾದ ಆಮ್ಲಜನಕದ ಪ್ರಮಾಣವು ಅತ್ಯಲ್ಪವಾಗಿದ್ದರೂ ಖಗೋಳಶಾಸ್ತ್ರಜ್ಞರು ಮುಂದೊಂದು ದಿನ ಮಂಗಳ ಗ್ರಹಕ್ಕೆ ಹೋಗಿ, ಸ್ವಾಭಾವಿಕವಾಗಿಯೇ ಉಸಿರಾಟ ಮಾಡಿ, ವಾಪಸಾಗುವ ಕನಸು ಕಾಣುತ್ತಿದ್ದಾರೆ!

Explained | ಭೂಮಿ ಮೇಲೆ ಆಕ್ಸಿಜನ್​ಗಾಗಿ ಪರದಾಟ: ಮಂಗಳದಲ್ಲಿ ಆಕ್ಸಿಜನ್ ತಯಾರಿಸಿದ ನಾಸಾ! ಯಾಕೆ? ಹೇಗೆ?
ಮಂಗಳದಲ್ಲಿ ಆಕ್ಸಿಜನ್ ತಯಾರಿಸಿದ ನಾಸಾ! ಯಾಕೆ? ಹೇಗೆ?
Follow us
ಸಾಧು ಶ್ರೀನಾಥ್​
| Updated By: Digi Tech Desk

Updated on:Apr 23, 2021 | 7:41 PM

ಇಲ್ಲಿ ಕೊರೊನಾ ಕಾಲದಲ್ಲಿ ಭೂಮಿ ಮೇಲೆ ‘ನ ಭೂತೋ ನ ಭವಿಷ್ಯತಿ​’ ಎಂಬಂತೆ ಜನ ತೊಟ್ಟು ಆಮ್ಲಜನಕಕ್ಕಾಗಿ ಹಾಹಾಕಾರ ಪಡುತ್ತಿದ್ದಾರೆ. ಆದರೆ ಅಲ್ಲಿ ಖಗೋಳಶಾಸ್ತ್ರಜ್ಞರು ಮಹತ್ತರ ಸಾಧನೆ ಮಾಡಿ, ಸ್ವಲ್ಪವೇ ಪ್ರಮಾಣದ ಆಮ್ಲಜನಕವಾದರೂ ಖಗೋಲ ಭವಿಷ್ಯದಲ್ಲಿ ಮಂಗಳನ ಅಂಗಳದಲ್ಲಿ ಮನುಷ್ಯ ಪುಟ್ಟಪುಟ್ಟ ಹೆಜ್ಜೆಯಿಡುವುದಕ್ಕೆ ಸಹಕಾರಿಯಾಗುವಂತಹ ಆಮ್ಲಜನಕವನ್ನು ತಯಾರಿಸಿಬಿಟ್ಟಿದ್ದಾರೆ! ಇಲ್ಲಿ ಭೂಮಿಯ ಮೇಲೆ ಸದ್ಯಕ್ಕೆ ಯಃಕಶ್ಚಿತ್ ಕೊರೊನಾ ಕ್ರಿಮಿಯಿಂದಾಗಿ ಮನುಷ್ಯ ಸೋಲೊಪ್ಪಿದ್ದರೂ.. ಅಲ್ಲಿ ಅತಿ ದೂರದ ಮಂಗಳನ ಅಂಗಳದಲ್ಲಿ ಮನುಷ್ಯನ ಸಾಧನೆ ನಿಜಕ್ಕೂ ಅಮೋಘವಾಗಿದೆ. ಇಷ್ಟಕ್ಕೂ ಏನದು ಆಕ್ಸಿಜನ್ ತಯಾರಿಸಿದ ಅಮೆರಿಕಾದ ನಾಸಾ ಸಂಸ್ಥೆಯ ಸಾಧನೆಯ ಶಿಖರ? ಅದರ ಸುತ್ತ ಒಂದು ರೌಂಡ್​ ಹಾಕಿಕೊಂಡು ಬರೋಣ ಬನ್ನೀ..

