Gold Rate Today: ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಹೆಚ್ಚಳದ ಸಾಧ್ಯತೆ; ಬೆಂಗಳೂರು ಸೇರಿ ವಿವಿಧ ನಗರದ ಚಿನ್ನ,ಬೆಳ್ಳಿ ದರ ಹೀಗಿದೆ!

Gold Rate Today: ಮುಂದಿನ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಹೆಚ್ಚಳದ ಸಾಧ್ಯತೆ; ಬೆಂಗಳೂರು ಸೇರಿ ವಿವಿಧ ನಗರದ ಚಿನ್ನ,ಬೆಳ್ಳಿ ದರ ಹೀಗಿದೆ!
ಸಾಂದರ್ಭಿಕ ಚಿತ್ರ

Gold Price Today: ಮುಂಬರುವ ದಿನಗಳಲ್ಲಿ ಇದೇ ರೀತಿ ಚಿನ್ನದ ದರ ಏರಿಕೆಯತ್ತ ಆಗುತ್ತದೆಯೋ? ಎಂಬ ಪ್ರಶ್ನೆ ಉದ್ಭವವಾಗುತ್ತಿದ್ದಂತೆಯೇ ತಜ್ಞರು ಗ್ರಾಹಕರಿಗೆ ಆಘಾತಕಾರಿ ವಿಷಯವೊಂದನ್ನು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

shruti hegde

|

Apr 19, 2021 | 8:04 AM

ಬೆಂಗಳೂರು: ದಿನ ಸಾಗುತ್ತಿದ್ದಂತೆ ಕೊರೊನಾ ಮಹಾಮಾರಿಯ ಆರ್ಭಟ ಹೆಚ್ಚುತ್ತಲೇ ಇದೆ. ದೇಶದ ಆರ್ಥಿಕ ಪ್ರಗತಿ ಕೂಡಾ ಕುಸಿಯುತ್ತಿದೆ.‌ ಕೊರೊನಾ ಸೋಂಕನ್ನು ಹೊಡೆದೋಡಿಸುವ ಪ್ರಯತ್ನದಲ್ಲಿ ದೇಶ ಹೋರಾಡುತ್ತಿದೆ. ಜೊತೆ ಜೊತೆಗೆ ಕುಗ್ಗಿ ಹೋದ ಆರ್ಥಿಕ ಪರಿಸ್ಥಿಯನ್ನೂ ಕೂಡಾ ಮೇಲೆತ್ತಬೇಕಾಗಿದೆ. ಇದು ಚಿನ್ನ ಮತ್ತು ಬೆಳ್ಳಿಯ ದರ ಏರಿಕೆಗೆ ಕಾರಣವಾಗಬಹುದು ಎಂಬುದು ಹಲವರ ಅಭಿಪ್ರಾಯ. ಅದರಂತೆಯೇ 2021ರ ಏಪ್ರಿಲ್ ತಿಂಗಳ ಪ್ರಾರಂಭದಿಂದಲೂ ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನದ ದರ ಗಮನಿಸಿದರೆ ಬೆಲೆ ಏರಿಕೆಯತ್ತ ಸಾಗುತ್ತಲೇ ಇದೆ. ಮದುವೆ- ಸಮಾರಂಭದಲ್ಲಿ ತೊಡಗಿಕೊಂಡವರಿಗೆ ದರ ಏರಿಕೆಯು ಹೆಗಲಿಗೆ ಕೊಂಚ ಭಾರ ಹೊತ್ತಂತಾಗಿದೆ.

ಇಂದು ಸೋಮವಾರವೂ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,160 ರೂಪಾಯಿ ಇದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,170 ರೂಪಾಯಿ ಆಗಿದೆ. ಅಂತೆಯೇ, 1 ಕೆಜಿ ಬೆಳ್ಳಿ ದರ 68,600 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ದರವನ್ನು ಗಮನಿಸಿದಾಗ 1 ಗ್ರಾಂ ಚಿನ್ನದ ದರ ನಿನ್ನೆ 44,150 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ ಗಮನಿಸಿದಾಗ ಕೊಂಚ ಏರಿಕೆಯಾಗಿದ್ದು, 44,160 ರೂಪಾಯಿ ಏರಿಕೆಯಾಗಿದೆ. ಹಾಗೆಯೇ 24 ಕ್ಯಾರೆಟ್ 10 ಗ್ರಾಂ ಚಿನ್ನ ದರವನ್ನು ಗಮನಿಸಿದಾಗ ನಿನ್ನೆ 48,160 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 48,170 ರೂಪಾಯಿ ಆಗಿದೆ. 1 ಕೆಜಿ ಬೆಳ್ಳಿ ದರ 68,600 ರೂಪಾಯಿ ಆಗಿದೆ.

