RTGS Services: ಶನಿವಾರ ರಾತ್ರಿ 12 ರಿಂದ ಭಾನುವಾರ ಮಧ್ಯಾಹ್ನ 2 ಗಂಟೆ ತನಕ ಆರ್​ಟಿಜಿಎಸ್​ ಹಣ ವರ್ಗಾವಣೆ ಸೇವೆ ಇಲ್ಲ: ರಿಸರ್ವ್​ ಬ್ಯಾಂಕ್​

RBI: ಎಲ್ಲಾ ಬ್ಯಾಂಕ್​ ಗ್ರಾಹಕರು ಇದನ್ನು ಗಮನಿಸಬೇಕು. ಶನಿವಾರ ಮಧ್ಯ ರಾತ್ರಿ 12 ಗಂಟೆಯಿಂದ ಭಾನುವಾರ ಮಧ್ಯಾಹ್ನ 2 ಗಂಟೆವರೆಗೆ ಇಡೀ ದೇಶಾದ್ಯಂತ ಆರ್​ಟಿಜಿಎಸ್​ ಸೇವೆ ಇರುವುದಿಲ್ಲ ಎಂದು ರಿಸರ್ವ್​ ಬ್ಯಾಂಕ್​ ಹೇಳಿದೆ.

RTGS Services: ಶನಿವಾರ ರಾತ್ರಿ 12 ರಿಂದ ಭಾನುವಾರ ಮಧ್ಯಾಹ್ನ 2 ಗಂಟೆ ತನಕ ಆರ್​ಟಿಜಿಎಸ್​ ಹಣ ವರ್ಗಾವಣೆ ಸೇವೆ ಇಲ್ಲ: ರಿಸರ್ವ್​ ಬ್ಯಾಂಕ್​
ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ (ಸಾಂದರ್ಭಿಕ ಚಿತ್ರ)
Follow us
ಡಾ. ಭಾಸ್ಕರ ಹೆಗಡೆ
| Updated By: Digi Tech Desk

Updated on:Apr 12, 2021 | 7:17 PM

ಮುಂದಿನ ಭಾನುವಾರ ಯಾರೂ ಕೂಡ ಆರ್ಟಿಜಿಎಸ್ Real Time Gross Settlement (RTGS) ಮಾಡಲಯ ಪ್ರಯತ್ನಿಸಬೇಡಿ. ಇಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿದ ಪ್ರಕಟಣೆಯ ಪ್ರಕಾರ, ಆ ದಿನ ಇಡೀ ದೇಶಾದ್ಯಂತ 14 ಗಂಟೆಗಳ ಕಾಲ ಆರ್ಟಿಜಿಎಸ್ ಸೇವೆ ಇರುವುದಿಲ್ಲ. ಆದರೆ, National Electronic Fund Transfer (NEFT) ಸೇವೆ ಎಂದಿನಂತೆ ಲಭ್ಯವಿರುವುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಏಪ್ರಿಲ್ 17 ರ ರಾತ್ರಿಯ ವ್ಯವಹಾರ ಆದನಂತರ ಅಂದರೆ ಏಪ್ರಲ್ 17 ರಾತ್ರಿ 12 ಗಂಟೆಗೆ ಈ ಕೆಲಸ ಪ್ರಾರಂಭವಾಗಿ ಮರುದಿನ ಅಂದರೆ ಏಪ್ರಿಲ್ 18 ರ ಮಧ್ಯಾಹ್ನ 2 ಗಂಟೆವರೆಗೆ ಈ ಕೆಲಸ ನಡೆಯುವುದು. ಈ ಸಂದರ್ಭದಲ್ಲಿ ಆರ್ಟಿಜಿಎಎಸ್ ತಂತ್ರಾಂಶವನ್ನು ಉನ್ನತೀಕರಿಸಲಾಗುವುದು. ಹೀಗೆ ಮಾಡುವುದರಿಂದ, ಆರ್ಟಿಜಿಎಸ್ನ ಆಪತ್ಕಾಲೀನ ಪುನರ್ ಪರಿಶೀಲನಾ ಅವಧಿಯನ್ನು (Disaster Recovery Time) ಉಳಿಸಬಹುದಾಗಿದೆ ಎಂದು ಬ್ಯಾಂಕ್ ಹೇಳಿದೆ.

ಆರ್​ಟಿಜಿಎಸ್​ ಮತ್ತು ಎನ್ಇಎಫ್​ಟಿ ವ್ಯತ್ಯಾಸವೇನು? ಈ ಎರಡೂ ಕೂಡ ಇಲೆಕ್ಟ್ರಾನಿಕ್ ಹಣ ವರ್ಗಾವಣೆಯ ಮೂಲಕವೇ ನಡೆಯುತ್ತದೆ. ಆದರೆ, ಎನ್ಇಎಫ್ಟಿಯಲ್ಲಿ ಓರ್ವ ಗ್ರಾಹಕ, ಒಂದು ದಿನದಲ್ಲಿ ಹೆಚ್ಚು ಅಂದರೆ ಎರಡು ಲಕ್ಷ ರೂಪಾಯಿವರೆಗೆ ಮಾತ್ರ ಹಣ ವರ್ಗಾವಣೆ ಮಾಡಬಹುದಾಗಿದೆ. ಆದರೆ ಆರ್ಟಿಜಿಎಸ್ನಲ್ಲಿ ಹಾಗಲ್ಲ. ಇವು ಬ್ಯಾಂಕ್ನಿಂದ ಬ್ಯಾಂಕ್ಗೆ ಬೇರೆ ಬೇರೆಯಾಗಿರುತ್ತವೆ. ಕೆಲವು ಖಾಸಗಿ ಬ್ಯಾಂಕ್ಗಳು 25 ಲಕ್ಷ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತವೆ. ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ ಎರಡೂ ರೀತಿಯ ಹಣ ವರ್ಗಾವಣೆ ರಿಸರ್ವ್ ಬ್ಯಾಂಕ್ನ ಕೇಂದ್ರಿಯ ಕಂಪ್ಯೂಟರ್ ಸರ್ವರ್ ಮೂಲಕ ನಡೆಯುತ್ತದೆ. ಆದರೆ, ಐಎಮ್​ಪಿಎಸ್​ ಎಂಬ ಮೂರನೇ ತರಹದ ಹಣ ವರ್ಗಾವಣೆ ಮಾತ್ರ ನಮ್ಮ ನೆಟ್ ಸಂಪರ್ಕದ ಮೂಲಕ ನಡೆಯುತ್ತದೆ.

ಇದನ್ನೂ ಓದಿ:

ಆಟೊ ಪೇಮೆಂಟ್​ ಗಡುವು ವಿಸ್ತರಿಸಿದ ರಿಸರ್ವ್​ ಬ್ಯಾಂಕ್​: ಕ್ರೆಡಿಟ್ ಕಾರ್ಡ್​, ಮೊಬೈಲ್ ವ್ಯಾಲೆಟ್​ ಕಂಪನಿಗಳು ಸದ್ಯಕ್ಕೆ ನಿರಾಳ

ಕರ್ನಾಟಕದಲ್ಲಿ ಬ್ಯಾಂಕ್​ಗಳಿಗೆ ಏಪ್ರಿಲ್​ನಲ್ಲಿ 9 ದಿನ ರಜಾ; ಯಾವ್ಯಾವಾಗ?.. ಪಟ್ಟಿ ಇಲ್ಲಿದೆ ನೋಡಿ

Published On - 6:18 pm, Mon, 12 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