AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gwalior Accident: ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಆಟೊ ರಿಕ್ಷಾ-ಬಸ್ ಮುಖಾಮುಖಿ ಡಿಕ್ಕಿ ; 13 ಸಾವು

Madhya Pradesh Road Accident: ಕಾರ್ಯಕ್ರಮವೊಂದಕ್ಕೆ ಅಡುಗೆ ಮಾಡಲು ಹೋಗುತ್ತಿದ್ದ 13 ಮಹಿಳೆಯರು ಆಟೊ ರಿಕ್ಷಾದಲ್ಲಿದ್ದರು. ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಬಸ್, ರಿಕ್ಷಾಗೆ ಡಿಕ್ಕಿ ಹೊಡೆದಿದ್ದು 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Gwalior Accident: ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ಆಟೊ ರಿಕ್ಷಾ-ಬಸ್ ಮುಖಾಮುಖಿ ಡಿಕ್ಕಿ ; 13 ಸಾವು
ಗ್ವಾಲಿಯರ್​ನಲ್ಲಿ ರಸ್ತೆ ಅಪಘಾತ
ರಶ್ಮಿ ಕಲ್ಲಕಟ್ಟ
|

Updated on:Mar 23, 2021 | 10:57 AM

Share

ಗ್ವಾಲಿಯರ್: ಮಧ್ಯಪ್ರದೇಶ ಗ್ವಾಲಿಯರ್​ನಲ್ಲಿ ಆಟೋ ರಿಕ್ಷಾ ಮತ್ತು ಬಸ್ ಮುಖಾಮುಖಿ ಡಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದವರಲ್ಲಿ 11 ಮಂದಿ ಮಹಿಳೆಯರು ಎಂದು ಪೊಲೀಸರು ಹೇಳಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಸಿಟಿ ಪೊಲೀಸ್ ಸುಪರಿಟೆಂಡೆಂಟ್ (CSP) ರವಿ ಭದೋರಿಯಾ, 9 ಮಹಿಳೆಯರು ಮತ್ತು ಆಟೊ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಾರ್ಯಕ್ರಮವೊಂದಕ್ಕೆ ಅಡುಗೆ ಮಾಡಲು ಹೋಗುತ್ತಿದ್ದ 13 ಮಹಿಳೆಯರು ಆಟೊ ರಿಕ್ಷಾದಲ್ಲಿದ್ದರು. ವಿರುದ್ಧ ದಿಕ್ಕಿನಿಂದ  ವೇಗವಾಗಿ ಬಂದ ಬಸ್ ರಿಕ್ಷಾಗೆ ಡಿಕ್ಕಿ ಹೊಡೆದಿದೆ ಎಂದು ಭದೊರಿಯಾ ಹೇಳಿದ್ದಾರೆ. ಮೃತ ವ್ಯಕ್ತಿಗಳನ್ನು ಗುರುತಿಸುವ ಕಾರ್ಯವನ್ನು ಪೊಲೀಸ್ ಮಾಡುತ್ತಿದ್ದಾರೆ.

ಅಪಘಾತದಲ್ಲಿ ಸಾವಿಗೀಡಾದ ವ್ಯಕ್ತಿಗಳಿಗೆ ಸಂತಾಪ ಸೂಚಿಸಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮೃತರ ಕುಟುಂಬದವರು ಏಕಾಂಗಿ ಎಂಬ ಭಾವನೆ ಬೇಡ. ಮೃತರ ಕುಟುಂಬದವರಿಗೆ ₹4 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ಪರಿಹಾರ ನೀಡುವುದಾಗಿ ಟ್ವೀಟ್ ಮಾಡಿದ್ದಾರೆ.

ಗ್ವಾಲಿಯರ್​ನಲ್ಲಿ ಬಸ್ ಮತ್ತು ಆಟೊ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಹಲವಾರು ಜನರು ಸಾವಿಗೀಡಾಗಿರುವುದು ದುಃಖವನ್ನುಂಟು ಮಾಡಿದೆ. ಭಗವಂತ ಮೃತರ ಆತ್ಮಕ್ಕೆ ಶಾಂತಿ ನೀಡಲಿ , ಮೃತರ ಕುಟುಂಬದವರಿಗೆ ಈ ನೋವನ್ನು ಸಹಿಸುವ ಶಕ್ತಿ ಸಿಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು  ಚೌಹಾಣ್ ಟ್ವೀಟ್ ಮಾಡಿದ್ದಾರೆ.

ಕಳೆದ ವಾರ ಮಧ್ಯಪ್ರದೇಶದ ಮಾಂಡಲಾ ಜಿಲ್ಲೆಯಲ್ಲಿ ಮಿನಿ-ಟ್ರಕ್ ಮಗಚಿ ಬಿದ್ದು 5ಮಂದಿ ಮೃತಪಟ್ಟಿದ್ದರು. 46 ಮಂದಿಗೆ ಗಾಯಗಳಾಗಿತ್ತು. ಇಲ್ಲಿವ ಪೊಟ್ಲಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿತ್ತು. ಮದುವೆ ಕಾರ್ಯಕ್ರಮ ಮುಗಿಸಿ ಚಂದೇರಾದಿಂದ ದೇವ್ ದೊಂಗ್ರಿ ಗ್ರಾಮಕ್ಕೆ ಮರುಳುತ್ತಿದ್ದ ವೇಳೆ ಅಪಘಾತ ಸಂಭವಿಸಿದ್ದು ಇಬ್ಬರು ಮಹಿಳೆಯರು ಮತ್ತು ಮೂವರು ಪುರುಷರು ಮೃತಪಟ್ಟಿದ್ದರು.

ಇದನ್ನೂ ಓದಿ: ಚಿತ್ರದುರ್ಗ: ಜವನಗೊಂಡನಹಳ್ಳಿ ಬಳಿ ಸರಣಿ ಅಪಘಾತ, ದಂಪತಿ ಸೇರಿ ಮೂವರ ಸಾವು

Published On - 10:44 am, Tue, 23 March 21