ಹೈದರಾಬಾದ್​ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನ 44,160 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,170 ರೂಪಾಯಿ ಆಗಿದೆ. ವಿಜಯವಾಡದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,160 ರೂಪಾಯಿ ಇದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,170 ರೂಪಾಯಿ ಆಗಿದೆ.

ದೆಹಲಿ ಮಾರುಕಟ್ಟೆಯಲ್ಲಿ ಚಿನ್ನ ದರವನ್ನು ಪರಿಶೀಲಿಸಿದಾಗ 22 ಕ್ಯಾರೆಟ್ 10 ಗರಾಂ ಚಿನ್ನದ ದರ 46,270 ರೂಪಾಯಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,420 ರೂಪಾಯಿ ಇದೆ. ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 45,010 ರೂಪಾಯಿ ಹಾಗೂ 24 ಕ್ಯಾರೆಟ್ 10ಗ್ರಾಂ ಚಿನ್ನದ ದರ 46,010 ರೂಪಾಯಿ ಆಗಿದೆ. ಇನ್ನು, ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 44,530 ರೂಪಾಯಿ ಹಾಗೂ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 48,570 ರೂಪಾಯಿ ಆಗಿದೆ.

ಮುಂಬರುವ ದಿನಗಳಲ್ಲಿ ಇದೇ ರೀತಿ ಚಿನ್ನದ ದರ ಏರಿಕೆಯತ್ತ ಆಗುತ್ತದೆಯೋ? ಎಂಬ ಪ್ರಶ್ನೆ ಉದ್ಭವವಾಗುತ್ತಿದ್ದಂತೆಯೇ ತಜ್ಞರು ಗ್ರಾಹಕರಿಗೆ ಆಘಾತಕಾರಿ ವಿಷಯವೊಂದನ್ನು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ವಿಷಯ ತಜ್ಞ, ಸರಕು ಮತ್ತು ಸಂಶೋಧನೆಯ ಉಪಾಧ್ಯಕ್ಷ ಅನುಜ್ ಗುಪ್ತಾ ಹೇಳಿಕೆಯಂತೆ, ಕಳೆದ 3 ವಾರಗಳಲ್ಲಿ ಚಿನ್ನವು ಶೇಕಡಾ 5.40 ಕ್ಕಿಂತ ಹೆಚ್ಚಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದು 1,752 ಯುಎಸ್​ಡಿ ಮಟ್ಟ ಏರಿಕೆಯಾಗಿ 1,777 ಕ್ಕೆ ತಲುಪಿದೆ.

ಇನ್ನು, ಹಬ್ಬದ ದಿನಗಳು ಸರತಿ ಸಾಲಾಗಿ ಎದುರಿಗೆ ಬರುತ್ತಲೇ ಇದೆ. ಜೊತೆಗೆ ಇದು ಮೆದುವೆ-ಸಮಾರಂಭಗಳ ಸಮಯ. ಹಾಗಾಗಿ ಚಿನ್ನದ ಬೇಡಿಕೆಯು ಹೆಚ್ಚುತ್ತದೆ. ಭಾರತವು ಶೇಕಡಾ 471 ರಷ್ಟು ಹೆಚ್ಚು ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ಗುಪ್ತಾ ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದ ಚಿನ್ನ ಭಾರಿ ಬೇಡಿಕೆಯತ್ತ ಸಾಗುವ ನಿರೀಕ್ಷೆಯಲ್ಲಿದೆ ಎಂದು ವಿಶ್ಲೇಷಿಸಬಹುದು.

ಇದನ್ನೂ ಓದಿ: Gold Rate Today: ಶುಕ್ರವಾರದ ಚಿನ್ನ, ಬೆಳ್ಳಿ ದರ ಮಾಹಿತಿ.. ಬೆಂಗಳೂರಿನಲ್ಲಿ ಇಂದು ಮೌಲ್ಯ ಹೀಗಿದೆ!

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

( Gold Rate Today in Bangalore Hyderabad Chennai Mumbai and Delhi silver price on April 19th 2021)

Follow us on

Related Stories

Most Read Stories

Click on your DTH Provider to Add TV9 Kannada