AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

West Bengal Elections 2021: ಟಿಎಂಸಿ ಪಕ್ಷ ಎನ್ಆರ್​ಸಿ ಬಗ್ಗೆ ಸುಳ್ಳು ಹಬ್ಬಿಸುತ್ತಿದೆ: ಗೃಹ ಸಚಿವ ಅಮಿತ್ ಶಾ

Amit Shah: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ಖಚಿತ. ಹಾಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅದ್ದೂರಿ ವಿದಾಯ ನೀಡಿ. ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ಬಗ್ಗೆ ಹೇಳುವುದಕ್ಕಿಂತ ಹೆಚ್ಚು ಬಾರಿ ನನ್ನ ಹೆಸರು ಹೇಳಿದ್ದಾರೆ. ಹಾಗಾಗಿ ಅವರು ಚುನಾವಣೆ ಗೆಲ್ಲುವ ಸಾಧ್ಯತೆ ಇರಬಹುದು ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

West Bengal Elections 2021: ಟಿಎಂಸಿ ಪಕ್ಷ ಎನ್ಆರ್​ಸಿ ಬಗ್ಗೆ ಸುಳ್ಳು ಹಬ್ಬಿಸುತ್ತಿದೆ: ಗೃಹ ಸಚಿವ ಅಮಿತ್ ಶಾ
ಅಮಿತ್ ಶಾ
ರಶ್ಮಿ ಕಲ್ಲಕಟ್ಟ
|

Updated on:Apr 12, 2021 | 7:26 PM

Share

ಕಲಿಂಪೋಂಗ್ (ಪಶ್ಚಿಮ ಬಂಗಾಳ):  ಪಶ್ಚಿಮ ಬಂಗಾಳದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಪೌರತ್ವ ನೋಂದಣಿ (NRC) ಬಗ್ಗೆ ಟಿಎಂಸಿ ಸುಳ್ಳು ಹಬ್ಬಿಸುತ್ತಿದೆ. ಎನ್​ಆರ್​ಸಿಯಿಂದ ಗೋರ್ಖಾಗಳಿಗೆ ಯಾವುದೇ ಸಮಸ್ಯೆ ಆಗಲ್ಲ ಎಂದಿದ್ದಾರೆ. ಕಲಿಂಪೋಂಗ್​ನಲ್ಲಿ ರೋಡ್ ಶೋ ನಡೆಸಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಇರುವವರೆಗೆ ಯಾವುದೇ ಗೋರ್ಖಾಗಳಿಗೆ ತೊಂದರೆಯಾಗುವುದಿಲ್ಲ. ಎನ್ಆರ್​ಸಿ ಇನ್ನೂ ಜಾರಿಗೆ ತಂದಿಲ್ಲ. ಅದನ್ನು ಜಾರಿಗೆ ತಂದರೆ ಯಾವುದೇ ಒಬ್ಬ ಗೋರ್ಖಾನಲ್ಲಿ ದೇಶ ತೊರೆದು ಹೋಗಲು ಹೇಳುವುದಿಲ್ಲ ಎಂದಿದ್ದಾರೆ.

