ಮನೆಗೆ ಹೊರಟಿದ್ದ ಕೂಲಿ ಕಾರ್ಮಿಕರು ಮಸಣ ಸೇರಿದರು; ಲಾರಿ ಪಲ್ಟಿ, 6 ಮಂದಿ ಸಾವು

ಇವರೆಲ್ಲರೂ ಇಟ್ಟಿಗೆ ಭಟ್ಟಿಯಲ್ಲಿ‌ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು. ಕೆಲಸ ಮುಗಿದ‌ ನಂತರ ಲಾರಿಯಲ್ಲಿ‌ ಮನೆಗಳಿಗೆ ಹೊರಟಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆಗೆ ಹೊರಟಿದ್ದ ಕೂಲಿ ಕಾರ್ಮಿಕರು ಮಸಣ ಸೇರಿದರು; ಲಾರಿ ಪಲ್ಟಿ, 6 ಮಂದಿ ಸಾವು
ಪ್ರಾತಿನಿಧಿಕ ಚಿತ್ರ

ಹೈದರಾಬಾದ್​: ನಗರ ಸಮೀಪದ ಶಂಷಾಬಾದ್​ ಬಳಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, 15 ಮಂದಿಗೆ ಗಾಯಗಳಾಗಿವೆ. ಶಂಷಾಬಾದ್​ನಿಂದ ಷಾಬಾದ್​ ಕಡೆಗೆ ಹೊರಟಿದ್ದ ಇಟ್ಟಿಗೆ ಗೂಡಿನ ಕಾರ್ಮಿಕರಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು, ಉರುಳಿತು. ಲಾರಿಯಲ್ಲಿ 30ಕ್ಕೂ ಅಧಿಕ‌ ಕಾರ್ಮಿಕರಿದ್ದರು. ಇವರೆಲ್ಲರೂ ಇಟ್ಟಿಗೆ ಭಟ್ಟಿಯಲ್ಲಿ‌ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು. ಕೆಲಸ ಮುಗಿದ‌ ನಂತರ ಲಾರಿಯಲ್ಲಿ‌ ಮನೆಗಳಿಗೆ ಹೊರಟಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟಿಪ್ಪರ್-ಕಾರು ಮುಖಾಮುಖಿ ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಬೇಗೂರು ಸಮೀಪದ ಕಿತ್ತೂರು ರಾಣಿ ಚೆನ್ನಮ್ಮ ಶಾಲೆಯ ಮುಂಭಾಗ ಟಿಪ್ಪರ್ ಲಾರಿ ಮತ್ತು ಸ್ವಿಫ್ಟ್ ಕಾರು ಮುಖಾಮುಖಿಯಾಗಿದೆ. ಕಾರಿನಲ್ಲಿದ್ದ ಬೆಂಗಳೂರಿನ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರ ಸ್ಥಿತಿ ಚಿಂತಾಜನಕವಾಗಿದೆ. ಬೇಗೂರು ಠಾಣೆಯ ಪೊಲೀಸ್ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.

ಬಿಎಂಟಿಸಿ ಬಸ್​ ಮೇಲೆ ಕಲ್ಲೆಸೆತ ಬೆಂಗಳೂರು: ಬಿಎಂಟಿಸಿ ಬಸ್‌ ಮೇಲೆ ಕಿಡಿಗೇಡಿಗಳಿಂದ ಕಲ್ಲೆಸೆತ ನಡೆದ ಪ್ರಕರಣ ವಿಘ್ನೇಶ್ವರ ನಗರದಲ್ಲಿ ನಡೆದಿದೆ. ಬಸ್ ಚಾಲಕ ನಂಜುಂಡೇಗೌಡ ಗಾಯಗೊಂಡಿದ್ದಾರೆ. ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹೃದಯಾಘಾತದಿಂದ ಕೂಲಿ ಕಾರ್ಮಿಕ ಸಾವು ಗದಗ: ಜಿಲ್ಲೆಯಲ್ಲಿ ಭಾನುವಾರ ಕೂಲಿ ಕಾರ್ಮಿಕನೊಬ್ಬ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡುವಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಕೆಲಸ ಮಾಡುತ್ತಿದ್ದ ನಿಂಗಪ್ಪ ಯರಮಲ್ಲಪ್ಪ ಮೂಕಿ (35) ಮೃತರು. ನಿನ್ನೆ ತಾನೇ ಗದಗ ಜಿಲ್ಲೆ ರೋಣ ತಾಲೂಕಿನ ಇಟಗಿ ಗ್ರಾಮದ ಕೂಲಿ ಕಾರ್ಮಿಕರೊಬ್ಬರು ನಿನ್ನೆಯಷ್ಟೇ ಮೃತಪಟ್ಟಿದ್ದರು. ಗದಗ ಜಿಲ್ಲೆಯಲ್ಲಿ ಎರಡು ದಿನದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

(Lorry Car Accident at Shamshabad near Hyderabad)

ಇದನ್ನೂ ಓದಿ: ಚಿಕ್ಕಬಳ್ಳಾಪುರ, ರಾಯಚೂರಿನಲ್ಲಿ ಅಪಘಾತ: ನಾಲ್ವರ ಸಾವು

ಇದನ್ನೂ ಓದಿ: ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

Published On - 8:50 pm, Sun, 18 April 21

Click on your DTH Provider to Add TV9 Kannada