ರಾಜ್ಯದಲ್ಲಿ ರೆಮ್​ಡೆಸಿವಿರ್ ಇಂಜೆಕ್ಷನ್ ಅಭಾವ ಹೆಚ್ಚಳ; ಅವಧಿ ಮುಗಿದ ಇಂಜೆಕ್ಷನ್ ಮರುಬಳಕೆಗೆ ಅನುಮತಿ ನೀಡಿದ ಸರ್ಕಾರ

ಏಪ್ರಿಲ್ 5 ರಂದು ಅವಧಿ ಮುಗಿದ ರೆಮ್​ಡೆಸಿವಿರ್​ ಇಂಜೆಕ್ಷನ್ ಮೇಲೆ ಅಕ್ಟೋಬರ್ 5ರ ವರೆಗೂ ಅವಧಿ ಎಂದು ತೋರಿಸಲು ಸ್ಟಿಕರ್ ಅಂಟಿಸಲಾಗ್ತಿದೆ ಎಂಬ ಮಾತು ಕೇಳಿಬಂದಿದೆ.

ರಾಜ್ಯದಲ್ಲಿ ರೆಮ್​ಡೆಸಿವಿರ್ ಇಂಜೆಕ್ಷನ್ ಅಭಾವ ಹೆಚ್ಚಳ; ಅವಧಿ ಮುಗಿದ ಇಂಜೆಕ್ಷನ್ ಮರುಬಳಕೆಗೆ ಅನುಮತಿ ನೀಡಿದ ಸರ್ಕಾರ
ರೆಮ್​​ಡೆಸಿವಿರ್​ ಚುಚ್ಚುಮದ್ದು
Follow us
preethi shettigar
|

Updated on:Apr 22, 2021 | 12:06 PM

ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹಬ್ಬುತ್ತಿದ್ದು, ಕರ್ನಾಟಕದಲ್ಲಂತೂ ಪರಿಸ್ಥಿತಿ ಕೈ ಮೀರುತ್ತಿದೆ. ಒಂದೆಡೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಇನ್ನೊಂದೆಡೆ ಪರಣ ಪ್ರಮಾಣವೂ ಜಅಸ್ತಿ ಆಗುತ್ತಿರುವುದು ಆತಂಕ ಸೃಷ್ಟಿಸಿದೆ. ಈ ನಡುವೆ ಕೊರೊನಾ ಸೋಂಕಿನಿಂದ ಗಂಭೀರಾವಸ್ಥೆಗೆ ತಲುಪಿದವರಿಗೆ ಸಂಜೀವಿನಿ ಎನ್ನಲಾಗುತ್ತಿದ್ದ ರೆಮ್​ಡೆಸಿವಿರ್ ಇಂಜೆಕ್ಷನ್ ಕೊರತೆಯೂ ತಲೆದೋರಿದೆ. ರಾಜ್ಯದಲ್ಲಿ ರೆಮ್​ಡೆಸಿವಿರ್ ಅಭಾವ ಹೆಚ್ಚಾಗಿರುವುದರಿಂದ ಕಂಗೆಟ್ಟ ಸರ್ಕಾರ ಅವಧಿ ಮುಗಿದ ಇಂಜೆಕ್ಷನ್​ಗಳನ್ನ ಮುಂದಿನ ಆರು ತಿಂಗಳ ಕಾಲ‌ ಮರುಬಳಕೆ ಮಾಡಲು ಅನುಮತಿ ನೀಡಿದೆ. ಇದರ ಪರಿಣಾಮ ಸರ್ಕಾರಿ ಆಸ್ಪತ್ರೆಗಳಲ್ಲಿ ಅವಧಿ ಮುಗಿದ ರೆಮ್​ಡೆಸಿವಿರ್ ಇಂಜೆಕ್ಷನ್ ಮರು ಬಳಕೆ ಮಾಡಲಾಗುತ್ತಿದೆ ಎಂಬ ಸಂಗತಿ ಹೊರಬಿದ್ದಿದೆ.

ಏಪ್ರಿಲ್ 5 ರಿಂದ ಅವಧಿ ಮುಗಿದ ರೆಮಿಡಿಸಿವಿರ್ ಇಂಜೆಕ್ಷನ್ ಅನ್ನು ವೈದ್ಯರು ಕೊರೊನಾ ಸೋಂಕಿತರಿಗೆ ನೀಡುತ್ತಿದ್ದಾರೆ ಎಂಬ ಸಂಗತಿ ಬಯಲಾಗಿದ್ದು, ಅವಧಿ ಮುಗಿದ  ಮೇಲೆ ಮುಂದಿನ ಆರು ತಿಂಗಳ ಕಾಲ ಮುಂದುವರೆದ ಸ್ಟಿಕರ್ ಅಂಟಿಸಿ ಬಳಕೆ ಮಾಡುತ್ತಿದ್ದಾರೆ ಎನ್ನಲಾದಾಗಿದೆ. ಏಪ್ರಿಲ್ 5 ರಂದು ಅವಧಿ ಮುಗಿದ ರೆಮ್​ಡೆಸಿವಿರ್​ ಇಂಜೆಕ್ಷನ್ ಮೇಲೆ ಅಕ್ಟೋಬರ್ 5ರ ವರೆಗೂ ಅವಧಿ ಎಂದು ತೋರಿಸಲು ಸ್ಟಿಕರ್ ಅಂಟಿಸಲಾಗ್ತಿದೆ ಎಂಬ ಮಾತು ಕೇಳಿಬಂದಿದೆ.