ಮಂಗಳ ಗ್ರಹದಲ್ಲಿರುವ ಅನಿಲದಲ್ಲಿ ಶೇ. 96ರಷ್ಟು ಇಂಗಾಲದ ಡೈಆಕ್ಸೈಡ್ ಅನಿಲವೇ ತುಂಬಿದೆ. ಆಮ್ಲಜನಕ ಶೇ. 0.13 ರಷ್ಟು ಮಾತ್ರವೇ ಇದೆ. ಅದೇ ಭೂಮಿಯ ಮೇಲೆ ಆಮ್ಲಜನಕ ಶೇ. 21ರಷ್ಟು ಅಗಾಧ ಪ್ರಮಾಣದಲ್ಲಿದೆ. ಭೂಮಿಯ ಮೇಲೆ ಮರ, ಗಿಡಗಳು ಇಂಗಾಲದ ಡೈಆಕ್ಸೈಡ್ ಅನ್ನು ಸ್ವಾಹಾ ಮಾಡಿ, ಮನುಷ್ಯನಿಗೆ ಉಪಕಾರ ಮಾಡಿದರೆ ಅಲ್ಲಿ ಮಂಗಳನ ಅಂಗಳದಲ್ಲಿ ಮಾಕ್ಸಿ (MOXIE) ಯಂತ್ರವು ಇಂಗಾಲದ ಡೈಆಕ್ಸೈಡ್ ಅನ್ನು ತಾನು ತೆಗೆದುಕೊಂಡು ಆಮ್ಲಜನಕವನ್ನು ಹೊರಸೂಸುತ್ತಿದೆ. ಮಾಕ್ಸಿ (MOXIE) ಯಂತ್ರ ಅಂದ್ರೆ ಮಂಗಳ ಗ್ರಹದಲ್ಲಿ ಸದ್ಯ ನಾಸಾದ ನೌಕೆ ಮೂಲಕ ಅಲ್ಲಿ ಇಳಿದುಬಿಟ್ಟಿರುವ ಪುಟ್ಟ ಯಂತ್ರ.

ನಾಸಾ ಸಂಸ್ಥೆಯ (NASA) ಪರ್​ಸಿವರೆನ್ಸ್ ಯೋಜನೆಯ ಪ್ರಕಾರ ವಿಜ್ಞಾನದ ಕಾದಂಬರಿಗಳಲ್ಲಿ ಓದುವಂತೆ ಆದರೆ ವಾಸ್ತವವಾಗಿ.. ಕಳೆದ ವಾರವಷ್ಟೇ ಪುಟ್ಟ ಹೆಲಿಕಾಪ್ಟರ್​ ಒಂದನ್ನು ಹಾರಿಸಿಯೇ ಬಿಟ್ಟಿತು. ಒಂದೊಂದೇ ಸಾಧನೆಗಳನ್ನು ಮಾಡತೊಡಗಿರುವ ನಾಸಾದ ಪರ್​ಸಿವರೆನ್ಸ್ ಈಗ ತನ್ನ ಮುಡಿಯಲ್ಲಿ ಮತ್ತೊಂದು ಗರಿ ಧರಿಸಿದೆ.

