Gold Rate Today: ಏರುತ್ತಲೇ ಇದೆ ಚಿನ್ನ, ಬೆಳ್ಳಿ ದರ; ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ ಬೆಲೆ? ಇಲ್ಲಿದೆ ಮಾಹಿತಿ
Gold Price Today: ದಿನ ಸಾಗುತ್ತಿದ್ದಂತೆಯೇ ಚಿನ್ನ, ಬೆಳ್ಳಿ ದರ ಏರುತ್ತಲೇ ಇದೆ. ಇದನ್ನು ಗಮನಿಸುತ್ತಿರುವ ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಮದುವೆ ಸಮಾರಂಭಗಳು ನಡೆಯುತ್ತಿರುವ ಸಮಯದಲ್ಲಿ ಚಿನ್ನದ ದರ ಏರಿಕೆಯತ್ತ ಸಾಗುತ್ತಲೇ ಇದೆ ಎಂಬುದು ಗ್ರಾಹಕರ ಅಭಿಪ್ರಾಯ.
Gold Silver Price Today: ಬೆಂಗಳೂರು: ದೈನಂದಿನ ಪರಿಶೀಲನೆಯಲ್ಲಿ ಚಿನ್ನ ದರವನ್ನು ಗಮನಿಸಿದಾಗ ಚಿನ್ನದ ದರ ಇಂದು ಗುರುವಾರ ಕೊಂಚ ಏರಿಕೆಯಾಗಿದೆ. ದಿನ ಸಾಗುತ್ತಿದ್ದಂತೆ ಅಮೂಲ್ಯ ಲೋಹವಾದ ಚಿನ್ನದ ದರ ಏರುತ್ತಲೇ ಇರುವುದನ್ನು ನೋಡುತ್ತಿರುವ ಗ್ರಾಹಕರಿಗೆ ಬೇಸರ ತಂದಿದೆ. ಅಬಕಾರಿ ಸುಂಕ, ರಾಜ್ಯ ತೆರಿಗಳಗಳು ಮತ್ತು ಶುಲ್ಕ ವಿಧಿಸುವುದರಿಂದ ಚಿನ್ನದ ದರ ಬದಲಾಗುತ್ತದೆ. ಲೋಹದ ಬೇಡಿಕೆಯಲ್ಲಿ ಎರಡನೇ ಅತಿದೊಡ್ಡ ಗ್ರಾಹಕ ಸ್ಥಾನ ಭಾರತಕ್ಕಿದೆ.
ದೆಹಲಿಯಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 46,590 ರೂಪಾಯಿ ಇದೆ. ಚೆನ್ನೈನಲ್ಲಿ ಇಂದು ದರ 45,060 ರೂಪಾಯಿ ಹಾಗೂ ಮುಂಬೈನಲ್ಲಿ ದರ 45,200 ರೂಪಾಯಿ ಇದೆ. ಇನ್ನು, ಬೆಂಗಳೂರು ನಗರದಲ್ಲಿ ಚಿನ್ನದ ದರ ಎಷ್ಟಿದೆ ಎಂಬುದನ್ನು ಗಮನಿಸಿದಾಗ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,150 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,930 ರೂಪಾಯಿಗೆ ಏರಿಕೆಯಾಗಿದೆ. ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನದ ದರವನ್ನು ಗಮನಿಸಿದಾಗ ಸುಮಾರು 770 ರೂಪಾಯಿಯಷ್ಟು ಏರಿಕೆ ಕಂಡು ಬಂದಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ದರ 1ಗ್ರಾಂ ಚಿನ್ನದ ದರ ನಿನ್ನೆ 4,415 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ ಏರಿಕೆಯಿಂದ 4,485 ರೂಪಾಯಿಗೆ ಏರಿಕೆಯಾಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 35,320 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 35,880 ರೂಪಾಯಿಗೆ ಏರಿದೆ. 10 ಗ್ರಾಂ ಚಿನ್ನದ ದರ ನಿನ್ನೆ 44,150 ರೂಪಾಯಿಗೆ ಮಾರಾಟವಾಗಿದೆ. ಇಂದು 700 ರೂಪಾಯಿ ದರ ಏರಿಕೆಯಿಂದಾಗಿ 44,850 ರೂಪಾಯಿ ಆಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,41,500 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,48,500 ರೂಪಾಯಿ ಆಗಿದೆ.
24 ಕ್ಯಾರೆಟ್ ಚಿನ್ನದ ದರ ಮಾಹಿತಿ 1 ಗ್ರಾಂ ಚಿನ್ನದ ದರ 4,816 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ4,893 ರೂಪಾಯಿ ಆಗಿದೆ. 8 ಗ್ರಾಂ ಚಿನ್ನದ ದರ ನಿನ್ನೆ 38,528 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 39,144 ರೂಪಾಯಿಗೆ ಏರಿಕೆಯಾಗಿದೆ. 10 ಗ್ರಾಂ ಚಿನ್ನದ ದರ ನಿನ್ನೆ 48,160 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 48,930 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ನಿನ್ನೆ 4,81,600 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 4,89,300 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 7,700 ರೂಪಾಯಿ ಏರಿಕೆಯಾಗಿದೆ.
ಬೆಳ್ಳಿ ದರ ಮಾಹಿತಿ ದೈನಂದಿನ ದರ ಬದಲಾವಣೆಯಲ್ಲಿ ಬೆಳ್ಳಿ ದರವೂ ಕೊಂಚ ಏರಿಕೆಯಾಗಿದ್ದು, 1 ಗ್ರಾಂ ಬೆಳ್ಳಿ ದರ ನಿನ್ನೆ 68.80 ರೂಪಾಯಿ ಇತ್ತು. ಇಂದು ದರ 70.30 ರೂಪಾಯಿ ಏರಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 562 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 688 ರೂಯಿಗೆ ಮಾರಾಟವಾಗಿದ್ದು, ಇಂದು ದರ 703 ರೂಪಾಯಿಗೆ ಏರಿಕೆಯಾಗಿದೆ. 100 ಗ್ರಾಂ ಬೆಳ್ಳಿ ದರ ನಿನ್ನೆ 6,880 ರೂಪಾಯಿ ಆಗಿದ್ದು, ಇಂದು ದರ 7,030 ರೂಪಾಯಿಗೆ ಏರಿಕೆಯಾಗಿದೆ. 1ಕೆಜಿ ಬೆಳ್ಳಿ ದರ ಇಂದು 1,500 ರೂಪಾಯಿ ಏರಿಕೆಯ ನಂತರ 70,300 ರೂಪಾಯಿ ಆಗಿದೆ.
ಇದನ್ನೂ ಓದಿ; Gold Rate Today: ವಿವಿಧ ನಗರಗಳಲ್ಲಿ ಚಿನ್ನದ ದರ ಹೀಗಿದೆ; ಬೆಂಗಳೂರಿನಲ್ಲಿ ಚಿನ್ನದ ದರ ಎಷ್ಟಿದೆ ಗಮನಿಸಿ
(Gold Rate Today in Bangalore Mumbai and Delhi silver price on 2021 April 22)
Published On - 9:59 am, Thu, 22 April 21