ಈ ಬಗ್ಗೆ ವೈದ್ಯರ ಅಭಿಪ್ರಾಯ ಏನು? ಅವಧಿ ಮುಗಿದ ರೆಮ್​ಡೆಸಿವಿರ್ ಇಂಜೆಕ್ಷನ್ ಆರು ತಿಂಗಳ ಕಾಲ ಮರು ಬಳಕೆ ಮಾಡಬಹುದು. ಹೊಸ ಔಷಧಿ ಆಗಿರುವ ಕಾರಣ ಬಳಕೆ ಮಾಡಬಹುದಾಗಿದೆ. ಹೀಗೆ ಬಳಕೆ ಮಾಡುವುದರಿಂದ ರೋಗಿಗಳಿಗೆ ತೊಂದರೆ ಆಗುವ ಸಾಧ್ಯತೆ ಇದೆಯಾದರೂ ಕಡಿಮೆ ಪರಿಣಾಮ ಆಗುವುದರಿಂದ ಆತಂಕ ಕಡಿಮೆ ಇದೆ. ಅವಧಿ ಮುಗಿದ ರೆಮ್​ಡೆಸಿವಿರ್ ಇಂಜೆಕ್ಷನ್ ರೋಗಿಗಳನ್ನ ಗುಣಮುಖರಾಗಿ ಮಾಡುವಲ್ಲಿ ಸ್ವಲ್ಪಮಟ್ಟಿಗೆ ವಿಫಲವಾಗುವ ಸಾಧ್ಯತೆ ಕೂಡ ಇದೆ. ಆದರೆ, ಸದ್ಯದಮಟ್ಟಿಗೆ ಇದು ಅನಿವಾರ್ಯವಾಗಿರುವುದರಿಂದ ಅವಧಿ ಮುಗಿದ ಇಂಜೆಕ್ಷನ್ ಬಳಕೆಗೆ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ರೆಮ್‌ಡಿಸಿವಿರ್ ಅತ್ಯಗತ್ಯ ಲಸಿಕೆ ಅಲ್ಲ ವೈದ್ಯರಿಂದ ಸ್ಪಷ್ಟನೆ ರೆಮ್‌ಡಿಸಿವಿರ್ ಅತ್ಯಗತ್ಯ ಲಸಿಕೆ ಅಲ್ಲ ಎನ್ನುತ್ತಿರುವ ಸರ್ಕಾರದ ಮಾತಿಗೆಹಿರಿಯ ಪಲ್ಮನಾಲಜಿಸ್ಟ್ ಮೂಲಕ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟನೆ ಕೊಡಿಸಿದ್ದಾರೆ. 9 ದಿನಗಳವರೆಗೆ ಸೋಂಕಿತನ ರಕ್ತದ ಆಕ್ಸಿಜನ್ 95ಕ್ಕಿಂತ ಕಡಿಮೆ ಇದ್ದರಷ್ಟೇ ರೆಮ್‌ಡಿಸಿವಿರ್ ನೀಡಬಹುದು. ರೆಮ್‌ಡಿಸಿವಿರ್ ನೀಡಿದರಷ್ಟೇ ಗುಣಮುಖರೆಂಬ ಭಾವನೆ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.

ಆದರೆ ಕೆಲ ಆಸ್ಪತ್ರೆಗಳಿಂದ ಅನಗತ್ಯವಾಗಿ ರೆಮ್‌ಡಿಸಿವಿರ್ ಬಳಕೆ ಮಾಡುತ್ತಿದ್ದಾರೆ. ರೋಗಿ ನಾರ್ಮಲ್ ಕಂಡಿಷನ್​ನಲ್ಲಿದ್ದರೂ ರೆಮ್ಡಿಸಿವಿರ್ ಬಳಕೆ ಮಾಡಲಾಗುತ್ತಿದೆ. ರೆಮ್ಡಿಸಿವಿರ್ ತರಲೇಬೇಕು ಎಂದು ಒತ್ತಡ ಹೇರುತ್ತಿರುವ ಕೆಲ ಖಾಸಗಿ ಆಸ್ಪತ್ರೆಗಳ ಬಗ್ಗೆ ಸರ್ಕಾರ ಗಮನ ಕೊಡದೆ ಅವುಗಳನ್ನು ನಿಯಂತ್ರಿಸದೆ ಕೈ ಚೆಲ್ಲಿ ಕುಳಿತಿದೆ ಎಂದು ಸದ್ಯ ಆರೋಪಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ:

ರಾಜ್ಯದಲ್ಲಿ ರೆಮ್‍ಡೆಸಿವಿರ್ ಇಂಜೆಕ್ಷನ್‍, ಆಮ್ಲಜನಕದ ಕೊರತೆಯಿಲ್ಲ; ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರಿಂದ ಸಿಎಂ ಯಡಿಯೂರಪ್ಪಗೆ ಭರವಸೆ

ಕೊರೊನಾ ಲಸಿಕೆಯೂ ಪೋಲಾಗುತ್ತಿದೆ; ತಮಿಳುನಾಡಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಲಸಿಕೆ ವ್ಯರ್ಥ: ಆರ್​ಟಿಐ ವರದಿ

(Karnataka Government sanctioning expired injection recycling in the wake of Remdesivir injection in the state)

Published On - 9:59 am, Thu, 22 April 21

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್