ಮಂಗಳನ ಅಂಗಳದಲ್ಲಿ ಪುಟ್ಟ ಪುಟ್ಟ ರೌಂಡ್ಸ್​ ಹೊಡೆಯುತ್ತಿರುವ ರೋವರ್​ ನೌಕೆಯಲ್ಲಿ ಅಡಗಿರುವ ಈ ಮಾಕ್ಸಿ (MOXIE) ಎಂಬ ಪುಟ್ಟ ಬಾಟ್​ ಯಂತ್ರವು ಮಂಗಳನ ಪರಿಸರದಲ್ಲಿ ಆಮ್ಲಜನಕ ಉತ್ಪಾದಿಸುವಲ್ಲಿ ಯಶಸ್ಸು ಕಂಡಿದೆ. ಇದನ್ನು ಕಂಡು ನಾಸಾ ವಿಜ್ಞಾನಿಗಳ ಜೊತೆ ಜೊತೆಗೆ ಇಡೀ ವಿಶ್ವವೇ ಬೆರಗಾಗಿದೆ. ಮೊನ್ನೆ ಮಂಗಳವಾರ ಮಂಗಳನ ಅಂಗಳದಲ್ಲಿ ಉತ್ಪಾದನೆಯಾದ ಆಮ್ಲಜನಕದ ಪ್ರಮಾಣವು ಅತ್ಯಲ್ಪವಾಗಿದ್ದರೂ ಖಗೋಳಶಾಸ್ತ್ರಜ್ಞರು ಈಗಿಂದಲೇ ಕನಸು ಕಾಣಲು ಆರಂಭಿಸಿದ್ದು, ಮುಂದೊಂದು ದಿನ ಮಂಗಳ ಗ್ರಹಕ್ಕೆ ಹೋಗಿ, ಸ್ವಾಭಾವಿಕವಾಗಿಯೇ ಉಸಿರಾಟ ಮಾಡಿ, ವಾಪಸಾಗುವ ಕನಸು ಕಾಣುತ್ತಿದ್ದಾರೆ!

ಇಷ್ಟಕ್ಕೂ ಕೆಂಪು ಗ್ರಹದ ಮೇಲೆ ಪರ್​ಸಿವರೆನ್ಸ್ ರೋವರ್​ ಯಂತ್ರವು ಆಮ್ಲಜನಕವನ್ನು ಉತ್ಪಾದಿಸಿದ್ದು ಹೇಗೆ? ಮಾಕ್ಸಿ (Mars Oxygen In-Situ Resource Utilization Experiment -MOXIE) ಎಂಬ ಪುಟ್ಟ ಯಂತ್ರವು ನಗಣ್ಯ ಪ್ರಮಾಣದಲ್ಲಿ ಆದರೆ ಮನುಷ್ಯನ ಅಸ್ತಿತ್ವಕ್ಕೆ ಅತ್ಯಂತ ಪ್ರಯೋಜನಕಾರಿಯಾಗಬಲ್ಲ ರೀತಿಯಲ್ಲಿ 5 ಗ್ರಾಂ ಆಮ್ಲಜನಕವನ್ನು ಉತ್ಪಾದಿಸಿದೆ. ಇದರಿಂದ ಒಬ್ಬ ಗಗನಯಾತ್ರಿ ಕೇವಲ 10 ನಿಮಿಷಗಳ ಕಾಲ ಉಸಿರಾಡಬಹುದು. ಕುತೂಹಲಕಾರಿ ಸಂಗತಿಯೆಂದರೆ ಇಷ್ಟೊಂದು ಪುಟ್ಟ ಪ್ರಮಾಣದಲ್ಲಿ 5 ಗ್ರಾಂ ಆಮ್ಲಜನಕವನ್ನು ಉತ್ಪಾದಿಸಲು ಪರ್​ಸಿವರೆನ್ಸ್ ತೆಗೆದುಕೊಂಡಿರುವ ಸಮಯ ಬರೋಬ್ಬರಿ 1 ಗಂಟೆ! ಗಮನಾರ್ಹವೆಂದ್ರೆ ಮುಂದಿನ 2 ವರ್ಷಗಳಲ್ಲಿ ಮಾಕ್ಸಿ (MOXIE) ಬಾಟ್ ಯಂತ್ರವು ಇನ್ನೂ 9 ಬಾರಿ ಹೀಗೆ ಆಮ್ಲಜನಕವನ್ನು ಉತ್ಪಾದಿಸಲಿದೆ.

Why and how MOXIE in NASA Perseverance mission produced oxygen on Mars 1

ಇಷ್ಟಕ್ಕೂ ಕೆಂಪು ಗ್ರಹದ ಮೇಲೆ ಪರ್​ಸಿವರೆನ್ಸ್ ರೋವರ್​ ಯಂತ್ರವು ಆಮ್ಲಜನಕವನ್ನು ಉತ್ಪಾದಿಸಿದ್ದು ಹೇಗೆ?

