ಪಟಾಕಿ ಅಂಗಡಿಗೆ ಬೆಂಕಿ; ತಾತನ ಜೊತೆಗೆ ಇಬ್ಬರು ಮೊಮ್ಮಕ್ಕಳು ಸಜೀವ ದಹನ

ಬೆಂಕಿ ಹೊತ್ತಿಕೊಂಡಾಗ ಮಕ್ಕಳು ತಮ್ಮ ಅಜ್ಜನ ಜೊತೆಗೆ ಇದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಂಗಡಿಯನ್ನು ಬೆಂಕಿಯ ಕೆನ್ನಾಲಗೆ ಆವರಿಸಿಕೊಂಡಾಗ ಮೂವರೂ ಒಳಗೆ ಸಿಲುಕಿದ್ದರು.

ಪಟಾಕಿ ಅಂಗಡಿಗೆ ಬೆಂಕಿ; ತಾತನ ಜೊತೆಗೆ ಇಬ್ಬರು ಮೊಮ್ಮಕ್ಕಳು ಸಜೀವ ದಹನ
ಅಗ್ನಿ ಅವಘಡ (ಪ್ರಾತಿನಿಧಿಕ ಚಿತ್ರ)
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 18, 2021 | 9:58 PM

ಚೆನ್ನೈ: ವೆಲ್ಲೂರು ಜಿಲ್ಲೆಯ ಕಾಟ್ಪಾಡಿ ಬಳಿಯ ಲಾಥೆರಿಯ ಪಟಾಕಿ ಅಂಗಡಿಯಲ್ಲಿ ಇಂದು (ಏಪ್ರಿಲ್ 18) ಸಂಜೆ ಸಂಭವಿಸಿದ ಅಗ್ನಿ ದುರಂತದಲ್ಲಿ ಅಜ್ಜ ಮತ್ತು ಇಬ್ಬರು ಮೊಮ್ಮಕ್ಕಳು ಸಜೀವ ದಹನವಾಗಿದ್ದಾರೆ. ಮೃತರನ್ನು ಮೋಹನ್ (55) ಮತ್ತು ಅವರ ಮೊಮ್ಮಕ್ಕಳಾದ ತೇಜಸ್ (7) ಮತ್ತು ಧನುಷ್ (6) ಎಂದು ಗುರುತಿಸಲಾಗಿದೆ. ಪಟಾಕಿಗಳು ಮತ್ತು ದಿನಸಿ ಪದಾರ್ಥಗಳನ್ನು ಮಾರುವ ಅಂಗಡಿಯು ಲಾಥೆರಿ ಬಸ್ ನಿಲ್ದಾಣದ ಸಮೀಪ ಇತ್ತು. ಬೆಂಕಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಬೆಂಕಿ ಹೊತ್ತಿಕೊಂಡಾಗ ಮಕ್ಕಳು ತಮ್ಮ ಅಜ್ಜನ ಜೊತೆಗೆ ಇದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಅಂಗಡಿಯನ್ನು ಬೆಂಕಿಯ ಕೆನ್ನಾಲಗೆ ಆವರಿಸಿಕೊಂಡಾಗ ಮೂವರೂ ಒಳಗೆ ಸಿಲುಕಿದ್ದರು. ಅವಘಡದಲ್ಲಿ ಕಟ್ಟಡವು ಸಂಪೂರ್ಣ ನಾಶವಾಗಿದೆ.

ಅಗ್ನಿದುರಂತದ ವಿಷಯ ಗೊತ್ತಾದ ತಕ್ಷಣ ಕಾಟ್ಪಾಡಿ ಮತ್ತು ಗುಡಿಯಾತ್ತಮ್​ ಅಗ್ನಿಶಾಮಕ ಠಾಣೆಗಳಿಂದ ಅಗ್ನಿಶಾಮಕ ವಾಹನಗಳು ಲಾಥೆರಿಗೆ ಧಾವಿಸಿದವು. ಸುಟ್ಟು ಕರಕಲಾಗಿದ್ದ ದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಯಿತು.

ಸ್ಥಳಕ್ಕೆ ಭೇಟಿ ನೀಡಿದ ವೆಲ್ಲೂರು ಜಿಲ್ಲಾಧಿಕಾರಿ ಎ.ಷಣ್ಮುಗ ಸುಂದರಂ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಸೆಲ್ವಕುಮಾರ್ ಇತರ ಅಂಗಡಿಗಳಲ್ಲಿ ಕೈಗೊಂಡಿರುವ ಸುರಕ್ಷಾ ಕ್ರಮಗಳನ್ನು ಪರಿಶೀಲಿಸಿದರು. ಎಲ್ಲ ಪಟಾಕಿ ಅಂಗಡಿಗಳಲ್ಲಿಯೂ ಕಟ್ಟುನಿಟ್ಟಾಗಿ ಸುರಕ್ಷಾ ಕ್ರಮಗಳನ್ನು ಪಾಲಿಸಬೇಕು. ಭಾನುವಾರ ಪಟಾಕಿ ಮಾರುವಂತಿಲ್ಲ. ಪಟಾಕಿ ಅಂಗಡಿಗಳಲ್ಲಿ ಮಕ್ಕಳನ್ನು ಕೂರಿಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.

ಮನೆಗೆ ಹೊರಟಿದ್ದ ಕೂಲಿ ಕಾರ್ಮಿಕರು ಮಸಣ ಸೇರಿದರು; ಲಾರಿ ಪಲ್ಟಿ, 6 ಮಂದಿ ಸಾವು ಹೈದರಾಬಾದ್​: ನಗರ ಸಮೀಪದ ಶಂಷಾಬಾದ್​ ಬಳಿ ಭಾನುವಾರ ಸಂಜೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, 15 ಮಂದಿಗೆ ಗಾಯಗಳಾಗಿವೆ. ಶಂಷಾಬಾದ್​ನಿಂದ ಷಾಬಾದ್​ ಕಡೆಗೆ ಹೊರಟಿದ್ದ ಇಟ್ಟಿಗೆ ಗೂಡಿನ ಕಾರ್ಮಿಕರಿದ್ದ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದು, ಉರುಳಿತು. ಲಾರಿಯಲ್ಲಿ 30ಕ್ಕೂ ಅಧಿಕ‌ ಕಾರ್ಮಿಕರಿದ್ದರು. ಇವರೆಲ್ಲರೂ ಇಟ್ಟಿಗೆ ಭಟ್ಟಿಯಲ್ಲಿ‌ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರು. ಕೆಲಸ ಮುಗಿದ‌ ನಂತರ ಲಾರಿಯಲ್ಲಿ‌ ಮನೆಗಳಿಗೆ ಹೊರಟಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

(Three killed in fire accident at cracker shop near Vellore in Tamil Nadu)

ಇದನ್ನೂ ಓದಿ: Covid-19 Karnataka Update: ಕರ್ನಾಟಕದಲ್ಲಿ 19,067 ಜನರಿಗೆ ಕೊರೊನಾ ದೃಢ, 81 ಸಾವು

Published On - 9:57 pm, Sun, 18 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