Airtel: ಏರ್ಟೆಲ್ನಿಂದ 79 ರೂಪಾಯಿಯ ಹೊಸ ಪ್ಲಾನ್ ಪರಿಚಯ; ಎಷ್ಟೆಲ್ಲ ಬೆನಿಫಿಟ್ಗಳು!
ಏರ್ಟೆಲ್ನಿಂದ 79 ರೂಪಾಯಿಯ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಷ್ಕರಿಸಲಾಗಿದೆ. ಇದೀಗ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ಕರೆ ಸೌಲಭ್ಯವು ಗ್ರಾಹಕರಿಗೆ ದೊರೆಯುತ್ತದೆ. ಇದರ ಜತೆಗೆ ದುಪ್ಪಟ್ಟು ಡೇಟಾ ದೊರೆಯುತ್ತದೆ. “ಏರ್ಟೆಲ್ನ ಎಂಟ್ರಿ ಹಂತದ ರೀಚಾರ್ಜ್ಗಳ ಮೂಲಕವಾಗಿ ಗ್ರಾಹಕರು ತಮ್ಮ ಖಾತೆ ಬ್ಯಾಲೆನ್ಸ್ಗಳ ಬಗ್ಗೆ ಸಹ ಆಲೋಚನೆ ಮಾಡುವ ಅಗತ್ಯ ಇಲ್ಲದೆ ಸಂಪರ್ಕದಲ್ಲಿ ಇರಬಹುದು,” ಎಂದು ಟೆಲಿಕಾಂ ಆಪರೇಟರ್ ಆದ ಏರ್‌ಟೆಲ್ ತಿಳಿಸಿದೆ. ಅಲ್ಲಿಗೆ ಈಗ ಏರ್ಟೆಲ್ನ ಪ್ರೀಪೇಯ್ಡ್ ಪ್ಯಾಕ್ ರೂ. 79ರ ಸ್ಮಾರ್ಟ್ ರೀಚಾರ್ಜ್ನಿಂದ ಶುರುವಾಗುತ್ತದೆ. ಇದರಿಂದ […]
ಏರ್ಟೆಲ್ನಿಂದ 79 ರೂಪಾಯಿಯ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಷ್ಕರಿಸಲಾಗಿದೆ. ಇದೀಗ ನಾಲ್ಕು ಪಟ್ಟು ಹೆಚ್ಚು ಹೊರಹೋಗುವ ಕರೆ ಸೌಲಭ್ಯವು ಗ್ರಾಹಕರಿಗೆ ದೊರೆಯುತ್ತದೆ. ಇದರ ಜತೆಗೆ ದುಪ್ಪಟ್ಟು ಡೇಟಾ ದೊರೆಯುತ್ತದೆ. “ಏರ್ಟೆಲ್ನ ಎಂಟ್ರಿ ಹಂತದ ರೀಚಾರ್ಜ್ಗಳ ಮೂಲಕವಾಗಿ ಗ್ರಾಹಕರು ತಮ್ಮ ಖಾತೆ ಬ್ಯಾಲೆನ್ಸ್ಗಳ ಬಗ್ಗೆ ಸಹ ಆಲೋಚನೆ ಮಾಡುವ ಅಗತ್ಯ ಇಲ್ಲದೆ ಸಂಪರ್ಕದಲ್ಲಿ ಇರಬಹುದು,” ಎಂದು ಟೆಲಿಕಾಂ ಆಪರೇಟರ್ ಆದ ಏರ್‌ಟೆಲ್ ತಿಳಿಸಿದೆ. ಅಲ್ಲಿಗೆ ಈಗ ಏರ್ಟೆಲ್ನ ಪ್ರೀಪೇಯ್ಡ್ ಪ್ಯಾಕ್ ರೂ. 79ರ ಸ್ಮಾರ್ಟ್ ರೀಚಾರ್ಜ್ನಿಂದ ಶುರುವಾಗುತ್ತದೆ. ಇದರಿಂದ 200MB ಡೇಟಾ, 64 ರೂಪಾಯಿ ಮೌಲ್ಯದ ಟಾಕ್ ಟೈಮ್ ಸಿಗುತ್ತದೆ. ಈ ಪ್ಲಾನ್ನ ವ್ಯಾಲಿಡಿಟಿ 28 ದಿನಗಳು ಇರುತ್ತದೆ. ಇದರೊಂದಿಗೆ ಏರ್ಟೆಲ್ನಿಂದ 49 ರೂಪಾಯಿಯ ಎಂಟ್ರಿ ಲೆವೆಲ್ನ ಪ್ರೀಪೇಯ್ಡ್ ಪ್ಲಾನ್ ಕೊನೆಗೊಳಿಸಲಾಗಿದೆ.