ಅಂದಹಾಗೆ ಈ ಮಾಕ್ಸಿ (MOXIE) ಬಾಟ್ ಯಂತ್ರವು ಕಾರಿನ ಬ್ಯಾಟರಿ ಗಾತ್ರದಲ್ಲಿದೆ. ಸುಮಾರು17 ಕೆಜಿ ತೂಕವಿದೆ. ಆದರೆ ಮಂಗಳ ಗ್ರಹದಲ್ಲಿ ಇದು ಕೇವಲ 6.5 ಕೆಜಿ ತೂಗುತ್ತಿದೆ! ಭೂಮಿಯ ಮೇಲಿಂದ ಕಳೆದ ವರ್ಷ ಫೆಬ್ರವರಿಯಲ್ಲಿ ಆಕಾಶದತ್ತ ನೆಗೆದ ರೋವರ್​ ನೌಕೆಯು ಮಂಗಳನ ಅಂಗಳದಲ್ಲಿ ನೆಲೆಯೂರಲು ತೆಗೆದುಕೊಂಡಿದ್ದು 7 ತಿಂಗಳ ಸುದೀರ್ಘ ಪ್ರಯಾಣ! ಈ ಮಾಕ್ಸಿ (MOXIE) ಬಾಟ್ ಯಂತ್ರವು ಪುಟ್ಟ ಮಾದರಿ ಯಂತ್ರವಷ್ಟೇ. ಅದೇನೂ ಪೂರ್ಣ ಪ್ರಮಾಣದ ದೊಡ್ಡ ಯಂತ್ರವಲ್ಲ. ಮೂರ್ತಿ ಚಿಕ್ಕದಾದರೂ ತನಗೆ ಒಪ್ಪಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದೆ. ಇನ್ನು ಭವಿಷ್ಯದಲ್ಲಿ ಇಲ್ಲಿಂದ ಮನುಷ್ಯ ಮಂಗಳ ಗ್ರಹಕ್ಕೆ ಹಾರಿದರೆ ಅಲ್ಲಿ ಆತನಿಗೆ ಅಗತ್ಯವಿರುವ ಆಮ್ಲಜನಕವನ್ನು ಉತ್ಪಾದಿಸಲು ಈಗಿರುವುದಕ್ಕಿಂತ 100 ಪಟ್ಟು ಅಧಿಕ ಸಾಮರ್ಥ್ಯದ ಯಂತ್ರ ಅಲ್ಲಿ ಸ್ಥಾಪಿಸಬೇಕಾಗುತ್ತದೆ.

ಇಷ್ಟಕ್ಕೂ ಮಂಗಳ ಗ್ರಹದಲ್ಲಿ ಆಮ್ಲಜನಕ ಉತ್ಪಾದನೆ ಯಾಕೆ ಅಷ್ಟೊಂದು ಪ್ರಾಮುಖ್ಯತೆ ಪಡೆದುಕೊಂಡಿದೆ ಅಂದರೆ ಅಲ್ಲಿ ಉತ್ಪಾದಿಸುವ ಆಮ್ಲಜನಕವು ಗಗನಯಾತ್ರಿಗಳಷ್ಟೇ ಅಗತ್ಯವಲ್ಲ; ಅಲ್ಲಿಂದ ವಾಪಸಾಗಲು ರೋವರ್​ನಂತಹ ರಾಕೆಟ್​ಗಳು ಭೂಮಿಗೆ ವಾಪಸಾಗುವಾಗ ಇದೇ ಆಮ್ಲಜನಕವನ್ನು ಇಂಧನವಾಗಿ ಬಳಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಆಮ್ಲಜನಕ ಉತ್ಪಾದಿಸುವ ಮಾಕ್ಸಿ (MOXIE) ಪಾತ್ರ ಪ್ರಾಧಾನ್ಯತೆ ಪಡೆಯುತ್ತದೆ. (Explained: Why and how MOXIE in NASA Perseverance mission produced oxygen on Mars)

Published On - 7:38 pm, Fri, 23 April 21

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು