ಎಲಾನ್ ಮಸ್ಕ್ ಕೋರಿಕೆಯಂತೆ ಎಲೆಕ್ಟ್ರಿಕ್ ಕಾರು ಅಮದು ಮೇಲಿನ ದುಬಾರಿ ಸುಂಕ ಇಳಿಕೆಗೆ ಕೇಂದ್ರದ ಮನಸ್ಸು ಮುಕ್ತ ಮುಕ್ತ! ಏನಿದರ ಒಳ ಲೆಕ್ಕಾಚಾರ?

Elon Musk: ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾ ಸಿಇಓ ಎಲಾನ್ ಮಸ್ಕ್ ಕಳೆದ ವಾರ ಎಲೆಕ್ಟ್ರಿಕ್ ಕಾರ್ ಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳಲು ಅಮದು ಸುಂಕ ಇಳಿಸಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಈಗ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಟೆಸ್ಲಾ ಕಂಪನಿಯು ಭಾರತದಲ್ಲೇ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಮಾಡಿದರೇ, ಅಮದು ಸುಂಕ ಇಳಿಕೆಯನ್ನು ಪರಿಗಣಿಸುತ್ತೇವೆ, ಜೊತೆಗೆ ಬೇರೆ ಬೇರೆ ಪೋತ್ಸಾಹ ಧನಗಳನ್ನು ಟೆಸ್ಲಾ ಕಂಪನಿ ಸೇರಿದಂತೆ ಎಲ್ಲ ಎಲೆಕ್ಟ್ರಿಕ್ ಕಾರ್ ಕಂಪನಿಗಳಿಗೆ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಎಲಾನ್ ಮಸ್ಕ್ ಕೋರಿಕೆಯಂತೆ ಎಲೆಕ್ಟ್ರಿಕ್ ಕಾರು ಅಮದು ಮೇಲಿನ ದುಬಾರಿ ಸುಂಕ ಇಳಿಕೆಗೆ ಕೇಂದ್ರದ ಮನಸ್ಸು ಮುಕ್ತ ಮುಕ್ತ! ಏನಿದರ ಒಳ ಲೆಕ್ಕಾಚಾರ?
ಎಲಾನ್ ಮಸ್ಕ್ ಕೋರಿಕೆಯಂತೆ ಎಲೆಕ್ಟ್ರಿಕ್ ಕಾರು ಅಮದು ಮೇಲಿನ ದುಬಾರಿ ಸುಂಕ ಇಳಿಕೆಗೆ ಕೇಂದ್ರದ ಮನಸ್ಸು ಮುಕ್ತ ಮುಕ್ತ! ಏನಿದರ ಒಳ ಲೆಕ್ಕಾಚಾರ?
Follow us
S Chandramohan
| Updated By: ಸಾಧು ಶ್ರೀನಾಥ್​

Updated on: Jul 27, 2021 | 2:59 PM

ಎಲೆಕ್ಟ್ರಿಕ್ ಕಾರ್ ಕಂಪನಿಯಾದ ಟೆಸ್ಲಾ ಸಿಇಓ ಎಲಾನ್ ಮಸ್ಕ್ (Elon Musk) ಕಳೆದ ವಾರ ಎಲೆಕ್ಟ್ರಿಕ್ ಕಾರ್ ಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳಲು ಅಮದು ಸುಂಕ ಇಳಿಸಬೇಕೆಂದು ಮನವಿ ಮಾಡಿದ್ದರು. ಈ ಮನವಿಗೆ ಈಗ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಟೆಸ್ಲಾ ಕಂಪನಿಯು ಭಾರತದಲ್ಲೇ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಮಾಡಿದರೇ, ಅಮದು ಸುಂಕ ಇಳಿಕೆಯನ್ನು ಪರಿಗಣಿಸುತ್ತೇವೆ, ಜೊತೆಗೆ ಬೇರೆ ಬೇರೆ ಪೋತ್ಸಾಹ ಧನಗಳನ್ನು ಟೆಸ್ಲಾ ಕಂಪನಿ ಸೇರಿದಂತೆ ಎಲ್ಲ ಎಲೆಕ್ಟ್ರಿಕ್ ಕಾರ್ ಕಂಪನಿಗಳಿಗೆ ನೀಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕಾರ್ ಅಮದಿನ ದುಬಾರಿ ಸುಂಕ ಇಳಿಕೆಗೆ ಮುಕ್ತ ಮನಸ್ಸು

ಕಾರ್, ಕಾರ್ ಎಲ್ನೋಡಿ ಕಾರ್ ಅಂತ ನನ್ನ ಪ್ರೀತಿಯ ಹುಡುಗಿ ಸಿನಿಮಾದಲ್ಲಿ ಹಾಡಿದ್ದನ್ನು ನಾವು ಕೇಳಿದ್ದೇವೆ. ನೋಡಿದ್ದೇವೆ. 90ರ ದಶಕದಲ್ಲಿ ಆಮೆರಿಕಾದ ಸ್ಥಿತಿಯನ್ನು ಭಾರತದ ಸ್ಥಿತಿಗೆ ಹೋಲಿಸಿ ಬರೆದ ಹಾಡು ಅದು. ಆಮೆರಿಕಾದಲ್ಲಿ ಜನರು ಕಾರ್ ನಲ್ಲಿ ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ತ್ರಿವೇನಲ್ಲಿ ಹಾರಿಕೊಂಡು ಎಕ್ಸಿಟ್ ನಲ್ಲಿ ಜಾರಿಹೋಗ್ತಾರೋ ಅಂತ ನಾಯಕ ನಟಿ ಹಾಡಿದರೇ, ಅದಕ್ಕೆ ಪ್ರತಿಯಾಗಿ ನಾಯಕ ಭಾರತದ ಸ್ಥಿತಿಯನ್ನು ವರ್ಣಿಸಿದ್ದ. ನಮ್ಮೂರಿನಲ್ಲಿ ಹಂಗೇನಿಲ್ಲ, ಟ್ರಾಕ್ಟರ್, ಲಾರಿ, ಎತ್ತಿನಗಾಡಿ ಏನೇ ಬಂದರೂ ಹತ್ತಿಕೊಂಡು ಹೋಗ್ತಾರೋ ಅಂತ ನಾಯಕ ನಟ ಹಾಡಿದ್ದ.

ಈ ಹಾಡಿಗೆ ನಾಯಕ ನಟ, ನಟಿ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡು ಸಖತ್ ಫೇಮಸ್ಸು ಕೂಡ ಆಗಿತ್ತು. ಆದರೆ, ಈಗ ಭಾರತದಲ್ಲೂ ಕಾರ್ ಕಾರ್ ಎಲ್ನೋಡಿ ಕಾರ್ ಎನ್ನುವಂತಾಗಿದೆ. ದೆಹಲಿ, ಮುಂಬೈ, ಬೆಂಗಳೂರಿನಂಥ ನಗರಗಳಲ್ಲಿ ರಸ್ತೆಗಳಲ್ಲಿ ಕಾರ್ ಪಾರ್ಕಿಂಗ್‌ಗೆ ಜಾಗ ಸಿಗುತ್ತಿಲ್ಲ. ಎಲ್ಲೆಲ್ಲೂ ಕಾರ್ ಗಳದ್ದೇ ದರ್ಬಾರ್. ಕಾರ್ ಗಳು ಈಗ ಜೀವನದಲ್ಲಿ ಐಷಾರಾಮಿ ವಸ್ತುಗಳಲ್ಲ. ಕಾರ್, ಜೀವನದ ಅವಶ್ಯಕ ಸಾಮಗ್ರಿ. ಹೀಗಾಗಿ ಮಧ್ಯಮ ವರ್ಗ, ಕೆಳ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ ಖರೀದಿ ಮಾಡುತ್ತಿದ್ದಾರೆ.

