Corona second wave | ಎರಡು ಗಂಟೆಗಿಂತ ಕಡಿಮೆ ಅವಧಿಯ ದೇಶೀ ವಿಮಾನಗಳ ಒಳಗೆ ಆಹಾರ ಪೂರೈಕೆಗೆ ನಿಷೇಧ
ಎರಡು ಗಂಟೆ ಅವಧಿಯೊಳಗಿನ ದೇಶೀ ವಿಮಾನ ಯಾನದಲ್ಲಿ ಆಹಾರ ಪೂರೈಕೆ ನಿಷೇಧಿಸಿ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಸೂಚನೆಯು ಏಪ್ರಿಲ್ 12ರಂದು ತಿಳಿಸಿದೆ.
ನವದೆಹಲಿ: ಎರಡು ಗಂಟೆಗಿಂತ ಕಡಿಮೆ ಅವಧಿಯ ದೇಶೀ ವಿಮಾನಗಳ ಒಳಗೆ ಸರ್ಕಾರವು ಆಹಾರ ಪದಾರ್ಥಗಳ ಪೂರೈಕೆಯನ್ನು (ಕ್ಯಾಟರಿಂಗ್) ನಿಷೇಧ ಮಾಡಿದೆ. ಕೋವಿಡ್- 19 ಸೋಂಕಿನ ಅಪಾಯವನ್ನು ಮಿತಿಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. “ಏರ್ಲೈನ್ಗಳು, ದೇಶೀ ವಲಯದಲ್ಲಿ ಕಾರ್ಯ ನಿರ್ವಹಿಸುವ ವಿಮಾನಗಳು ಊಟದ ಸೇವೆಯನ್ನು ಒದಗಿಸಬಹುದು. ಆದರೆ ವಿಮಾನ ಹಾರಾಟದ ಸಮಯ ಎರಡು ಗಂಟೆ ಮತ್ತು ಅದಕ್ಕಿಂತ ಹೆಚ್ಚಗಿರಬೇಕು,” ಎಂದು ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಸೂಚನೆಯು ಏಪ್ರಿಲ್ 12ರಂದು ತಿಳಿಸಿದೆ.
ಕಳೆದ ಎರಡು ವಾರಗಳಿಂದ ಕೊರೊನಾ ಸೋಂಕು ಪ್ರಮಾಣದಲ್ಲಿ ತೀವ್ರವಾಗಿ ಹೆಚ್ಚಳವಾಗಿದ್ದು, ರಾಜ್ಯ ಸರ್ಕಾರಗಳಿಂದ ಹೊಸದಾಗಿ ನಿರ್ಬಂಧಗಳನ್ನು ಹೇರಿರುವುದರಿಂದ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಆಗಿದೆ. ಇದರ ಮಧ್ಯೆಯೂ ಆಹಾರ ಪೂರೈಕೆ ಸೇವೆ ಬಗ್ಗೆ ಆದೇಶ ಬಂದಿದೆ. ಇನ್ನು ಸರ್ಕಾರದ ಹೊಸ ಮಾರ್ಗದರ್ಶಿ ಸೂತ್ರಗಳು ಕೆಲವು ಷರತ್ತುಗಳನ್ನು ಒಳಗೊಂಡಂತೆ ಎರಡು ಗಂಟೆಗೆ ಮೇಲ್ಪಟ್ಟ ದೂರ ಪ್ರಯಾಣದ ವಿಮಾನಗಳ ಕ್ಯಾಟರಿಂಗ್ ಸೇವೆಗಳಿಗೆ ಅನ್ವಯ ಆಗುತ್ತವೆ.
ಸರ್ಕಾರದ ಆದೇಶವನ್ನು ಅಲ್ಟಾನ್ ಏವಿಯೇಷನ್ನ ಸಂಜೀವ್ ಕಪೂರ್ ಅವರು, ಉತ್ತಮ ನಡೆ ಎಂದು ಕರೆದಿದ್ದಾರೆ. ಸ್ಪೈಸ್ ಜೆಟ್ನ ಮಾಜಿ ಸಿಒಒ ಮತ್ತು ವಿಸ್ತಾರಾದ ಸಿಎಸ್ಸಿಒ ಪ್ರಸ್ತಾವ ಮಾಡಿರುವಂತೆ, ಈ ನಿಷೇಧವನ್ನು ಮೂರರಿಂದ ನಾಲ್ಕು ಗಂಟೆಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದಾರೆ. ಕೋವಿಡ್ ಅಪಾಯವನ್ನು ಕಡಿಮೆ ಮಾಡುವುದಕ್ಕೆ ಹೋಲಿಸಿದಲ್ಲಿ ಆದಾಯ ನಷ್ಟ ಎಂಬುದು ಸಣ್ನ ತ್ಯಾಗ. ದೊಡ್ಡ ಸಮಸ್ಯೆಗೆ ಪರಿಷ್ಕಾರ ಸಿಕ್ಕಂತೆ ಆಗಿದೆ. ದೂರದ ವಿಮಾನಗಳಿಗೂ ಆಹಾರ ಪೂರೈಕೆ ನಿಲ್ಲಿಸಬಹುದು. ಏಕೆಂದರೆ ಒಂದೇ ಸಮಯಕ್ಕೆ ಎಲ್ಲ ಮಾಸ್ಕ್ಗಳನ್ನು ತೆಗೆಯಲು ಆಗಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕೊರೊನಾ ಎರಡನೇ ಅಲೆಯ ಆತಂಕ; ಮತ್ತೆ ಲಾಕ್ ಆದ್ರೆ ಎದುರಾಗಲಿದೆ ಕಷ್ಟ-ನಷ್ಟ
( Civil aviation ministry banned meals catering inside flight during short duration journey, which is less than 2 hours.)