Petrol Diesel Price: ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಹೀಗಿದೆ!
Petrol Diesel Rate in Bangalore: ಕಳೆದ ವರ್ಷ ಮಾರ್ಚ್ನಿಂದ ಪ್ರಾರಂಭವಾದ ಕೊರೊನಾ ಆರ್ಭಟದಿಂದಾಗಿ ರಾಷ್ಟ್ರವ್ಯಾಪ್ತಿ ಕರ್ಫ್ಯೂ ಆದೇಶ ಜಾರಿಗೊಳಿಸಲಾಯಿತು. ಆ ಸಂದರ್ಭದಲ್ಲಿ ಆರಂಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗಲಿಲ್ಲ. ಆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕ್ರಮೇಣ ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿತು.
ಬೆಂಗಳೂರು: ಇಂಧಗಳು ನಮ್ಮ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಅವುಗಳಲ್ಲಿ ಪೆಟ್ರೋಲ್, ಡೀಸೆಲ್ ವಾಹನ ಬಳಕೆಗೆ ಅತ್ಯವಶ್ಯಕ. ಕೆಲವು ವರ್ಷಗಳ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ವ್ಯವಸ್ಥೆ ತಿಂಗಳಿಗೆ ಎರಡು ಬಾರಿ ಜಾರಿಯಲ್ಲಿತ್ತು. ಅಂತರರಾಷ್ಟ್ರೀಯ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೊಲ್, ಡೀಸೆಲ್ ಬೆಲೆಯನ್ನು ನಿಗದಿ ಪಡಿಸಲಾಗುತ್ತದೆ. ಈ ವ್ಯವಸ್ಥೆಯು 15 ವರ್ಷಗಳವರೆಗೆ ಜಾರಿಗೆ ಬಂದಿತು. ಇದರ ನಂತರದಲ್ಲಿ ದೈನಂದಿನ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಚಯಿಸಲಾಯಿತು. ಅದಾದ ನಂತರ ಈ ಜವಾಬ್ದಾರಿಯನ್ನು ತೈಲ ಕಂಪನಿಗಳಿಗೆ ಹಸ್ತಾಂತರಿಸಲಾಯಿತು.
ಕಳೆದ ವರ್ಷ ಮಾರ್ಚ್ನಿಂದ ಪ್ರಾರಂಭವಾದ ಕೊರೊನಾ ಆರ್ಭಟದಿಂದಾಗಿ ರಾಷ್ಟ್ರವ್ಯಾಪ್ತಿ ಕರ್ಫ್ಯೂ ಆದೇಶ ಜಾರಿಗೊಳಿಸಲಾಯಿತು. ಆ ಸಂದರ್ಭದಲ್ಲಿ ಆರಂಭದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗಲಿಲ್ಲ. ಆದರೆ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕ್ರಮೇಣ ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿತು.
ಇಂದು ಏಪ್ರಿಲ್ 22ರಂದು ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎಂಬುದನ್ನು ಗಮನಿಸಿದಾಗ, ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92.43 ರೂಪಾಯಿ ಇದೆ. ಅದೇ ರೀತಿ ಪ್ರತಿ ಲೀಟರ್ ಡೀಸೆಲ್ ದರವನ್ನು 85.75 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು, ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್, ದರ 93.43 ರೂಪಾಯಿದೆ. ಬಾಗಲಕೋಟೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಇಂದು 93.95 ರೂಪಾಯಿ ಇದೆ . ಹಾಗೆಯೇ ಬೆಳಗಾವಿಯಲ್ಲಿ ಪ್ರತಿ ಲೀಟರ್ ಪೆಟ್ರೊಲ್ ದರ 94.06 ರೂಪಾಯಿ ಇದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.85 ರೂಪಾಯಿ ಹಾಗೂ ಬಿಜಾಪುರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.47 ರೂಪಾಯಿ ಇದೆ. ಉತ್ತರ ಕನ್ನಡದಲ್ಲಿ ಪೆಟ್ರೋಲ್ ದರ 94.91 ರೂಪಾಯಿ, ಯಾದಗಿರಿಯಲ್ಲಿ 94.40 ರೂಪಾಯಿ, ತುಮಕೂರಿನಲ್ಲಿ 93.89 ರೂಪಾಯಿ ಕೊಟ್ಟು ಗ್ರಾಹಕರು ಪೆಟ್ರೋಲ್ ಖರೀದಿಸುತ್ತಿದ್ದಾರೆ.
ಡೀಸೆಲ್ ದರ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ದರ 85.60 ರೂಪಾಯಿ ಇದೆ. ಬೆಳಗಾವಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 85.72 ರೂಪಾಯಿ ಇದೆ. ಬಳ್ಳಾರಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 87.08 ರೂಪಾಯಿ, ಬೀದರ್ನಲ್ಲಿ 86.12 ರೂಪಾಯಿ, ಬಿಜಾಪುರದಲ್ಲಿ 85.44 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು, ಉತ್ತರ ಕನ್ನಡದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 86.91 ರೂಪಾಯಿ, ಯಾದಗಿರಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ 85.72 ರೂಪಾಯಿ ಹಾಗೂ ತುಮಕೂರಿನಲ್ಲಿ 85.90 ರೂಪಾಯಿ ಕೊಟ್ಟು ವಾಹನ ಸವಾರರು ಡೀಸೆಲ್ ಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Petrol Diesel Price: ಪಂಚರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್ ದರ ಏರಿಕೆ ಮಾತು.. ದರ ಹೆಚ್ಚಳವಾಗದಂತೆ ಗ್ರಾಹಕರ ಪ್ರಾರ್ಥನೆ
ವಿವಿಧ ನಗರದ ಪೆಟ್ರೋಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html
Published On - 8:46 am, Thu, 22 April 21