ಹೊಸ ಕಾರ್ ಖರೀದಿ ಮಾಡಲಾಗದಿದ್ದರೇನಂತೆ, ಸೆಕೆಂಡ್ ಹ್ಯಾಂಡ್ ಕಾರ್ ಗಳನ್ನಾದರೂ ಖರೀದಿ ಮಾಡಬೇಕೆಂದು ಜನರು ಬಯಸುತ್ತಿದ್ದಾರೆ. ಇದು ತಪ್ಪಲ್ಲ. ಆದರೆ, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಗಗನಕ್ಕೇರಿದೆ. ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಪೆಟ್ರೋಲ್ ಬೆಲೆ ಪ್ರತಿ ಲೀಟರ್ 105ರೂಪಾಯಿ ಗಡಿಯನ್ನು ದಾಟಿದೆ. ದುಬಾರಿ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡು ಕಾರ್ ಓಡಿಸುವುದು ವಾಹನ ಸವಾರರಿಗೆ ಬಾರಿ ಹೊರೆ ಆಗಿದೆ. ಹೀಗಾಗಿ ದೇಶದ ಜನರು ಅಗ್ಗದ ಎಲೆಕ್ಟ್ರಿಕ್ ಕಾರ್ ಗಳತ್ತ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಆಮೆರಿಕಾದ ಎಲಾನ್ ಮಸ್ಕ್ ಅವರ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರ್ ಗಳು ಭಾರತದ ಮಾರುಕಟ್ಟೆಗೆ ಬಂದರೇ, ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಪೈಪೋಟಿ ಸೃಷ್ಟಿಯಾಗುತ್ತೆ. ಗ್ರಾಹಕರಿಗೆ ಉತ್ತಮ ದರ್ಜೆ, ಉತ್ತಮ ಗುಣಮಟ್ಟದ ಎಲೆಕ್ಟ್ರಿಕ್ ಕಾರ್ ಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಸಿಗುತ್ತಾವೆ. ಒಮ್ಮೆ ಚಾರ್ಜ್ ಮಾಡಿದರೇ, ಕನಿಷ್ಠ 500 ಕಿಲೋಮೀಟರ್ ದೂರದವರೆಗೂ ಹೋಗುವ ಎಲೆಕ್ಟ್ರಿಕ್ ಕಾರ್ ಗಳನ್ನು ಜನರು ಈಗ ಬಯಸುತ್ತಿದ್ದಾರೆ.

ಎಲಾನ್ ಮಸ್ಕ್ ಗೆ ಇರುವ ಸಮಸ್ಯೆಗಳೇನು ಗೊತ್ತಾ? ಎಲೆಕ್ಟ್ರಿಕ್ ಕಾರ್ ಗಳ ಪೈಕಿ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರ್ ಗಳ ಸಖತ್ ಫೇಮಸ್ಸು. ಭಾರತಕ್ಕೆ ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರ್ ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಕಳೆದ ವಾರ ಟ್ವಿಟರ್ ನಲ್ಲಿ ಉತ್ತರಿಸಿದ್ದ ಎಲಾನ್ ಮಸ್ಕ್ , ಭಾರತದಲ್ಲಿ ಸದ್ಯ ಕಾರ್ ಗಳ ಅಮದಿನ ಮೇಲೆ ವಿಶ್ವದಲ್ಲೇ ಅತಿ ಹೆಚ್ಚಿನ ತೆರಿಗೆ ವಿಧಿಸಲಾಗುತ್ತಿದೆ. ಕನಿಷ್ಠ ತಾತ್ಕಾಲಿಕವಾಗಿಯಾದರೂ, ಎಲೆಕ್ಟ್ರಿಕ್ ಕಾರ್ ಅಮದಿಗೆ ಅಮದು ಸುಂಕದಿಂದ ವಿನಾಯಿತಿ ನೀಡಬೇಕೆಂದು ಸರ್ಕಾರವನ್ನು ಕೇಳಿದ್ದೇವೆ, ಆ ಭರವಸೆಯಲ್ಲಿ ನಾವಿದ್ದೇವೆ ಎಂದಿದ್ದರು.

ಸದ್ಯ ಭಾರತದಲ್ಲಿ ವಿದೇಶದಿಂದ ಕಾರ್ ಗಳನ್ನು ಭಾರತಕ್ಕೆ ಅಮದು ಮಾಡಿಕೊಳ್ಳುವುದಕ್ಕೆ ಶೇ.100 ರಷ್ಟು ಅಮದು ಸುಂಕ ವಿಧಿಸಲಾಗುತ್ತೆ. ಕಾರಿನ ವೆಚ್ಚ, ಇನ್ಸೂರೆನ್ಸ್, ಸಾಗಣೆಯ ವೆಚ್ಚವೇ 40 ಸಾವಿರ ಡಾಲರ್ ಗಳಿಗಿಂತ ಹೆಚ್ಚಾಗುತ್ತೆ. ಅಂದರೇ, 30 ಲಕ್ಷ ರೂಪಾಯಿಗಳಿಗಿಂತ ಹೆಚ್ಚಾಗುತ್ತೆ. ಕ್ಲೀನ್ ಎನರ್ಜಿ ವಾಹನಗಳನ್ನು ಪೆಟ್ರೋಲ್, ಡೀಸೆಲ್ ವಾಹನಗಳ ರೀತಿಯಲ್ಲೇ ಅಮದು ಮಾಡಿಕೊಳ್ಳುವಾಗ ಪರಿಗಣಿಸಲಾಗುತ್ತೆ.