ಈ 49 ರೂಪಾಯಿಯ ಪ್ಲಾನ್ನಲ್ಲಿ 100MB ಡೇಟಾ ಮತ್ತು 38.52 ರೂಪಾಯಿ ಮೌಲ್ಯದ ಟಾಕ್ ಟೈಮ್ ದೊರೆಯುತ್ತಿತ್ತು. 100MB ಡೇಟಾ ಮಗಿದ ಮೇಲೆ ಪ್ರತಿ ಒಂದು ಎಂಬಿ ಡೇಟಾಗೆ 0.50ರಷ್ಟು ಶುಲ್ಕ ಬೀಳುತ್ತಿತ್ತು. ಈ ಪ್ಲಾನ್ ಕೂಡ 28 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತಿತ್ತು. ಅಂದಹಾಗೆ ಹೊಸ ಪ್ಲಾನ್ ಜುಲೈ 29ನೇ ತಾರೀಕಿನಿಂದ ಜಾರಿಗೆ ಬರುತ್ತದೆ.
ಇನ್ನು ಈಚೆಗಷ್ಟೇ ಕಂಪೆನಿಯಿಂದ 456 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ ಅನ್ನು ಆರಂಭಿಸಲಾಗಿದೆ. ಅದು 50ಜಿಬಿ ಡೇಟಾದೊಂದಿಗೆ ಬರುತ್ತದೆ. ಅನಿಯಮಿತ ವಾಯ್ಸ್ ಕಾಲಿಂಗ್, ಪ್ರತಿ ದಿನ 100 ಎಸ್ಸೆಮ್ಮೆಸ್ ದೊರೆಯುತ್ತದೆ. ವ್ಯಾಲಿಡಿಟಿ 60 ದಿನಗಳ ಕಾಲ ಇರುತ್ತದೆ. ಇಲ್ಲಿ ಗೊತ್ತಾಗಬೇಕಾದದ್ದು ಏನೆಂದರೆ, ದಿನಕ್ಕೆ ಇಷ್ಟೇ ಡೇಟಾ ಮಿತಿ ಎಂಬುದೇನೂ ಇಲ್ಲ. ಆದ್ದರಿಂದ ಒಂದು ದಿನದಲ್ಲಿ ಎಷ್ಟು ಡೇಟಾ ಬೇಕೋ ಅಷ್ಟನ್ನು ಬಳಸಬಹುದು. ಈ ಪ್ಲಾನ್ನಲ್ಲಿ ಒಂದು ತಿಂಗಳು ಅಮೆಜಾನ್ ಪ್ರೈಮ್ ವಿಡಿಯೋ ಮೊಬೈಲ್ ಎಡಿಷನ್ಗೆ ಉಚಿತ ಆಕ್ಸೆಸ್ ದೊರೆಯುತ್ತದೆ. 456 ರೂಪಾಯಿಯ ಪ್ರೀಪೇಯ್ಡ್ ಪ್ಲಾನ್ನಲ್ಲಿ ಏರ್‌ಟೆಲ್ ಥ್ಯಾಂಕ್ಸ್ ಅನುಕೂಲಗಳಾದ ಏರ್‌ಟೆಲ್ ಎಕ್ಸ್ಟ್ರೀಮ್ ಪ್ರೀಮಿಯಂ, ಉಚಿತ ಹಲೋಟ್ಯೂನ್ಸ್, ವಿಂಕ್ ಮ್ಯೂಸಿಕ್, ಶಾ ಅಕಾಡೆಮಿ ಒಂದು ವರ್ಷಕ್ಕೆ, ಅಪೊಲೋ 24/7 ಸರ್ಕಲ್, 100 FASTag ಕ್ಯಾಶ್ಬ್ಯಾಕ್ ದೊರೆಯುತ್ತದೆ.
ಇದನ್ನೂ ಓದಿ: Airtel Black Vs Jio Fiber: ಏರ್‌ಟೆಲ್ ಬ್ಲ್ಯಾಕ್ ವರ್ಸಸ್ ಜಿಯೋ ಫೈಬರ್ ಮಧ್ಯೆ ಭರ್ಜರಿ ಪೈಪೋಟಿ; ನಿಮ್ಮ ಆಯ್ಕೆ ಯಾವುದು?
(Airtel Has Launched New Mobile Prepaid Plan Of Rs 79 Here Is The Details)