Petrol Diesel Price: ಪಂಚರಾಜ್ಯಗಳ ಚುನಾವಣೆ ನಂತರ ಪೆಟ್ರೋಲ್ ದರ ಏರಿಕೆ ಮಾತು.. ದರ ಹೆಚ್ಚಳವಾಗದಂತೆ ಗ್ರಾಹಕರ ಪ್ರಾರ್ಥನೆ
Petrol Diesel Rate in Bangalore: ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಗ್ರಾಹಕರು ಆಕ್ರೋಶ ಹೊರಹಾಕಿದ್ದರು. ಮಾರ್ಚ್ ತಿಂಗಳ ಪ್ರಾರಂಭದಿಂದ ದರ ಸ್ಥಿರವಾಗಿರುವುದನ್ನು ಕಂಡು ಕೊಂಚ ನಿರಾಳರಾಗಿದ್ದರು. ಆದರೆ ಚುನಾವಣೆಯ ನಂತರದಲ್ಲಿ ಇಂಧನ ದರ ಏರಿಕೆ ಕಾಣಬಹುದು ಎಂಬ ಮಾತುಗಳಿಂದ ಜನ ಧಂಗಾಗಿದ್ದಾರೆ.
ಬೆಂಗಳೂರು: ಭಾರತದಲ್ಲಿ ಪಂಚರಾಜ್ಯ ಚುನಾವಣೆಯ ಕಾರಣದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುತ್ತಿಲ್ಲ. ಮಾರ್ಚ್ ತಿಂಗಳ ಪ್ರಾರಂಭದಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿಲ್ಲ. ಫೆಬ್ರವರಿ ಕೊನೆಯ ಶನಿವಾರ ಅಂದರೆ 27ನೇ ತಾರೀಕಿನಂದು ಇಂಧನ ದರ ಏರಿಕೆಯ ನಂತರದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡಿಲ್ಲ.
ಕಳೆದ ತಿಂಗಳ ಕೊನೆಯ ಶನಿವಾರ ಪೆಟ್ರೋಲ್ ಪ್ರತಿ ಲೀಟರಿಗೆ 24 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 15 ಪೈಸೆ ಏರಿಕೆಯ ನಂತರ ದರ ವ್ಯತ್ಯಾಸವಾಗಲಿಲ್ಲ. ಮಂಗಳವಾರದ ಇಂಧನ ಪರಿಶೀಲನೆಯ ಪ್ರಕಾರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 91.17 ರೂಪಾಯಿಗೆ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 97.57 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ. ಕಳೆದ 23 ದಿನಗಳ ಕಾಲ ಅಂದರೆ 4 ವಾರಗಳಲ್ಲಿ ಇಂಧನ ದರ ವ್ಯತ್ಯಾಸವನ್ನು ಕಂಡಿಲ್ಲ.
ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಗ್ರಾಹಕರು ಆಕ್ರೋಶ ಹೊರಹಾಕಿದ್ದರು. ಮಾರ್ಚ್ ತಿಂಗಳ ಪ್ರಾರಂಭದಿಂದ ದರ ಸ್ಥಿರವಾಗಿರುವುದನ್ನು ಕಂಡು ಕೊಂಚ ನಿರಾಳರಾಗಿದ್ದರು. ಆದರೆ ಚುನಾವಣೆಯ ನಂತರದಲ್ಲಿ ಇಂಧನ ದರ ಏರಿಕೆ ಕಾಣಬಹುದು ಎಂಬ ಮಾತುಗಳಿಂದ ಜನ ಧಂಗಾಗಿದ್ದಾರೆ.
ಪೆಟ್ರೋಲ್ ದರ ಇಳಿಕೆಯಲ್ಲಿ ನಮ್ಮಷ್ಟೇ ಪಾಲು ರಾಜ್ಯ ಸರ್ಕಾರಗಳಿಗೂ ಇವೆ. ಪೆಟ್ರೋಲ್, ಡೀಸೆಲ್ ದರ ಇಳಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಕೆಲಸ ನಿರ್ವಹಿಸಬೇಕಿದೆ .ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ತೆರಿಗೆ ವಿಧಿಸುತ್ತದೆ. ಕೇವಲ ಸರ್ಕಾರ ಮಾತ್ರವಲ್ಲ ರಾಜ್ಯ ಸರ್ಕಾರ ಕೂಡ ತೆರಿಗೆ ಇಳಿಸಬೇಕು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ಅವರು ಹೇಳಿದ್ದರು.