ಇದು ಭಾರತದ ಮಾಲಿನ್ಯ ತಡೆಗಟ್ಟುವ ನೀತಿಗೆ ತಕ್ಕಂತೆ ಇಲ್ಲ. ಆದರೆ, ಎಲೆಕ್ಟ್ರಿಕ್ ವಾಹನಗಳಿಗೆ ತಾತ್ಕಾಲಿಕವಾಗಿ ಅಮದು ತೆರಿಗೆಯಿಂದ ವಿನಾಯಿತಿ ನೀಡುವ ಭರವಸೆ ಇಟ್ಟುಕೊಂಡಿದ್ದೇವೆ. ಒಂದು ವೇಳೆ ಭರವಸೆಯಂತೆ ನಡೆದರೇ, ಶ್ಲಾಘನೀಯ ಎಂದು ಎಲಾನ್ ಮಸ್ಕ್ ಹೇಳಿದ್ದರು. ಈಗ ಎಲಾನ್ ಮಸ್ಕ್ ಮನವಿಗೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಕಾರ್ ಅಮದು ಸುಂಕ ಇಳಿಕೆಗೆ ಮುಕ್ತ ಮನಸ್ಸು; ಎಲಾನ್ ಮಸ್ಕ್ ಸಮಸ್ಯೆಗೆ ಕೇಂದ್ರದ ಸ್ಪಂದನೆ

ಕೇಂದ್ರ ಸರ್ಕಾರವು ಕಾರ್ ಗಳ ಅಮದು ಸುಂಕ ಇಳಿಕೆಗೆ ಮುಕ್ತ ಮನಸ್ಸು ಹೊಂದಿದೆ. ಟೆಸ್ಲಾ ಕಂಪನಿಯು ಭಾರತದಲ್ಲೇ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಮಾಡಲು ಬಯಸಿದರೇ, ಬೇರೆ ಬೇರೆ ಪೋತ್ಸಾಹಧನಗಳನ್ನು ನೀಡುತ್ತೇವೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಟೆಸ್ಲಾ ಕಂಪನಿ ಕಾರ್ ಅಮದು ಸುಂಕ ಇಳಿಕೆಗೆ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಈ ಪ್ರತಿಕ್ರಿಯೆ ನೀಡಿದೆ.

ಟೆಸ್ಲಾ ಕಂಪನಿಯು ಭಾರತದಲ್ಲೇ ತನ್ನ ಎಲೆಕ್ಟ್ರಿಕ್ ಕಾರ್ ಉತ್ಪಾದನಾ ಘಟಕ ಆರಂಭಿಸಿದರೇ, ಟೆಸ್ಲಾ ಮನವಿ, ಬೇಡಿಕೆಗಳನ್ನು ಪರಿಗಣಿಸಲು ಮುಕ್ತ ಮನಸ್ಸು ಹೊಂದಿದ್ದೇವೆ. ವಲಯ ಆಧಾರಿತ ತೀರ್ಮಾನವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ. ಯಾವುದೇ ಒಂದು ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡಲು ತೀರ್ಮಾನ ಕೈಗೊಳ್ಳಲ್ಲ. ಎಲೆಕ್ಟ್ರಿಕ್ ವಾಹನ, ಕ್ಲೀನ್ ಎನರ್ಜಿಗೆ ಪೋತ್ಸಾಹ ನೀಡುವುದು ಮೋದಿ ಸರ್ಕಾರದ ಆದ್ಯತೆಯಾಗಿದೆ.

ಈಗಾಗಲೇ ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದಿಸುವ ಕಂಪನಿಗಳಿಗೆ ಸಾಕಷ್ಟು ಪೋತ್ಸಾಹಧನ ನೀಡಲಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರವು ಜಾಗತಿಕ ದೈತ್ಯ ಕಂಪನಿಗಳ ಜೊತೆಗೆ ಸಂಪರ್ಕದಲ್ಲಿದ್ದು, ಆ ಕಂಪನಿಗಳ ಉತ್ಪಾದನಾ ಘಟಕವನ್ನು ಭಾರತದಲ್ಲೇ ಆರಂಭಿಸಲು ಆಹ್ವಾನ ನೀಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜರ್, ಚಾರ್ಜಿಂಗ್ ಸ್ಟೇಷನ್ ಗಳ ಮೇಲಿನ ಜಿಎಸ್‌ಟಿಯನ್ನು ಶೇ.18 ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದೆ.