ತೃಣಮೂಲ ಕಾಂಗ್ರೆಸ್ ಎನ್ಆರ್​ಸಿ ಬಗ್ಗೆ ಸುಳ್ಳುಗಳನ್ನು ಹಬ್ಬಿಸಿ, ಗೋರ್ಖಾಗಳಲ್ಲಿ ಭಯ ಹುಟ್ಟಿಸಿದೆ ಎಂದು ಅಮಿತ್ ಶಾ ದೂರಿದ್ದಾರೆ. ಡಾರ್ಜಲಿಂಗ್ ಮತ್ತು ಕಲಿಂಪೋಗ್ ಹಲವಾರು ವರ್ಷಗಳಿಂದ ಸರ್ವಾಧಿಕಾರದ ನೋವು ಅನುಭವಿಸಿದೆ. 1986ರಲ್ಲಿ 1,200 ಗೋರ್ಖಾಗಳು ಜೀವ ಕಳೆದುಕೊಂಡರು. ಅವರಿಗೆ ಇಲ್ಲಿಯವಗೆ ನ್ಯಾಯ ಲಭಿಸಿಲ್ಲ. ಇತ್ತೀಚಿಗೆ ಗೋರ್ಖಾಗಳ ಸಾವಿಗೆ ಕಾರಣವಾಗಿದ್ದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಎಂದು ಶಾ ಆರೋಪಿಸಿದ್ದಾರೆ. ನಾವು ಇಲ್ಲಿ ಎಸ್ಐಟಿ ರಚನೆ ಮಾಡಿ ತಪ್ಪಿತಸ್ಥರನ್ನು ಜೈಲಿಗಟ್ಟುತ್ತೇವೆ ಎಂದಿದ್ದಾರೆ ಶಾ.  ಅಮಿತ್ ಶಾ ಅವರ ಸಭೆಯುದ್ದಕ್ಕೂ ಜೈ ಶ್ರೀರಾಮ್, ಜೈ ಗೋರ್ಖಾ ಘೋಷಣೆ ಕೇಳಿ ಬಂತು.

ಡಾರ್ಜಲಿಂಗ್ ಮತ್ತು ಅಲ್ಲಿನ ಸಮೀಪ ಪ್ರದೇಶಗಳಲ್ಲಿ 1986ಮತ್ತು 2017ರಲ್ಲಿ ಪ್ರತ್ಯೇಕ ಗೋರ್ಖಾಲ್ಯಾಂಡ್ ಗಾಗಿ ಚಳವಳಿ ಪ್ರತಿಭಟನೆ ನಡೆದಿತ್ತು.

ಕಲಿಂಪೋಂಗ್ ನಂತರ ಧೂಪ್ ಗುರಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಮಿತ್ ಶಾ ನಾಲ್ಕು ಹಂತಗಳ ಮತದಾನ ಮುಗಿದಾಗ 135 ಸೀಟುಗಳ ಪೈಕಿ 92 ಸೀಟುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 200ಕ್ಕಿಂತಲೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ಖಚಿತ. ಹಾಗಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅದ್ದೂರಿ ವಿದಾಯ ನೀಡಿ. ಮಮತಾ ಬ್ಯಾನರ್ಜಿ ಅವರು ತಮ್ಮ ರಾಜ್ಯದ ಬಗ್ಗೆ ಹೇಳುವುದಕ್ಕಿಂತ ಹೆಚ್ಚು ಬಾರಿ ನನ್ನ ಹೆಸರು ಹೇಳಿದ್ದಾರೆ. ಹಾಗಾಗಿ ಅವರು ಚುನಾವಣೆ ಗೆಲ್ಲುವ ಸಾಧ್ಯತೆ ಇರಬಹುದು ಎಂದು ಶಾ ವ್ಯಂಗ್ಯವಾಡಿದ್ದಾರೆ.

ನನ್ನ ಜೇಬಲ್ಲಿ ರಾಜೀನಾಮೆ ಪತ್ರ ಸಿದ್ಧವಿದೆ. ನಾಲ್ಕನೇ ಹಂತದ ಮತದಾನದ ವೇಳೆ ಕೇಂದ್ರೀಯ ಭದ್ರತಾ ಪಡೆ ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿ ನಾನು ರಾಜೀನಾಮೆ ನೀಡಬೇಕು ಎಂದು ಜನರು ಬಯಸಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಅಮಿಶಾ ಹೇಳಿದ್ದಾರೆ.

ಇದನ್ನೂ ಓದಿ:  West Bengal Elections 2021: ಯೋಧರನ್ನು ಅವಮಾನಿಸಬೇಡಿ: ಮಮತಾ ಬ್ಯಾನರ್ಜಿ ವಿರುದ್ಧ ಗುಡುಗಿದ ನರೇಂದ್ರ ಮೋದಿ

ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; 4ನೇ ಹಂತದ ಮತದಾನದಲ್ಲಿ ಸಿಂಗೂರ್ ಕ್ಷೇತ್ರ ನಿರ್ಣಾಯಕ

Published On - 7:14 pm, Mon, 12 April 21