Petrol Diesel Price: ಏಪ್ರಿಲ್ 19ನೇ ತಾರೀಕು ಪೆಟ್ರೋಲ್, ಡೀಸೆಲ್ ಬೆಲೆ ಬದಲಾಗಿದೆಯೇ? ದರ ಮಾಹಿತಿ ಇಲ್ಲಿದೆ
Petrol Rate in Bengaluru: ಏಪ್ರಿಲ್ ತಿಂಗಳಿನಲ್ಲಿ ಮೊದಲ ಬಾರಿಗೆ ಕಳೆದ ಗುರುವಾರ ಕೊಂಚ ಇಳಿಕೆ ಕಂಡು ಬಂದಿತು. ಅದಾದ ನಂತರ ನಾಲ್ಕು ದಿನವಾದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಬೆಂಗಳೂರು: ಸತತ ನಾಲ್ಕು ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಕಡಿಮೆಯಾಗದೇ ಸ್ಥಿರವಾಗಿ ಉಳಿದಿದೆ. ಏಪ್ರಿಲ್ ತಿಂಗಳಿನ ಪ್ರಾರಂಭದಿಂದಲೂ ಪೆಟ್ರೋಲ್, ಡೀಸೆಲ್ ಬೆಲೆ ಕುಸಿತ ಕಂಡಿರಲಿಲ್ಲ. ಮೊದಲ ಬಾರಿಗೆ ಕಳೆದ ಗುರುವಾರ ಕೊಂಚ ಇಳಿಕೆ ಕಂಡು ಬಂದಿತು. ಅದಾದ ನಂತರ ನಾಲ್ಕು ದಿನವಾದರೂ ಯಾವುದೇ ಬದಲಾವಣೆ ಕಂಡು ಬಂದಿಲ್ಲ.
ಕಳೆದ ಮಾರ್ಚ್ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ದರ ಗಮನಿಸಿದಾಗ ಮೂರು ಬಾರಿ ದರವನ್ನು ಕಡಿತಗೊಳಿಸಲಾಗಿತ್ತು. ಕಚ್ಚಾ ತೈಲ ಇದೀಗ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ಗೆ 66 ಡಾಲರ್ನಷ್ಟು ದಾಟಿದೆ ಎಂಬ ಮಾಹಿತಿಗಳಿವೆ. ಬ್ಯಾರೆಲ್ಗೆ 71 ಡಾಲರ್ನಿಂದ 63 ಡಾಲರ್ಗೆ ಇಳಿದಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93 ರೂಪಾಯಿ 43 ಪೈಸೆ ಹಾಗೂ ಪ್ರತಿ ಲೀಟರ್ ಡೀಸೆಲ್ ದರ 85 ರೂಪಾಯಿ 60 ಪೈಸೆ ಇದೆ.
ನಾಲ್ಕು ದಿನಗಳಿಂದ ಸ್ಥಿರವಾಗಿ ಉಳಿದ ಇಂಧನ ದರ ಏಪ್ರಿಲ್ ತಿಂಗಳ ಮೊದಲು 15 ದಿನಗಳ ಕಾಲ ಪೆಟ್ರೋಲ್, ಡೀಸೆಲ್ ದರವನ್ನು ಬದಲಾವಣೆ ಮಾಡಿರಲಿಲ್ಲ. ಕಳೆದ ಗುರುವಾರ ಮೊದಲಬಾರಿಗೆ ಕಡಿತ ಕಂಡಿತು. ಅದಕ್ಕೂ ಮೊದಲು ಮಾರ್ಚ್ ತಿಂಗಳ ಕೊನೆಯ 30ನೇ ತಾರೀಕಿನಂದು ಕಡಿತಗೊಳಿಸಲಾಗಿತ್ತು. ಕಾರಣವೆಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ ಕಂಡಿರುವುದು. ಮೊದಲಿ ಸತತವಾಗಿ ಏರುತ್ತಲೇ ಇದ್ದ ಇಂಧನ ದರವನ್ನು ನೋಡುತ್ತಿದ್ದ ಗ್ರಾಹಕರು ಬೇಸತ್ತಿದ್ದರು. ಇದೀಗ ನಿಧಾನವಾಗಿ ಇಂಧನ ದರ ಇಳಿಕೆಯತ್ತ ಮುಖ ಮಾಡಿದೆ.
ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಪೆಟ್ರೋಲ್, ಡೀಸೆಲ್ ದರ 16 ಬಾರಿ ಏರಿಕೆ ಕಂಡಿತ್ತು. ದರ ಏರಿಕೆಯತ್ತ ಸಾಗಲು ಪ್ರಾರಂಭಿಸಿದರೆ ದಿನೇ ದಿನೇ ಏರುತ್ತದೆ, ಆದರೆ ಇಳಿಕೆ ಕಂಡುಬರುವಾಗ ಮಾತ್ರ ನಿಧಾನ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ. ಆದರೂ ಪೆಟ್ರೋಲ್, ಡೀಸೆಲ್ ದರ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿಯೇ ಇದೆ.
ವಿವಿಧ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಗಮನಿಸಿದಾಗ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90 ರೂಪಾಯಿ 40 ಪೈಸೆ ಇದೆ. ಮುಂಬೈನಲ್ಲಿ 96 ರೂಪಾಯಿ 83 ಪೈಸೆ, ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 90 ರೂಪಾಯಿ 62 ಪೈಸೆ ಹಾಗೂ ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 92 ರೂಪಾಯಿ 43 ಪೈಸೆ ಇದೆ.
ಅದೇ ರೀತಿ ಡೀಸೆಲ್ ದರವನ್ನು ಪರಿಶೀಲಿಸಿದಾಗ ದೆಹಲಿಯಲ್ಲಿ ಪ್ರತಿ ಲೀಟರ್ ಡೀಸೆಲ್ ದರ ದೆಹಲಿಯಲ್ಲಿ 80 ರೂಪಾಯಿ 73 ಪೈಸೆ, ಮುಂಬೈನಲ್ಲಿ 87 ರೂಪಾಯಿ 81 ಪೈಸೆ, ಕೋಲ್ಕತ್ತಾದಲ್ಲಿ 83 ರೂಪಾಯಿ 61 ಪೈಸೆ ಹಾಗೂ ಚೆನ್ನೈನಲ್ಲಿ 85 ರೂಪಾಯಿ 75 ಪೈಸೆ ಇದೆ.
ವಿವಿಧ ನಗರದ ಪೆಟ್ರೋಲ್ ದರ ಎಷ್ಟಿದೆ ಎಂಬ ಕುತೂಹಲವಿದ್ದರೆ ದರದ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ
https://tv9kannada.com/business/diesel-price-today.html
(Petrol Diesel Price Today in Delhi Bangalore Chennai Hyderabad Mumbai know the fuel rate in your city on 2021 April 19)