ಜೊತೆಗೆ ಹೆಚ್ಚುವರಿಯಾಗಿ ಫೆಮಾ-ಇಂಡಿಯಾ ಸ್ಕೀಮ್ ನಡಿ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಬೆಲೆಯಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನ ಖರೀದಿ ಸಾಲದ ಮೇಲಿನ ಬಡ್ಡಿಯ ಪೈಕಿ 1.5 ಲಕ್ಷ ರೂಪಾಯಿವರೆಗೂ ಆದಾಯ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ. ಆದರೆ, ಎಲೆಕ್ಟ್ರಿಕ್ ವಾಹನಗಳ ಅಮದಿನ ಮೇಲೆ ಸುಂಕ ದುಬಾರಿ ಆಗಿದೆ ಎನ್ನುವುದು ಮಾತ್ರ ಟೆಸ್ಲಾ ಕಂಪನಿಯ ಸಿಇಓ ಎಲಾನ್ ಮಸ್ಕ್ ದೂರು. ಈ ದೂರಿಗೂ ಸ್ಪಂದಿಸಲು ಕೇಂದ್ರ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ಕೇಂದ್ರ ಸರಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಭಾರತದಲ್ಲಿ ಟೆಸ್ಲಾ ಕಾರ್ ಸಕ್ಸಸ್ ಆದರೇ, ಉತ್ಪಾದನಾ ಘಟಕ ಸ್ಥಾಪನೆ

ಭಾರತದಲ್ಲೆ ಟೆಸ್ಲಾ ಎಲೆಕ್ಟ್ರಿಕ್ ಕಾರ್ (Tesla Inc -TSLA.O) ಜೋಡಣೆ ಮಾಡುತ್ತೀರಾ ಎಂಬ ಫಾಲೋವರ್ಸ್ ಒಬ್ಬರ ಪ್ರಶ್ನೆಗೆ ಉತ್ತರಿಸಿದ ಎಲಾನ್ ಮಸ್ಕ್, ಒಂದು ವೇಳೆ ಭಾರತಕ್ಕೆ ಅಮದು ಆದ ಟೆಸ್ಲಾ ಕಾರ್ ಗಳು ಯಶಸ್ವಿಯಾದರೇ, ಆಗ ಟೆಸ್ಲಾ ಎಲೆಕ್ಟ್ರಿಕ್ ಕಾರ್ ಕಾರ್ಖಾನೆಯನ್ನ ಭಾರತದಲ್ಲಿ ಆರಂಭಿಸಬಹುದು ಎಂದಿದ್ದರು.

ಕೇಂದ್ರ ಸರ್ಕಾರದ ಅಧಿಕಾರಿಗಳು ಕೂಡ ಕಳೆದ ಶುಕ್ರವಾರ ಟೆಸ್ಲಾ ಕಂಪನಿಯು ಎಲೆಕ್ಟ್ರಿಕ್ ಕಾರ್ ಗಳ (electric cars) ಅಮದಿಗೆ ತಾತ್ಕಾಲಿಕ ಸುಂಕ ವಿನಾಯಿತಿ ನೀಡಬೇಕೆಂದು ಕೇಳಿದೆ ಎಂದಿದ್ದಾರೆ. ಆದರೆ, ಮೋದಿ ಸರ್ಕಾರವು ಈಗ ಸ್ಥಳೀಯವಾಗಿ ಕಾರ್ ಉತ್ಪಾದನೆಗೆ ಒತ್ತು ನೀಡಲು ನಿರ್ಧರಿಸಿದೆ. ಟೆಸ್ಲಾ ಕಂಪನಿಗಿಂತ ಮುಂಚೆ ಇನ್ನೂ ಕೆಲ ಐಷಾರಾಮಿ ಕಾರ್ ಕಂಪನಿಗಳು ಕೂಡ ಅಮದು ಕಾರ್ ಗಳ ಮೇಲಿನ ಸುಂಕ ಕಡಿಮೆ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದವು. ಆದರೆ, ಇದಕ್ಕೆ ಸರ್ಕಾರ ಆಗಲೂ ಒಪ್ಪಿರಲಿಲ್ಲ. ಟೆಸ್ಲಾ ಕಂಪನಿಯು ಕಾರ್ ಅಮದು ಮೇಲೆ ಶೇ.40 ರಷ್ಟು ಅಮದು ಸುಂಕ ಕಡಿತ ಮಾಡಬೇಕೆಂದು ಕೇಳುತ್ತಿದೆ.