ಶ್ರೀ ಗಂಗಾನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.84 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 93.77 ರೂಪಾಯಿಗೆ ಮಾರಾಟವಾಗುತ್ತಿದೆ. ಅನುಪ್ಪುರ್ದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 101.59 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 91.97 ರೂಪಾಯಿಗೆ ಮಾರಾಟವಾಗುತ್ತಿದೆ. ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 91.17 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ 81.47 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು, ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 97.57 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 88.60 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 91.35 ರೂಪಾಯಿ ಹಾಗೂ ಡೀಸೆಲ್ 84.35 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 93.11 ರೂಪಾಯಿ ಹಾಗೂ ಡೀಸೆಲ್ 86.45 ರೂಪಾಯಿಗೆ ಮಾರಾಟವಾಗುತ್ತಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.22 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಹೈದ್ರಾಬಾದ್ನಲ್ಲಿ ಪ್ರತಿ ಲೀಟರ್ ಪೆಟ್ರೋಲ್ 94.70 ರೂಪಾಯಿಗೆ ಹಾಗೂ ಡೀಸೆಲ್ 88.86 ರೂಪಾಯಿ ಇದೆ. ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 93.48 ರೂಪಾಯಿಗೆ ಕಳೆದ ತಿಂಗಳು ಏರಿಕೆಯಾಗಿದ್ದು ಅದೇ ದರದಲ್ಲಿ ಮಾರಾಟವಾಗುತ್ತಿದೆ. ಹಾಗೆಯೇ ಡೀಸೆಲ್ ದರ 86.73 ರೂಪಾಯಿ ಇದ್ದು, ದರ ವ್ಯತ್ಯಾಸ ಕಾಣದೇ ಅದೇ ದರದಲ್ಲಿ ಗ್ರಾಹಕರು ಕೊಳ್ಳುತ್ತಿದ್ದಾರೆ. ಲಕ್ನೋದಲ್ಲಿ ಪ್ರತಿ ಲೀಟರ್ ಪೆಟ್ರೋಲ್ 89.31 ರೂಪಾಯಿ ಹಾಗೂ ಡೀಸೆಲ್ ಪ್ರತಿ ಲೀಟರಿಗೆ 81.85 ರೂಪಾಯಿಗೆ ಮಾರಾಟವಾಗುತ್ತಿದೆ.
ಇಂಧನ ದರ ಏರಿಕೆ ಕಾಣುತ್ತಲೇ ಇದ್ದುದನ್ನು ಕಂಡ ಗ್ರಾಹಕರ ಕೆಂಗಣ್ಣು ಸರ್ಕಾರದ ಮೇಲೆ ಬಿದ್ದಿತ್ತು. ಪೆಟ್ರೋಲ್, ಡೀಸೆಲ್ ದರ ಏರಿಕೆಯಿಂದ ಬೇಡಿಕೆಯಲ್ಲಿಯೂ ಕುಸಿತ ಕಂಡು ಬಂದಿತ್ತು. ಅದೆಷ್ಟೋ ಪ್ರತಿಭಟನೆಗಳು, ಧರಣಿಗಳು ನಡೆದಿದ್ದವು. ಆದರೆ ಇಂಧನ ದರ ಏರಿಕೆಯತ್ತ ಸಾಗುತ್ತಲೇ ಇತ್ತು. ಇದೀಗ ಒಂದು ತಿಂಗಳಿಂದ ಸ್ಥಿರತೆಯಲ್ಲಿರುವ ದರವನ್ನು ಗಮನಿಸಿದ ಗ್ರಾಹಕರು ನಿರಾಳರಾಗಿದ್ದಾರೆ. ಚುನಾವಣೆ ನಂತರ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಾಣುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಇಂಧನ ದರ ಏರಿಕೆ ಕಾಣುವುದು ಬೇಡ ಎಂಬ ಅಭಿಪ್ರಾಯ ಹೊರಹಾಕುತ್ತಿದ್ದಾರೆ.
ಪೆಟ್ರೋಲ್ ದರ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ವ್ಯತ್ಯಾಸವಿರುತ್ತದೆ. ಹಾಗಿದ್ದಾಗ ಯಾವ ಯಾವ ದೇಶಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಕ್ಕೆ ಮಾರಾಟವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಬಯಸಿದ್ದೀರಿ ಎಂದಾದರೆ ಇಲ್ಲಿದೆ ವಿವರ.
ವಿವಿಧ ನಗರದ ಪೆಟ್ರೋಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ:
https://tv9kannada.com/business/diesel-price-today.html
Published On - 8:48 am, Tue, 23 March 21