ಸದ್ಯ ಭಾರತದಲ್ಲಿ 30 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆ ಇರುವ ವಿದೇಶಿ ಕಾರ್ ಗಳ ಮೇಲೆ ಶೇ.60 ರಷ್ಟು ಅಮದು ಸುಂಕ ವಿಧಿಸಲಾಗುತ್ತಿದೆ. 30ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆ ಇರುವ ವಿದೇಶಿ ಕಾರ್ ಗಳ ಮೇಲೆ ಶೇ.100 ರಷ್ಟು ಅಮದು ಸುಂಕ ವಿಧಿಸಲಾಗುತ್ತಿದೆ.

ಟೆಸ್ಲಾ ಕಂಪನಿಯ ವೆಬ್ ಸೈಟ್ ಪ್ರಕಾರ, ಸದ್ಯಕ್ಕೆ ಟೆಸ್ಲಾ ಮಾಡೆಲ್-3ಸ್ಟಾಂಡರ್ಡ್ ರೇಂಜ್ ಪ್ಲಸ್ ಕಾರ್ ಮಾತ್ರ 30 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆ ಹೊಂದಿದೆ. ಕೇಂದ್ರ ಹೆದ್ದಾರಿ, ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಕೂಡ ಇತ್ತೀಚೆಗೆ ಮಾತನಾಡುತ್ತಾ, ಟೆಸ್ಲಾ ಕಂಪನಿಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಕಾರ್ಖಾನೆ ಆರಂಭಿಸಲು ಒಳ್ಳೆಯ ಅವಕಾಶ ಇದೆ ಎಂದಿದ್ದರು. ಟೆಸ್ಲಾ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಮಾಡುವುದಾದರೇ, ಕೇಂದ್ರ ಸರ್ಕಾರ ಪೋತ್ಸಾಹ ಧನ ನೀಡಲು ಸಿದ್ದವಾಗಿದೆ, ಇದರಿಂದ ಎಲೆಕ್ಟ್ರಿಕ್ ಕಾರ್ ಉತ್ಪಾದನಾ ವೆಚ್ಚ ಚೀನಾಗಿಂತ ಭಾರತದಲ್ಲಿ ಕಡಿಮೆಯಾಗಲಿದೆ ಎಂದು ನಿತಿನ್‌ ಗಡ್ಕರಿ ಈ ಹಿಂದೆಯೇ ಹೇಳಿದ್ದಾರೆ.

ಟೆಸ್ಲಾ ಕಂಪನಿಯು ಈ ವರ್ಷದ ಜನವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ತನ್ನ ಕಂಪನಿಯನ್ನು ರಿಜಿಸ್ಟರ್ ಮಾಡಿದೆ. ಟೆಸ್ಲಾ ಇಂಡಿಯಾ ಮೋಟಾರ್ಸ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ತನ್ನ ಕಂಪನಿಯನ್ನು ಬೆಂಗಳೂರು ನಗರದ ವಿಳಾಸ ನೀಡಿ ರಿಜಿಸ್ಟರ್ ಮಾಡಿಸಿದೆ. ಬಳಿಕ ಕರ್ನಾಟಕದ ಹಂಗಾಮಿ ಸಿಎಂ ಯಡಿಯೂರಪ್ಪ ಕೂಡ ಟೆಸ್ಲಾ ಕಂಪನಿಯು ಕರ್ನಾಟಕದಲ್ಲಿ ತನ್ನ ಎಲೆಕ್ಟ್ರಿಕ್ ಕಾರ್ ಉತ್ಪಾದನಾ ಘಟಕ ಆರಂಭಿಸಲಿದೆ ಎಂದು ಮಾರ್ಚ್ ತಿಂಗಳಲ್ಲಿ ಟ್ವೀಟ್ ಮಾಡಿದ್ದರು.

(India government ready to reduce import duties on electric cars from Tesla Elon Musk analysis)

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು